Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವರೆಕಾಳಿನ ಮಸಾಲೆ ಉಪ್ಪಿಟ್ಟು ಸವಿದರೆ ದಿನಾಲು ಇದನ್ನೇ ಕೇಳುತ್ತೀರಿ..! ಮಾಡೋದು ಹೇಗೆ?
ನೀವು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡುವುದು ಕಾಮನ್. ಹಾಗೆ ಹೋಟೆಲ್‌ಗಳಲ್ಲಿ ರವೆ ಉಪ್ಪಿಟ್ಟು ಆರ್ಡರ್ ಮಾಡಿ ಸವಿಯುವುದು ಸಹ ಬಹಳ ರುಚಿ ನೀಡಲಿದೆ. ಹಾಗೆ ಉಪ್ಪಿಟ್ಟನ್ನು ಹಲವು ರೀತಿಯಲ್ಲಿ ಹಲವು ಬಗೆಯ ರುಚಿಯಲ್ಲಿ ಮಾಡಿ ಸವಿದಿರುತ್ತೀರಿ. ಆದರೆ ಹಲವರಿಗೆ ಈ ಉಪ್ಪಿಟ್ಟು ರುಚಿ ಹಿಡಿಸುವುದಿಲ್ಲ. ಅವರು ಉಪ್ಪಿಟ್ಟನ್ನು ಇಷ್ಟಪಡುವುದಿಲ್ಲ.
ಉಪ್ಪಿಟ್ಟು ಮಾಡಿದರೆ ಎಲ್ಲರಿಗೂ ಇಷ್ಟವಾಗುವಂತೆ ಮಾಡಿ. ರವೆ ಬಳಸಿ ಮಸಾಲೆಗಳ ಹಾಕಿ ಹಾಗೆ ಒಂದಿಷ್ಟು ತರಕಾರಿಗಳ ಮಿಶ್ರಣದ ಜೊತೆಗೆ ಮಾಡುವಂತಹ ಉಪ್ಪಿಟ್ಟು ಎಲ್ಲರಿಗೂ ಇಷ್ಟವಾಗುತ್ತದೆ. ಕೆಲವರಿಗೆ ಹುಡಿ ಹುಡಿಯಾಗಿ ಮಾಡುವ ಉಪ್ಪಿಟ್ಟು ಅಂದರೆ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಆದ್ರೆ ಯಾವ ರೀತಿ ಈ ಉಪ್ಪಿಟ್ಟು ಮಾಡಬೇಕು ಎಂಬುದನು ನಿಮಗೆ ತಿಳಿದಿದ್ಯಾ?

ಹೀಗಾಗಿ ನಾವಿಂದು ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ಅತ್ಯಂತ ರುಚಿಕರವಾದ ಅವರೆಕಾಳು ಮಸಾಲೆ ಉಪ್ಪಿಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ಮಸಾಲೆ ಉಪ್ಪಿಟ್ಟಿನಲ್ಲಿ ಬಳಸಲಾಗುವ ರುಚಿ ರುಚಿಯ ಮಸಾಲೆ ಹಾಗೂ ತರಕಾರಿಯು ಅದನ್ನು ಮತ್ತಷ್ಟು ರುಚಿಯಾಗಿಸುವ ಜೊತೆಗೆ ಉಪ್ಪಿಟ್ಟು ಹೆಸರು ಕೇಳಿದಾಗ ಮೂಗು ಮುರಿಯುವವರು ಕೂಡ ಇಷ್ಟಪಟ್ಟು ಸವಿಯುತ್ತಾರೆ.
ಹಾಗಾದ್ರೆ ಈ ಅವರೆಕಾಳಿನ ಉಪ್ಪಿಟ್ಟು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅವರೆಕಾಳಿನ ಮಸಾಲೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬನ್ಸಿ ರವೆ -200 ಗ್ರಾಂ
- ಅವರೆಕಾಳು-100 ಗ್ರಾಂ
- ಈರುಳ್ಳಿ-2
- ಸಾಸಿವೆ
- ಜೀರಿಗೆ
- ದಾಲ್ಚಿನ್ನಿ
- ಲವಂಗ
- ಗೋಡಂಬಿ
- ಶುಂಠಿ
- ಹಸಿರು ಮೆಣಸಿನಕಾಯಿ
- ಕರಿಬೇವು
- ಕ್ಯಾರೆಟ್
- ಬೀನ್ಸ್
- ಸಬ್ಬಸಿಗೆ ಸೊಪ್ಪು
- ಕೊತ್ತಂಬರಿ ಸೊಪ್ಪು
- ಗರಂ ಮಸಾಲ ಪುಡಿ
- ತುಪ್ಪ
- ಉಪ್ಪು
- ಎಣ್ಣೆ
ಅವರೆಕಾಳಿನ ಮಸಾಲೆ ಉಪ್ಪಿಟ್ಟು ಮಾಡುವುದು ಹೇಗೆ?
ಮೊದಲು ಬಾಣಲೆ ಇಟ್ಟು ಅದಕ್ಕೆ ರೆವೆ ಹಾಕಿಕೊಂಡು ಒಂದು ಸ್ಪೂನ್ ತುಪ್ಪ ಕೂಡ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. ಘಮ ಘಮ ಎನ್ನುವಂತೆ ಅದರ ಸುವಾಸನೆ ಮನೆ ತುಂಬಿಕೊಳ್ಳಬೇಕು. ಅಷ್ಟರಮಟ್ಟಿಗೆ ಹುರಿದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ ಜೀರಿಗೆ, ಚಕ್ಕೆ, ಲವಂಗ, ಗೋಡಂಬಿ, ಈರುಳ್ಳಿ, ಹಸಿ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಹಾಗೆ ಕತ್ತರಿಸಿಕೊಂಡ ಕ್ಯಾರೆಟ್, ಬೀನ್ಸ್, ಬಟಾಣಿ ಇದ್ದರೂ ಹಾಕಿ. ಹಾಗೆ ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿಕೊಳ್ಳಿ. ಈಗ ಮೊದಲೇ ಒಂದು ಪಾತ್ರೆಯಲ್ಲಿ ಬೇಯಿಸಿಕೊಂಡಿದ್ದ ಅವರೆಕಾಳನ್ನು ಸಹ ಇದೇ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಉಪ್ಪು, ಗರಂ ಮಸಾಲೆ ಹಾಕಿ 3 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
ಈಗ ಅಳತೆ ಕಪ್‌ನಲ್ಲಿ ನೀರನ್ನು ಹಾಕಿಕೊಳ್ಳಬೇಕು. 1 ಕಪ್ ರವೆಗೆ 2 ಕಪ್ ನೀರು ಬಳಸಬೇಕು. ನೀರು ಹಾಕಿ ಕುದಿಬರಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ರವೆ ಹಾಕಿಕೊಂಡು ಉರಿ ಸಣ್ಣಗೆ ಮಾಡಿಕೊಳ್ಳಿ. ಆಗಾಗ ತಿರುಗಿಸಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ. ನೀರು ಒಣಗುತ್ತಾ ಬರುವಾಗ ತಿರುಗಿಸುತ್ತಾ ಇರಿ. 10 ನಿಮಿಷದಲ್ಲಿ ಉಪ್ಪಿಟ್ಟು ರೆಡಿಯಾಗುತ್ತೆ. ನೀವು ಕೂಡ ಇದನ್ನು ಮನೆಯಲ್ಲಿ ಈ ಮಸಾಲೆ ಉಪ್ಪಿಟ್ಟು ಟ್ರೈ ಮಾಡಿ ನೋಡಿ. ಇದು ಉಪ್ಪಿಟ್ಟು ಇಷ್ಟವಿಲ್ಲ ಅನ್ನೋದು ಕೂಡ ಸವಿಯಲು ಮುಂದಾಗುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರು ಕೂಡ ಈ ಮಸಾಲೆ ಉಪ್ಪಿಟ್ಟಿನ ರುಚಿಗೆ ಫಿದಾ ಆಗುತ್ತಾರೆ.



Click it and Unblock the Notifications