Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಮಾಡಿ ತುಮಕೂರು ಸ್ಪೆಷಲ್ ಬೋಂಡಾ: ಮಾಡೋದು ಬಹಳ ಸುಲಭ!
ನೀವು ಸಂಜೆಯ ಸ್ನ್ಯಾಕ್ಸ್‌ಗೆ ಹಲವು ರೀತಿಯ ತಿಂಡಿ ಸವಿಯಲು ಇಷ್ಟಪಡುತ್ತೀರಿ. ಅದರಲ್ಲೂ ನಗರ ಪ್ರದೇಶದಲ್ಲಿ ವಾಸಿಸುವ ಮಂದಿ ಸಂಜೆ ಸಮಯದಲ್ಲಿ ಬಗೆ ಬಗೆಯ ಸ್ನ್ಯಾಕ್ಸ್ ಸವಿಯಲು ಮುಂದಾಗೋದು ನೋಡಬಹುದು. ಹೆಚ್ಚಾಗಿ ಬೋಂಡಾ, ಬಜ್ಜಿ, ವಡೆ, ಪಾನಿಪೂರಿ, ಮಸಾಲೆ ಪೂರಿ, ದೋಸೆ, ಗೋಬಿ, ನೂಡಲ್ಸ್, ಇಂತಹ ಮಸಾಲೆ ಭರಿತ ಖಾದ್ಯ ಸವಿಯೋಕೆ ಇಷ್ಟಪಡುತ್ತಾರೆ.
ಸಂಜೆ ಈ ಅಂಗಡಿಗಳ ಮುಂದೆ ಜನರು ಕಿಕ್ಕಿರಿದು ತುಂಬಿರುತ್ತಾರೆ ಕೂಡ. ಹಾಗೆ ಈ ಸ್ನ್ಯಾಕ್ಸ್‌ಗಳನ್ನು ಮನೆಯ ಊಟದ ಜೊತೆಗೆ ಸವಿಯಲು ಅಲ್ಲಿಂದಲೇ ಖರೀದಿಸಿ ತೆಗೆದುಕೊಂಡು ಹೋಗುವುದು ಕೂಡ ನೋಡಬಹುದು. ಇನ್ನು ಇದರಲ್ಲಿ ಹಲವು ಖಾದ್ಯಗಳನ್ನು ನಾವು ಮನೆಯಲ್ಲೆ ಮಾಡುತ್ತೇವೆ. ಅಂತಹ ಸ್ನ್ಯಾಕ್ಸ್‌ಗಳ ಪೈಕಿ ಈ ತುಮಕೂರು ಬೋಂಡಾ ಕೂಡ ಒಂದಾಗಿದೆ.

ತುಮಕೂರಿನ ಸ್ಪೆಷಲ್ ಬೋಂಡಾ ಇದಾಗಿದ್ದು, ಮಸಾಲೆ ಭರಿತ, ಘಮ ಘಮ ಎನ್ನುತ್ತೆ. ಊಟದ ಜೊತೆಗೆ ಅದ್ಭುತ ರುಚಿ ನೀಡುವ ಈ ಬೋಂಡಾ ಎಲ್ಲಾ ಕಡೆಯಲ್ಲೂ ಈಗ ಫೇಮಸ್. ಹೀಗಾಗಿ ನಾವಿಂದು ಊಟದ ಜೊತೆಗೆ ತಿಂಡಿಯ ಜೊತೆಗೆ ಹಾಗೆ, ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ರೀತಿ ಸವಿಯಲು ಈ ಬೋಂಡಾ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ತುಮಕೂರು ಬೋಂಡಾ ಮಾಡುವುದು ಹೇಗೆ?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ.
ತುಮಕೂರು ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕಡಲೆ ಹಿಟ್ಟು
- ಕರಿಬೇವು
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಅರಶಿಣ
- ಉಪ್ಪು
- ಸೋಡಾ
- ಚಾಟ್ ಮಸಾಲೆ
- ಎಣ್ಣೆ
ತುಮಕೂರು ಬೋಂಡಾ ಮಾಡುವುದು ಹೇಗೆ
ಮೊದಲು ಒಂದು ಪಾತ್ರೆಗೆ ಜರಡಿ ಹಿಡಿದಿಟ್ಟಿರುವ ಕಡಲೆ ಹಿಟ್ಟನ್ನು ಹಾಕಿಕೊಳ್ಳಿ. ಹಾಗೆ ಇದಕ್ಕೆ ಉಪ್ಪು, ಅಚ್ಚ ಖಾರದ ಪುಡಿ, ಚಾಟ್ ಮಸಾಲೆ, ಅಡುಗೆ ಸೋಡಾ, ಅರಶಿಣ ಹಾಕಿಕೊಂಡು ಮೊದಲಿಗೆ ಡ್ರೈ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಸಬ್ಬಸಿಗೆ ಸೊಪ್ಪನ್ನು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಹಾಗೆ ಒಂದು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಹಾಕಿ, ಹಾಗೆ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಹೆಚ್ಚಿರುವ ಹಸಿ ಮೆಣಸು, ಕರಿಬೇವಿನ ಸೊಪ್ಪು ಸಹ ಸಣ್ಣದಾಗಿ ಹೆಚ್ಚಿ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಗಟ್ಟಿಯಾಗಿರುವಂತೆ ಕಲಸಿಕೊಳ್ಳಬೇಕು.
ಹೀಗೆ ಹಿಟ್ಟು ರೆಡಿ ಮಾಡಿಕೊಳ್ಳುವಾಗಲೇ ಒಲೆ ಮೇಲೆ ಒಂದು ಬಾಣಲೆ ಇ ಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಹಿಟ್ಟು ತೆಗೆದುಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಬೋಂಡಾವನ್ನು ಬಿಟ್ಟುಕೊಳ್ಳಿ. ಚೆನ್ನಾಗಿ ಕರಿದುಕೊಂಡು ಎಣ್ಣೆ ಇಳಿಯಲು ಬಿಡಿ. ನಂತರ ಊಟದ ಜೊತೆಗೆ, ಸಂಜೆ ಸ್ನ್ಯಾಕ್ಸ್ ಆಗಿ ಸವಿಯಲು ನೀಡಿ. ಇದನ್ನು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ನೋಡಿ. ಹಾಗೆ ಮಕ್ಕಳಿಗೆ ಹಸಿ ಮೆಣಸು ಬಳಸದೆ ಮಾಡಿ ಸವಿಯಲು ನೀಡಬಹುದು. ಅದರ ರುಚಿಗೆ ಊಟ ಕೂಡ ಹೆಚ್ಚು ಮಾಡುತ್ತಾರೆ
ಹಾಗೆ ಮನೆಯಲ್ಲಿ ಯಾವುದಾದರು ಸಣ್ಣ ಪುಟ್ಟ ಶುಭ ಕಾರ್ಯವಿದ್ದರೆ, ಅತಿಥಿಗಳು ಬಂದಾಗಲೂ ಕೂಡ ಈ ಬೋಂಡಾ ಮಾಡಿ ಸವಿಯಬಹುದು. ಇದರ ಜೊತೆಗೆ ಹಸಿ ಮೆಣಸಿನಕಾಯಿ ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಗುತ್ತೆ.



Click it and Unblock the Notifications