Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಲೆನಾಡು ಸ್ಪೆಷಲ್! ಕ್ರಿಸ್ಪಿ & ಹೆಲ್ದಿ ಹಲಸಿನ ವಡೆ.. ಮಳೆಗಾಲಕ್ಕೆ ಸೂಪರ್ ಸ್ನ್ಯಾಕ್
ನೀವು ಹಲಸಿನ ಹಣ್ಣಿನ ಪಾಯಸ, ಕೇಸರಿ ಬಾತ್, ಕರಿ ಮತ್ತು ಸಿಹಿ ತಿಂಡಿ ತಿಂದಿರುತ್ತೀರಿ. ಈ ಟೇಸ್ಟಿ ಮತ್ತು ಹೆಲ್ದಿ ಸ್ನ್ಯಾಕ್ಸ್ ತಿಂದಿದ್ದೀರಾ? ಸಂಜೆ ಒಂದು ಕಪ್ ಬಿಸಿ ಚಹಾದೊಂದಿಗೆ ಸವಿಯಲು ಇದು ಹೇಳಿಮಾಡಿಸಿದ ತಿಂಡಿ. ಹೌದು, ನಾವು ಹೇಳುತ್ತಿರುವುದು ಹಲಸಿನ ಹಣ್ಣಿನ ವಡೆ ಬಗ್ಗೆ (Jackfruit seed vada). ಹೌದು, ಹಲಸಿನ ಹಣ್ಣಿನ ಅಥವಾ ಬೀಜದ ವಡೆ ಒಂದು ವಿಭಿನ್ನವಾದ ತಿಂಡಿಯಾಗಿದೆ. ಸಂಜೆ ಟೈಮ್ ಸ್ನ್ಯಾಕ್ಸ್ ಆಗಿ ಸವಿಯಲು ಇದು ಹೇಳಿಮಾಡಿಸಿದಂತಿದೆ. ಹಲಸಿನ ಬೀಜಗಳನ್ನು ಬಳಸಿ ವಡೆ ತಯಾರಿಸುವುದು ಕೊಂಚ ಹೊಸ ಅನುಭವ ನೀಡಬಹುದು. ಆದರೆ, ಇದರ ಟೇಸ್ಟ್ ನಿಮಗೆ ಖಂಡಿತ ಇಷ್ಟವಾಗುತ್ತದೆ. ಹಾಗಿದ್ರೆ, ಹಲಸಿನ ಬೀಜದಿಂದ ರುಚಿಕರವಾದ ವಡೆ ತಯಾರಿಸುವ ವಿಧಾನವನ್ನು (Jackfruit seed vada recipe) ತಿಳಿದುಕೊಳ್ಳೋಣ ಬನ್ನಿ.
ಸೀಸನ್‌ಗೆ ತಕ್ಕಂತೆ ಸಿಗುವ ಹಣ್ಣು, ತರಕಾರಿಗಳನ್ನು ಬಳಸಿ ಅಡುಗೆ ಮಾಡಿ ಸವಿಯುವುದೇ ಒಂದು ಖುಷಿ. ಹಲಸಿನ ಹಣ್ಣು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಇದು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಬಿ ಜೀವಸತ್ವಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿದೆ. ಹಲಸಿನ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫೈಬರ್, ಪೊಟ್ಯಾಸಿಯಮ್, ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಖನಿಜಾಂಶಗಳು ಹೇರಳವಾಗಿವೆ. ಹೀಗಾಗಿ, ಹಲಸಿನ ಹಣ್ಣು ಮತ್ತು ಅದರ ಬೀಜಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.

ಹಲಸಿನ ಹಣ್ಣಿನ ವಡೆಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
ಹಲಸಿನ ಹಣ್ಣಿನ ಅಥವಾ ಹಲಸಿನಕಾಯಿ ವಡೆ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಈ ಕೆಳಗಿನಂತಿವೆ.
• ಹಲಸಿನ ಹಣ್ಣಿನ ಬೀಜ
• ಈರುಳ್ಳಿ - ಸ್ವಲ್ಪ
• ಬೆಳ್ಳುಳ್ಳಿ - 7 ಎಸಳು
• ಸೋಂಪು - 1 ಚಮಚ
• ಕೆಂಪು ಮೆಣಸಿನಕಾಯಿ - 5
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಜೀರಿಗೆ - ಸ್ವಲ್ಪ
• ಶುಂಠಿ - ಸ್ವಲ್ಪ
• ಹಸಿ ಮೆಣಸಿನಕಾಯಿ - 2
• ರುಚಿಗೆ ತಕ್ಕಷ್ಟು ಉಪ್ಪು

ಹಲಸಿನ ವಡೆ ಮಾಡುವ ವಿಧಾನ
ಮೊದಲಿಗೆ, ಹಲಸಿನ ಹಣ್ಣಿನ ಬೀಜಗಳನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಬಳಿಕ ಹಣ್ಣಿನ ಬೀಜಗಳನ್ನು ಕುಕ್ಕರ್‌ನಲ್ಲಿ ಹಾಕಿ ಐದು ವಿಜಲ್ ಬರುವವರೆಗೆ ಬೇಯಿಸಿ. ಬಳಿಕ, ಮಿಕ್ಸರ್ ಜಾರ್‌ನಲ್ಲಿ ಶುಂಠಿ, ಬೆಳ್ಳುಳ್ಳಿ, ಸೋಂಪು, ಕೆಂಪು ಮೆಣಸಿನಕಾಯಿ ಮತ್ತು ಬೇಯಿಸಿದ ಹಲಸಿನ ಹಣ್ಣಿನ ಬೀಜಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮಾಡಿದ ಹಲಸಿನ ಬೀಜದ ಪೌಡರ್ ಮತ್ತು ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಸ್ವಲ್ಪ ಸಮಯದ ಬಳಿಕ, ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಈಗ ತಯಾರಿಸಿದ ಹಿಟ್ಟನ್ನು ನಿಮಗೆ ಬೇಕಾದ ಆಕಾರದಲ್ಲಿ ತಟ್ಟಿ, ಕಾದ ಎಣ್ಣೆಯಲ್ಲಿ ಹಾಕಿ. ವಡೆಗಳು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿ. ಇಷ್ಟು ಮಾಡಿದರೆ, ರುಚಿಕರ ಮತ್ತು ಪೌಷ್ಟಿಕಾಂಶಭರಿತ ಹಲಸಿನ ಬೀಜದ ವಡೆ ತಿನ್ನಲು ಸಿದ್ಧ. ನೀವು ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಬಿಸಿ ಬಿಸಿಯಾದ ಹಲಸಿನ ವಡೆಯನ್ನು ಸವಿಯಬಹುದು.

ಮಕ್ಕಳಿಗೆ ಇಷ್ಟವಾಗುವ ಸ್ನ್ಯಾಕ್ಸ್
ನಿಮ್ಮ ಮಕ್ಕಳಿಗೆ ಸಂಜೆಯ ಸ್ನ್ಯಾಕ್ಸ್ ಆಗಿ ನೀಡಲು ಇದು ಅತ್ಯುತ್ತಮ ಆಯ್ಕೆ. ಟೊಮ್ಯಾಟೊ ಸಾಸ್ ಅಥವಾ ಹಸಿರು ಚಟ್ನಿ ಜೊತೆ ಸವಿಯಲು ರುಚಿಕರವಾಗಿತ್ತದೆ. ಹಲಸಿನ ಬೀಜಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ, ಹಲಸಿನ ಹಣ್ಣಿನ ಬೀಜಗಳನ್ನು ಎಸೆಯುವ ಬದಲು, ಅವುಗಳನ್ನು ಬಳಸಿ ರುಚಿಕರವಾದ ವಡೆಗಳನ್ನು ತಯಾರಿಸಿ ಸವಿಯಬಹುದು. ಇದು ಆರೋಗ್ಯಕ್ಕೂ ಹಿತ ಮತ್ತು ಟೇಸ್ಟ್‌ನಲ್ಲಿಯೂ ಸೂಪರ್. ಇದನ್ನು ಮಾಡುವುದು ತುಂಬಾ ಸುಲಭ. ಹಲಸಿನ ಸೀಸನ್ ಮುಗಿಯುವುದರ ಒಳಗೆ ಒಮ್ಮೆ ಟ್ರೈ ಮಾಡಿ.



Click it and Unblock the Notifications