Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್‌ನಲ್ಲಿ ಮದುವೆ ಮನೆ ರುಚಿಯ ಕ್ಯಾಪ್ಸಿಕಂ ಗ್ರೇವಿ ಮಾಡಿ: ಮಾಡೋದು ಎಷ್ಟು ಸುಲಭ ಗೊತ್ತಾ?
ಮನೆಯಲ್ಲಿ ವಿಶೇಷ ಅಡುಗೆ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಅಂಶ. ಅದರಲ್ಲೂ ವಿಶೇಷವಾಗಿ ಮದುವೆ ಮನೆಯಂತಹ ಶುಭ ಸಮಾರಂಭಗಳಲ್ಲಿ ಮಾಡಿ ಸವಿಯುವ ಖಾದ್ಯಗಳನ್ನು ಮನೆಯಲ್ಲೇ ಸವಿಯುವುದು ಬಹಳ ಇಷ್ಟವಾಗುತ್ತೆ. ಇಂತಹ ಖಾದ್ಯಗಳ ಪೈಕಿ ನಾವಿಂದು ಮನೆಯಲ್ಲಿ ಮಾಡಿ ಸವಿಯಬಹುದಾದ ಕ್ಯಾಪ್ಸಿಕಂ ಗ್ರೇವಿ ಮಾಡುವ ಕುರಿತು ತಿಳಿಯೋಣ.
ನೀವು ಸಹ ಮನೆಯಲ್ಲಿ ಹಲವು ತರಕಾರಿಗಳಿಂದ ಮಾಡುವ ಗ್ರೇವಿ ಸವಿದಿರುತ್ತೀರಿ. ಅದರಲ್ಲೂ ಊಟ ಹಾಗೂ ತಿಂಡಿಯ ಜೊತೆಗೆ ಎಲ್ಲಾ ವಿಧವಾದ ತರಕಾರಿಯಿಂದಲೂ ಗ್ರೇವಿ ಮಾಡಿರುತ್ತೀರಿ. ಆದ್ರೆ ನಾವಿಂದು ಕ್ಯಾಪ್ಸಿಕಂನಿಂದ ಮಾಡುವ ಅದ್ಭುತ ರುಚಿಯ ಗ್ರೇವಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ವಿಶೇಷವಾಗಿ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಿ ಮುಗಿಸಬಹುದಾದ ಖಾದ್ಯ ಇದಾಗಿದೆ.

ಕುಕ್ಕರ್‌ನಲ್ಲಿ ಕಡಿಮೆ ಸಮಯದಲ್ಲಿಯೇ ಈ ಕ್ಯಾಪ್ಸಿಕಂ ಗ್ರೇವಿ ಮಾಡಬಹುದು. ಇದು ಚಪಾತಿ, ದೋಸೆ, ಪರೋಟ, ಪೂರಿ ಹೀಗೆ ಯಾವುದೇ ತಿಂಡಿಯ ಜೊತೆಗೆ ಮತ್ತು ಊಟದ ಜೊತೆಗೆ ಸವಿಯಲು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಕ್ಯಾಪ್ಸಿಕಂ ಗ್ರೇವಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನ ಹಾಗೂ ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್‌ನಲ್ಲಿ ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾಗುವ ವಸ್ತುಗಳು
- ಕ್ಯಾಪ್ಸಿಕಂ- 4
- ಈರುಳ್ಳಿ
- ಟೊಮೆಟೋ
- ಕಸುರಿ ಮೇತಿ
- ಸೋಂಪು ಕಾಳು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಮೊಸರು
- ಖಾರದ ಪುಡಿ
- ಧನಿಯ ಪುಡಿ
- ಗರಂ ಮಸಾಲ
- ಅರಿಶಿಣ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಕುಕ್ಕರ್‌ನಲ್ಲಿ ಕ್ಯಾಪ್ಸಿಕಂ ಗ್ರೇವಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 4 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಕ್ಯಾಪ್ಸಿಕಂ ಗ್ರೇವಿಗೆ ಸ್ವಲ್ಪ ಹೆಚ್ಚಾಗಿಯೇ ಎಣ್ಣೆ ಬಳಸಿ. ಈಗ ಇದಕ್ಕೆ ಕಸೂರಿ ಮೇತಿ, ಸೋಂಪು ಕಾಳು, ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ನಂತರ ಹೆಚ್ಚಿಕೊಂಡಿರುವ 4 ಕ್ಯಾಪ್ಸಿಕಂ ಸಹ ಹಾಕಿ ಉಪ್ಪು ಹಾಕಿ 3ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿ.
ಇದಾದ ಬಳಿಕ ಖಾರದ ಪುಡಿ, ಧನಿಯ ಪುಡಿ, ಗರಂ ಮಸಾಲೆ, ಅರಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ನೀರು ಹಾಕಿ ಬಿಡಿ. ಈಗ ಒಂದು ಮಿಕ್ಸಿ ಜಾರ್‌ಗೆ 4 ಟೊಮೆಟೋ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿಕೊಂಡು ಅದನ್ನು ಕುಕ್ಕರ್‌ಗೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ 3 ಸ್ಪೂನ್ ಮೊಸರು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ.
ನಂತರ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಯಲು ಬಿಡಬೇಕು. ಇಂದು ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದನ್ನು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ರುಚಿ ನೋಡಿಕೊಂಡು ಸವಿಯಲು ನೀಡಿ. ಇಷ್ಟಾದರೆ ಸುಲಭದ ಕ್ಯಾಪ್ಸಿಕಂ ಗ್ರೇವಿ ಸಿದ್ದವಾಗುತ್ತೆ ನೀವು ಕೂಡ ಇದನ್ನು ಮಾಡಿ ನೋಡಿ. ಎಲ್ಲಾ ಊಟದ ಜೊತೆಗೂ ಇದು ಅದ್ಭುತವಾಗಿರುತ್ತೆ. ಇದರ ಗ್ರೇವಿಯ ರುಚಿಗೆ ಬಹಳ ಮಂದಿ ಮನಸೋಲೋದು ಖಚಿತ. ರೊಟ್ಟಿ ಹಾಗೂ ಚಪಾತಿಯೊಂದಿಗೆ ಸವಿಯಲು ಬಹಳ ರುಚಿಕರವಾಗಿರುತ್ತೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ರೀತಿಯ ಮದುವೆ ಮನೆ ಖಾದ್ಯದಂತೆ ಈ ಗ್ರೇವಿ ಮಾಡಿ ನೋಡಿ.



Click it and Unblock the Notifications