Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಇಷ್ಟದ ಈ ಪಾಸ್ತಾ ರೆಸಿಪಿ ಮಾಡಿ.! ಎಷ್ಟು ಸುಲಭ ಗೊತ್ತಾ?
ಮಕ್ಕಳಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. ಮನೆಯಲ್ಲಿ ಮಕ್ಕಳಿಗೆ ಬೋರ್ ಆಗಬಾರದು ಎಂದು ನೀವು ಹಲವು ರೀತಿ ಕಸರತ್ತು ಮಾಡಿರುತ್ತೀರಿ. ಅದ್ರಲ್ಲೂ ಮಕ್ಕಳನ್ನು ಸಣ್ಣ ಪ್ರವಾಸ, ಶುಭ ಕಾರ್ಯದಲ್ಲಿ ಭಾಗಿಯಾಗುವಂತೆ ನೀವು ಕೂಡ ಮಾಡಿರುತ್ತೀರಿ. ಹಾಗೆ ಅವರನ್ನು ಮೊಬೈಲ್ ಬಳಕೆಯಿಂದ ಕೆಲ ಕಾಲ ದೂರ ಇಡಲು ಬಹಳ ಕಷ್ಟಪಟ್ಟಿರಬಹುದು. ಇನ್ನು ಅವರಿಗೆ ಮನೆಯಲ್ಲಿ ಯಾವುದಾದರು ವಿಶೇಷ ಖಾದ್ಯಗಳ ಮಾಡಿ ಕೊಡುವುದು ಕೂಡ ನಿಮ್ಮ ದೈನಂದಿನ ಕಾರ್ಯದಲ್ಲಿ ಒಂದಾಗಿರಬಹುದು.
ಅದರಲ್ಲೂ ನೀವು ಮಕ್ಕಳು ಇಷ್ಟಪಡುವಂತಹ ಪಾಸ್ತಾ ರೆಸಿಪಿ ಮಾಡಿ ನೋಡಿ. ಪಾಸ್ತಾ ಬಳಸಿ ಹಲವು ರೀತಿಯ ಖಾದ್ಯ ಮಾಡಬಹುದು ಎಂಬುದನ್ನು ನೀವು ಕೂಡ ತಿಳಿದಿರುತ್ತೀರಿ. ಪಾಸ್ತಾದಿಂದ ಮಾಡುವ ಪಾಯಸ, ಪಾಸ್ತಾ ಮಸಾಲೆ, ಪಾಸ್ತಾ ನೂಡಲ್ಸ್ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹಾಗೆ ಈ ಪಾಸ್ಥಾದ ಹಲವು ರೆಸಿಪಿಗಳು ನಿಮ್ಮ ಬಾಯಲ್ಲೂ ನೀರು ತರಿಸಬಹುದು. ಹಾಗಾದ್ರೆ ಈ ಪಾಸ್ತಾದಿಂದ ಮಾಡುವ ರುಚಿಕರ ರೆಸಿಪಿ ಕುರಿತು ನಾವಿಂದು ತಿಳಿದುಕೊಳ್ಳೋಣ.

ಪಾಸ್ತಾದಿಂದ ಮಾಡುವ ಹಲವು ಖಾದ್ಯಗಳ ಪೈಕಿ ಪಾಸ್ತಾ ಸಾಸ್ ರೆಸಿಪಿ ಬಹಳ ರುಚಿ ನೀಡಲಿದೆ, ಮಕ್ಕಳಿಗೆ ಇದನ್ನು ಸವಿಯಲು ನೀಡಿದರೆ ಅವರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗಾದ್ರೆ ಮನೆಯಲ್ಲೇ ಈ ಪಾಸ್ತಾ ಮಾಡಿ ಸವಿಯುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಾಸ್ತಾ ರೆಸಿಪಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಪಾಸ್ತಾ - 1 ಕಪ್
- ಬೆಳ್ಳುಳ್ಳಿ
- ಈರುಳ್ಳಿ - 1
- ಸಿಹಿ ಜೋಳ (ಬೇಯಿಸಿದ) - 1/2 ಕಪ್
- ಕ್ಯಾಪ್ಸಿಕಂ
- ಬೆಣ್ಣೆ
- ಮೈದಾ ಹಿಟ್ಟು
- ಹಾಲು
- ಕರಿಮೆಣಸಿನ ಪುಡಿ
- ತಾಜಾ ಕ್ರೀಮ್
- ಚೀಸ್
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಪಾಸ್ತಾ ರೆಸಿಪಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಯಲ್ಲಿ ನೀರು ಹಾಕಿ ಕುದಿಬರಲು ಬಿಡಿ. ನೀರು ಚೆನ್ನಾಗಿ ಕುದಿ ಬರುವಾಗ 1 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಪಾಸ್ತಾವನ್ನು ಕೂಡ ಹಾಕಿಕೊಳ್ಳಬೇಕು. ಪಾಸ್ತಾವನ್ನು ಚೆನ್ನಾಗಿ ಬೇಯಲು ಬಿಡಿ. ಈಗ ಪಾಸ್ತಾ ಮೆತ್ತಗಾದ ಬಳಿಕ ತೆಗೆದು ಅದರಿಂದ ನೀರು ಬೇರೆ ಮಾಡಿ ತಣ್ಣೀರಿನಲ್ಲಿ ತಕ್ಷಣ ಎರಡು ಬಾರಿ ತೊಳೆಯಬೇಕು. ಜರಡಿಯಲ್ಲಿಟ್ಟಾಗಲೇ ತಣ್ಣೀರು ಹಾಕಿ. ಇಲ್ಲದಿದ್ದರೆ ಒಂದಕ್ಕೊಂದು ಅಂಟಿಕೊಳ್ಳುತ್ತವೆ.
ನೀರು ಹಾಕಿದ ಬಳಿಕ ಪಾಸ್ತಾ ತೆಗೆದಿಟ್ಟುಕೊಳ್ಳಿ. ಈಗ ಒಲೆ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಬೆಳ್ಳುಳ್ಳಿ, ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ಅನಂತರ ಬೇಯಿಸಿದ ಜೋಳ, ಕ್ಯಾಪ್ಸಿಕಂ ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಉಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಎಲ್ಲಾ ಪದಾರ್ಥಗಳ ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈ ಅದೇ ಬಾಣಲೆಗೆ ಮತ್ತೆ ಎಣ್ಣೆ ಅಥವಾ ಬೆಣ್ಣೆ ಹಾಕಿಕೊಂಡು 1 ಸ್ಪೂನ್ ಮೈದಾ ಹಿಟ್ಟು, ಕಾಲು ಲೀಟರ್ ಹಾಲು ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡುತ್ತಾ ಕುದಿಬರಲು ಬಿಡಿ. ಇದು ಸ್ವಲ್ಪ ಗಟ್ಟಿಯಾಗಬೇಕು. ಹಿಟ್ಟಿನಂತೆ ಆದ ತಕ್ಷಣ ಇದಕ್ಕೆ ಪಾಸ್ತಾವನ್ನು ಹಾಕಿಕೊಳ್ಳಿ. ಹಾಗೆ ಫ್ರೈ ಮಾಡಿಕೊಂಡಿರುವ ತರಕಾರಿಗಳನ್ನು ಕೂಡ ಹಾಕಿಕೊಳ್ಳಿ. ಹಾಗೆ ಉಪ್ಪು ಸಹ ಹಾಕಿಕೊಂಡು ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ.
ಈಗ ಫ್ರೆಶ್ ಕ್ರೀಮ್, ಚೀಸ್ ಹಾಕಿಕೊಂಡು 1 ನಿಮಿಷ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ಪಾಸ್ತಾ ರೆಸಿಪಿ ರೆಡಿಯಾಗುತ್ತದೆ. ಮಕ್ಕಳಿಗೆ ಇದನ್ನು ಸವಿಯಲು ನೀಡಿದರೆ ಪದೇ ಪದೇ ಮಾಡಿಸಿಕೊಂಡು ಸವಿಯುವುದು ಖಚಿತ.



Click it and Unblock the Notifications