Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್ ಬಳಸದೆ ಅದ್ಭುತ ರುಚಿಯ ಗೀರೈಸ್ ಮಾಡಿ! ನೀವೆಂದು ಸವಿದಿರದ ಟೇಸ್ಟ್ ಇದು!
ರೈಸ್‌ನಿಂದ ಮಾಡುವ ಹಲವು ಖಾದ್ಯಗಳ ಪೈಕಿ ನೀವು ಹಲವು ಬಗೆಯ ವಿಶೇಷ ಖಾದ್ಯಗಳನ್ನು ಟ್ರೈ ಮಾಡಿರುತ್ತೀರಿ. ಹೋಟೆಲ್ ಹಾಗೆ ರೆಸ್ಟೋರೆಂಟ್‌ನಲ್ಲಿ ನೀವು ಸವಿಯುವಂತಹ ಹಲವು ಖಾದ್ಯಗಳು ನಿಮ್ಮ ನೆನಪಿಗೆ ಬರಬಹುದು. ಅದ್ರಲ್ಲೂ ವಿಶೇಷ ರುಚಿಯ ಪಲಾವ್, ಫ್ರೈಡ್ ರೈಸ್, ಗೀ ರೈಸ್ ಹೆಚ್ಚಾಗಿ ಸವಿದಿರುತ್ತೀರಿ.
ಆದ್ರೆ ಮನೆಯಲ್ಲಿ ಇಂತಹ ಯಾವುದಾದರು ಖಾದ್ಯ ಮಾಡಿ ಸವಿಯುವ ಬಯಕೆ ನಿಮ್ಮಲ್ಲಿದ್ದರೆ ಇಂದು ನಾವು ಮನೆಯಲ್ಲೇ ನೀವೆಂದು ಸವಿದಿರದಂತಹ ಗೀರೈಸ್ ಮಾಡಿ ಸವಿಯುವ ಕುರಿತು ತಿಳಿಯೋಣ. ಗೀರೈಸ್ ಅನ್ನು ನೀವು ಕೂಡ ಮಾಡಿ ಸವಿದಿರುತ್ತೀರಿ. ಆದ್ರೆ ನಾವಿಂದು ವಿಭಿನ್ನ ರುಚಿಯಲ್ಲಿ ಹಾಗೆ ಎಲ್ಲರ ಬಾಯಲ್ಲೂ ನೀರು ತರಿಸುವಂತಹ ರುಚಿಯ ಗೀರೈಸ್ ಮಾಡಿ ಸವಿಯುವ ಕುರಿತು ತಿಳಿಯೋಣ.

ನಾವಿಂದು ರೆಸ್ಟೋರೆಂಟ್ ರೀತಿಯಲ್ಲಿ ರುಚಿ ರುಚಿಯ ಗೀರೈಸ್ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗೆ ಇದೇ ವಿಧಾನದಲ್ಲಿ ನೀವು ಕೂಡ ಮನೆಯಲ್ಲಿ ಗೀರೈಸ್ ಮಾಡಿ ಸವಿದು ನೋಡಿ. ಈ ವಿಧಾನದ ಮೂಲಕ ನೀವು ಮನೆಯಲ್ಲಿ ಗೀರೈಸ್ ಮಾಡಿ ಸವಿದು ನೋಡಿ. ನಿತ್ಯ ಇದೇ ರೀತಿ ಗೀರೈಸ್ ಮಾಡಿ ಸವಿಯುವುದು ಖಚಿತ.
ಹಾಗಾದ್ರೆ ಮನೆಯಲ್ಲಿ ಗೀರೈಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ಸುಲಭದ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಗೀರೈಸ್ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ (ಅರ್ಧ ಗಂಟೆ ಮೊದಲು ನೆನೆಸಿಡಿ)
- ಎಣ್ಣೆ
- ತುಪ್ಪ
- ಚಕ್ಕೆ
- ಏಲಕ್ಕಿ
- ಲವಂಗ
- ಕಲ್ಲು ಹೂವು
- ಉಪ್ಪು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಗೋಡಂಬಿ
- ಪುದಿನ
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಮೊಸರು
ಗೀರೈಸ್ ಮಾಡುವ ಸುಲಭದ ವಿಧಾನವಿದು
ಮೊದಲಿಗೆ ಚಕ್ಕೆ, ಏಲಕ್ಕಿ, ಲವಂಗ, ಕಲ್ಲು ಹೂವನ್ನು ಒಂದು ಬೌಲ್‌ನಲ್ಲಿ ನೆನೆಸಿಡಿ. ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 4 ಸ್ಪೂನ್ ಎಣ್ಣೆ ಹಾಗೂ ತುಪ್ಪ ಹಾಕಿಕೊಂಡು ಕಾಯಲು ಬಿಡಿ. ನಂತರ ಇದಕ್ಕೆ ನೆನೆಸಿಟ್ಟ ಏಲಕ್ಕಿ, ಲವಂಗ, ಪಲಾವ್ ಎಲೆಯನ್ನು ಹಾಕಿಕೊಳ್ಳಿ. ಹಾಗೆ ಕತ್ತರಿಸಿಕೊಂಡ ಹಸಿ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಶ್ರಣ ಮಾಡಿ.
ಈಗ ಗೋಡಂಬಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಅನಂತರ ಕತ್ತರಿಸಿಕೊಂಡ ಎರಡು ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಕಾಲು ಕಪ್ ಮೊಸರನ್ನು ಸಹ ಹಾಕಿಕೊಂಡು, ಕೊತ್ತಂಬರಿ ಸೊಪ್ಪು, ಪುದಿನ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಚೆನ್ನಾಗಿ ಫ್ರೈ ಆದಾಗ ಮೊದಲು ಅಳತೆ ಮಾಡಿ ನೆನೆಸಿ ಇಟ್ಟಿದ್ದ ಅಕ್ಕಿಯನ್ನ ಹಾಕಿಕೊಳ್ಳಿ.
ಅಕ್ಕಿ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ. ಅಕ್ಕಿ ತೆಗೆದುಕೊಂಡ ಗ್ಲಾಸ್‌ನಲ್ಲಿ ಒಂದೂವರೆ ಗ್ಲಾಸ್ ನೀರು ಹಾಕಬೇಕು. ನಂತರ ಮತ್ತೆ ಮಿಶ್ರಣ ಮಾಡಿ ಉರಿ ಹೆಚ್ಚಾಗಿ ಇಟ್ಟು ಮುಚ್ಚಳ ಮುಚ್ಚಿ 10 ನಿಮಿಷ ಬಿಡಬೇಕು. ಅನಂತರ ಮುಚ್ಚಳ ತೆಗೆದು ನೀರು ಬತ್ತಿರುವುದು ನೋಡಿಕೊಳ್ಳಿ, ಹಾಗೆ ಒಮ್ಮೆ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. 10 ನಿಮಿಷ ಬಿಟ್ಟರೆ ಉದುರು ಉದುರಾದ ಗೀರೈಸ್ ರೆಡಿಯಾಗುತ್ತದೆ. ಕೊನೆಯಲ್ಲಿ ಬೇಕಾದರೆ 1 ಸ್ಪೂನ್ ತುಪ್ಪ ಮೇಲೆ ಹಾಕಿ ಮಿಕ್ಸ್ ಮಾಡಬಹುದು. ನೀವು ಕೂಡ ಮನೆಯಲ್ಲಿ ಅದ್ರಲ್ಲೂ ಹಬ್ಬದ ಸಮಯದಲ್ಲಿ ಇದನ್ನು ಮಾಡಿ ಸವಿದು ನೋಡಿ. ಹಾಗೆ ಬೆಳಗ್ಗೆ ತಿಂಡಿಗೂ ಸಹ ಇದನ್ನು ಮಾಡಿ ಊಟದ ಸಮಯದಲ್ಲೂ ಇದು ಬೆಸ್ಟ್ ಖಾದ್ಯ.



Click it and Unblock the Notifications