ಮಕ್ಕಳು ಚೂರು ಬಿಡದೆ ಖಾಲಿ ಮಾಡ್ತಾರೆ ಈ ಸ್ಪೆಷಲ್ ರೈಸ್..! ಮಾಡಿ ನೋಡಿ..!

Posted By:

ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕೇಳಿಬರುವ ಸಮಸ್ಯೆ ಏನೆಂದರೆ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ, ತಿಂಡಿ ತಿನ್ನುವುದಿಲ್ಲ ಎನ್ನುವುದು. ಏಕೆಂದರೆ ಮಕ್ಕಳು ಊಟ, ತಿಂಡಿ ಅಂದರೆ ಮಾರುದ್ದ ಓಡಿರುತ್ತಾರೆ. ಅವರಿಗೆ ಇಷ್ಟವಾಗುವಂತೆ ನೀವು ಯಾವುದೇ ತಿಂಡಿ ಮಾಡಿದರು ಕೂಡ ಅವರಿಗೆ ಅದು ಇಷ್ಟವಾಗುವುದಿಲ್ಲ. ಬದಲಿಗೆ ತಿಂಡಿ ತಿನ್ನಲು ಹಠ ಮಾಡುತ್ತಿರುತ್ತಾರೆ.

ಇನ್ನು ಶಾಲೆ ಹೋಗುವ ಮಕ್ಕಳಿದ್ದರಂತೆ ಇದು ಮತ್ತಷ್ಟು ಕಷ್ಟ. ಅವರು ಬೆಳಗ್ಗೆ ಏನನ್ನೂ ಸೇವಿಸುವುದಿಲ್ಲ ಮಧ್ಯಾಹ್ನ ಬಾಕ್ಸ್‌ಗೆ ಹಾಕಿಕೊಟ್ಟ ಊಟವನ್ನೂ ಮಾಡುವುದಿಲ್ಲ. ಇದು ಎಲ್ಲಾ ತಾಯಂದಿರ ನಿತ್ಯದ ಗೋಳಾಗಿರುತ್ತದೆ. ಆದ್ರೆ ನಾವು ನಿತ್ಯ ಒಂದೊಂದು ವಿಶೇಷ ತಿಂಡಿ ಮಾಡಿದ್ರೆ ಅವರಿಗೂ ಇಷ್ಟವಾಗುತ್ತೆ.

How To Make Special Rice Recipe In Kannada

ಆದ್ರೆ ನಿತ್ಯವು ಹೊಸ ಹೊಸ ರುಚಿಯಲ್ಲಿ ತಿಂಡಿ ಮಾಡುವುದು ಕಷ್ಟವೇ. ಆದ್ರೆ ನಾವಿಂದು ಹೇಳುವ ತಿಂಡಿಯನ್ನು ಅವರಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಬಾಕ್ಸ್ ಹಾಕಿ ಕಳುಹಿಸಿ. ಖಂಡಿತ ಬಾಕ್ಸ್ ಖಾಲಿ ಮಾಡಿಕೊಂಡು ಬಂದಿರುತ್ತಾರೆ. ಮಕ್ಕಳಿಗೆ ಇಷ್ಟವಾಗುವಂತಗ ರೈಸ್ ಖಾದ್ಯ ಇದಾಗಿದೆ.

ಹಾಗಾದ್ರೆ ಮಕ್ಕಳಿಗೆ ಇಷ್ಟವಾಗುವಂತೆ ವಿಶೇಷ ರೀತಿಯ ರೈಸ್ ಮಾಡುವುದು ಹೇಗೆ? ಇದಕ್ಕೆ ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಕ್ಕಳಿಗೆ ಇಷ್ಟವಾಗುವ ರೈಸ್ ಮಾಡಲು ಬೇಕಾಗುವ ಪದಾರ್ಥಗಳು

  • ಹಸಿ ಬಾಳೆ ಕಾಯಿ -1
  • ಅನ್ನ- 1 ಬೌಲ್
  • ಉದ್ದು- 1 ಟೀಸ್ಪೂನ್
  • ಕಡಲೆ ಬೇಳೆ - 1 ಟೀಸ್ಪೂನ್
  • ಒಣ ಮೆಣಸಿನಕಾಯಿ - 4
  • ಜೀರಿಗೆ - 3 ಟೀಸ್ಪೂನ್
  • ಕರಿಮೆಣಸು - 1/4 ಟೀಸ್ಪೂನ್
  • ಬಿಳಿ ಎಳ್ಳು - 1/4 ಟೀಸ್ಪೂನ್
  • ಸಾಸಿವೆ - 1/4 ಟೀಸ್ಪೂನ್
  • ಬೆಳ್ಳುಳ್ಳಿ - 5 ಪಿಸಿಗಳು
  • ಈರುಳ್ಳಿ - 1
  • ಕರಿಬೇವು - 1 tbs
  • ಇಂಗು - 1/4 ಟೀಸ್ಪೂನ್
  • ಅರಿಶಿನ ಪುಡಿ - 1/4 ಟೀಸ್ಪೂನ್
  • ತುಪ್ಪ-1/2 ಟೀಸ್ಪೂನ್
  • ಕೊತ್ತಂಬರಿ ಸೊಪ್ಪು - 1 tbs
  • ಅಡುಗೆ ಎಣ್ಣೆ
  • ಉಪ್ಪು

ಮಕ್ಕಳಿಗೆ ಇಷ್ಟವಾಗುವ ರೈಸ್ ಮಾಡುವುದು ಹೇಗೆ?

ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಉದ್ದು, ಕಡಲೆಬೇಳೆ ಹಾಕಿ ಫ್ರೈ ಮಾಡಿ, ಇದಕ್ಕೆ ಜೀರಿಗೆ, ಒಣ ಮೆಣಸು, ಕಾಳು ಮೆಣಸು ಹಾಕಿಕೊಂಡು ಫ್ರೈ‍ ಮಾಡಿಕೊಳ್ಳಿ. ಬಳಿಕ ಎಳ್ಳು ಹಾಕಿ ಇಳಿಸಿಕೊಳ್ಳಿ. ಬಳಿಕ ಈ ಮಸಾಲೆಗಳ ತಣ್ಣಗಾಗಲು ಬಿಡಿ.

ಈಗ ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಒಣ ಮೆಣಸು, ಈರುಳ್ಳಿ, ಕರಿಬೇವು ಹಾಕಿಕೊಂಡು ಫ್ರೈ ಮಾಡಿ. ಈಗ ಇದಕ್ಕೆ ಕಾಯಿ ಬಾಳೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಅದಕ್ಕೆ ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಅರಶಿನ, ಇಂಗು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಈಗ ಮೊದಲು ಹುರಿದುಕೊಂಡ ಮಸಾಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನೀರು ಹಾಕದೆ ತರಿತರಿಯಾಗಿ ಮಸಾಲೆ ರೀತಿ ರುಬ್ಬಿಕೊಳ್ಳಿ. ಈಗ ಒಲೆ ಮೇಲೆ ಇರುವ ಫ್ರೈಗೆ 1 ಬೌಲ್ ಅನ್ನವನ್ನು ಹಾಕಿಕೊಳ್ಳಿ. ಅನ್ನ ಹಾಕಿ ಸ್ವಲ್ಪ ತಿರುಗಿಸಿಕೊಂಡು ಅದಕ್ಕೆ ರುಬ್ಬಿಕೊಂಡಿರುವ ಮಸಾಲೆಯನ್ನು ಮಿಕ್ಸ್ ಮಾಡಿ. ಬಳಿಕ 1 ಸ್ಪೂನ್ ತುಪ್ಪ ಹಾಕಿ 1 ನಿಮಿಷಗಳ ಕಾಲ ಒಲೆ ಮೇಲೆ ಇದ್ದರೆ ಸಾಕು.

ಇಷ್ಟಾದರೆ ನಿಮ್ಮ ಮುಂದೆ ಸ್ಪೆಷಲ್ ರೈಸ್ ರೆಡಿಯಾಗುತ್ತದೆ. ಇದು ಬೆಳಗ್ಗೆ ತಿಂಡಿಗೆ ಮಾತ್ರವಲ್ಲ ಮಧ್ಯಾಹ್ನದ ಊಟಕ್ಕೂ ರುಚಿ ನೀಡಲಿದೆ. ಮಕ್ಕಳಿಗೆ ಸವಿಯಲು ನೀಡಿದರೆ ಖಂಡಿತ ಇದನ್ನು ಖಾಲಿ ಮಾಡುತ್ತಾರೆ.

[ of 5 - Users]
Story first published: Sunday, July 14, 2024, 14:01 [IST]
X
Desktop Bottom Promotion