Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅರ್ಧ ಕಪ್ ಕಡಲೆ ಬೇಳೆ- ಆಲೂಗಡ್ಡೆಯಿಂದ ಮಾಡಿ ಸೂಪರ್ ಮಸಾಲ ಪೂರಿ..! ಹೇಗೆ ಗೊತ್ತಾ?
ಸಂಜೆ ಸಮಯದಲ್ಲಿ ಮಸಾಲ ಪೂರಿ, ಪಾನಿ ಪೂರಿ ಸವಿಯೋದು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬೀದಿ ಬೀದಿಯಲ್ಲಿ ಜನ ಸರದಿ ಸಾಲಿನಲ್ಲಿ ನಿಂತು ಈ ಮಸಾಲೆಗಳ ಸವಿಯುವುದನ್ನು ನಾವು ನೋಡಿದ್ದೇವೆ. ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಅಷ್ಟೇ ಗಾಡಿಗಳು ಸಹ ಇವೆ. ಮಕ್ಕಳು ಹಿರಿಯರು ಎನ್ನದೆ ಈ ಮಸಾಲ ಪೂರಿ, ಪಾನಿ ಪೂರಿ ಸವಿಯುತ್ತಾರೆ. ಆದ್ರೆ ಇತ್ತೀಚಿಗೆ ಈ ಬೀದಿ ಬದಿಯಲ್ಲಿ ಆಹಾರ ಸವಿಯುವುದು ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಎಂಬುದು ಕೂಡ ಆತಂಕ ಹುಟ್ಟಿಸುವಂತಿದೆ.
ಹೀಗಾಗಿ ಈಗ ಬೀದಿ ಬದಿ ಆಹಾರ ಸೇವನೆಗೆ ಜನರು ಭಯ ಪಡುವಂತಹ ಸ್ಥಿತಿ ಇದೆ. ಹೀಗಾಗಿ ಈಗ ಕೆಲವರು ಮನೆಯಲ್ಲಿ ಮಾಡಿ ಸವಿಯಲು ಮುಂದಾಗುತ್ತಾರೆ, ಅಲ್ಲದೆ ಅಂಗಡಿಗಳಲ್ಲಿ ಈಗ ರೆಡಿಮೇಡ್ ಪಾನಿಪೂರಿಗಳು ಸಹ ಸಿಗುತ್ತವೆ, ಅಲ್ಲಿಂದ ತಂದು ಮನೆಯಲ್ಲಿ ಮಾಡಿ ಸವಿಯುವುದನ್ನು ನಾವು ನೋಡಬಹುದು. ಏಕೆಂದರೆ ಪೂರಿಯನ್ನು ಅತ್ಯಂತ ವಿಲಕ್ಷಣವಾಗಿ ಮಾಡುತ್ತಾರೆ ಎಂಬ ಆರೋಪ ಇರುವುದರಿಂದ ಈಗ ಬೀದಿ ಬದಿಯಲ್ಲಿ ಸವಿಯುವ ಬದಲಾಗಿ ಮನೆಯಲ್ಲೇ ಮಾಡಿ ತಿನ್ನಲು ಮುಂದಾಗುತ್ತಾರೆ.

ಹೀಗಾಗಿ ನಾವು ಸಹ ಇಂದು ಸುಲಭವಾಗಿ ಅರ್ಧ ಕಪ್ ಕಡಲೆ ಬೇಳೆ ಬಳಸಿಕೊಂಡು ಮನೆಯಲ್ಲಿ ಅತ್ಯಂತ ಸರಳ ವಿಧಾನದಲ್ಲಿ ಮಸಾಲ ಪೂರಿ ಅಂತೆಯೇ ಹೊಸದಾದ ಚಾಟ್ ಮಾಡುವುದನ್ನು ತಿಳಿದುಕೊಳ್ಳೋಣ. ಈ ಚಾಟ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಲೋಣ.
ಮಸಾಲ ಪೂರಿಯಂತಹ ಚಾಟ್ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ - 3
- ಈರುಳ್ಳಿ
- ಟಮೆಟೋ
- ಕೆಡಲೆ ಬೇಳೆ
- ಉಪ್ಪು
- ಬೆಳ್ಳುಳ್ಳಿ
- ಜೀರಿಗೆ
- ಚಕ್ಕೆ
- ಲವಂಗ
- ಹಸಿ ಮೆಣಸು
- ಶುಂಠಿ
- ಚಾಟ್ ಮಸಾಲೆ- ಅರ್ಧ ಸ್ಪೂನ್
- ಗರಂ ಮಸಾಲೆ- ಅರ್ಧ ಸ್ಪೂನ್
- ಖಾರಾ ಸೇವ್
- ಕ್ಯಾರೆಟ್
- ಕೊತ್ತಂಬರಿ ಸೊಪ್ಪು
ಮಸಾಲ ಪೂರಿಯಂತಹ ಚಾಟ್ ಮಾಡುವುದು ಹೇಗೆ?
ಒಂದು ಬೌಲ್‌ಗೆ ಅರ್ಧ ಕಪ್ ಕಡಲೆ ಬೇಳೆ ಹಾಕಿ ಚೆನ್ನಾಗಿ ತೊಳೆದುಕೊಳ್ಳಿ, ನಂತರ ಒಂದು ಕುಕ್ಕರ್‌ಗೆ ಕಡಲೆ ಬೇಳೆ ಹಾಕಿ ಅದಕ್ಕೆ ನೀರು ಹಾಕಿಕೊಂಡು ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಈ ಕುಕ್ಕರ್‌ಗೆ ಹಾಕಿಕೊಳ್ಳಿ. 4 ಕಪ್ ನೀರು ಹಾಕಿದರೆ ಉತ್ತಮ. ಹಾಗೆ ಸ್ವಲ್ಪ ಉಪ್ಪು ಹಾಕಿ 4 ಸೀಟಿ ಹೊಡೆಯಲು ಬಿಡಿ. ನಂತರ ತಣ್ಣಗಾದ ಬಳಿಕ ಕುಕ್ಕರ್ ಮುಚ್ಚಳ ತೆಗೆಯಿರಿ.
ಈಗ ಬೆಂದಿರುವ ಆಲೂಗಡ್ಡೆಯನ್ನು ತೆಗೆದು ಬದಿಗಿಟ್ಟುಕೊಳ್ಳಿ. ಹಾಗೆ ಆಲೂಗಡ್ಡೆಯನ್ನು ಚೆನ್ನಾಗಿ ಕೈಯಿಂದ ಪುಡಿ ಮಾಡಿಕೊಳ್ಳಿ. ಗಂಟುಗಳು ಇಲ್ಲದಂತೆ ಪುಡಿ ಮಾಡಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಚಕ್ಕೆ, ಲವಂಗ, ಜೀರಿಗೆ, ಈರುಳ್ಳಿ ಹಾಕಿ ಮಿಕ್ಸ್ ಮಾಡಿ. ಬಳಿಕ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಕಾಳು ಮೆಣಸು, ಟೊಮೆಟೋ ಹಾಕಿ ಫ್ರೈ ಮಾಡಿ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ.
ಈ ಮಸಾಲೆ ತಣ್ಣಗಾದ ಬಳಿಕ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಇದಕ್ಕೆ ಕೊತ್ತಂಬರಿ, ಪುದಿನ ಸೊಪ್ಪು ಹಾಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ಉಬ್ಬಿಕೊಳ್ಳಬೇಕು. ಈಗ ಮತ್ತೊಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಈ ರುಬ್ಬಿರುವ ಮಸಾಲೆಯನ್ನು ಹಾಕಿ ಕುದಿಯಲು ಬಿಡಿ. ಅರ್ಧ ಗ್ಲಾಸ್ ನೀರು ಹಾಕಿ ಕುದಿಯಲು ಬಿಡಿ. ಈಗ ಪುಡಿ ಮಾಡಿರುವ ಆಲೂಗಡ್ಡೆಯನ್ನು ಸಹ ಇದಕ್ಕೆ ಹಾಕಿ ಬೆರೆಸಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಬೇಳೆ ಬೇಯಲು ಬಳಸಿದ ನೀರನ್ನು ಈ ಪಾತ್ರೆಗೆ ಹಾಕಿ ಕುದಿಯಲು ಬಿಡಿ.
ಈಗ ಮೊದಲು ಬೇಯಿಸಿಕೊಂಡ ಕಡಲೆ ಬೇಳೆಯನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಿ. 5 ನಿಮಿಷ ಕುದಿಬರಬೇಕು. ಅಂತಿಮವಾಗಿ ಗರಂ ಮಸಾಲ ಹಾಗೂ ಚಾಟ್ ಮಸಾಲೆ ಹಾಕಿ 2 ನಿಮಿಷ ಕುದಿಸಿ ಒಲೆ ಆಫ್ ಮಾಡಿ ಇದನ್ನು ಬದಿಗೆ ಇಟ್ಟುಕೊಳ್ಳಿ. ಈಗ ನೀವು ಪೂರಿಯನ್ನು ಮನೆಯಲ್ಲೇ ಮಾಡಬಹುದು ಅಥವಾ ಅಂಗಡಿಯಿಂದ ತರಬಹುದು. ಈ ಪೂರಿಯನ್ನು ಒಡೆದು ಒಂದು ತಟ್ಟೆಗೆ ಹಾಕಿಕೊಳ್ಳಿ. ನಂತರ ಬೇಯಿಸಿರುವ ಮಸಾಲೆಯನ್ನು ಈ ಪೂರಿಯ ಮೇಲೆ ಹಾಕಿಕೊಳ್ಳಿ.
ಇದರ ಮೇಲೆ ಕ್ಯಾರೆಟ್, ಈರುಳ್ಳಿ, ಖಾರಾಸೇವ್, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸವಿದರೆ ಅದರ ರುಚಿಗೆ ನೀವು ಫಿದಾ ಆಗುತ್ತೀರಿ. ಈ ಚಾಟ್ ಅನ್ನು ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications