Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಜ ಮಸಾಲೆ ಅನ್ನದ ರುಚಿಯೇ ಬೇರೆ..! ಮಾಡಿ ನೋಡಿ
ನೀವು ಬೆಳಗ್ಗೆ ತಿಂಡಿಯ ಸಮಯಕ್ಕೆ ಹಲವು ಬಗೆಯ ಖಾದ್ಯ ಮಾಡುತ್ತೀರಿ, ಅದರಲ್ಲೂ ಸ್ಪೆಷಲ್ ಆಗಿ ಮಾಡುವಂತಹ ಹಲವು ಖಾದ್ಯ ಮಾಡಿ ಸವಿಯುವ ಅಭ್ಯಾಸ ಕೂಡ ನಿಮಗಿರಬಹುದು. ಹಾಗೆ ಹೊಸದಾಗಿ ಇಲ್ಲವೆ ಅದ್ಭುತ ರುಚಿಯ ಮಸಾಲೆ ಭರಿತ ತಿಂಡಿ ಮಾಡಿ ಸವಿಯುವ ಕುರಿತಾಗಿ ನೀವು ಆಲೋಚಿಸುತ್ತಿದ್ದರೆ ಈ ರೀತಿ ನಾವು ಹೇಳುವ ಹೊಸ ರೀತಿ ಖಾದ್ಯ ಮಾಡಿ ನೋಡಿ.
ನಾವಿಂದು ರೈಸ್‌ನಿಂದ ಮಾಡುವ ವಿಶೇಷವಾದ ರಾಜ ಮಸಾಲೆ ಅನ್ನದ ಕುರಿತು ತಿಳಿಯೋಣ. ನೀವು ಬೆಳಗ್ಗೆ ತಿಂಡಿಗೆ ಅನ್ನದಿಂದ ಮಾಡುವ ಹಲವು ರೀತಿಯ ಖಾದ್ಯ ಸವಿದಿರಬಹುದು. ಅದರಲ್ಲೂ ಹೆಚ್ಚಾಗಿ ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆಯಂತಹ ಖಾದ್ಯ ನೀವು ಮಾಡುವುದು ಕಾಮನ್, ಆದ್ರೆ ಎಂದಾದ್ರು ರಾಜ ಮಸಾಲೆ ಅನ್ನ ಮಾಡಿ ಸವಿದಿದ್ದೀರಾ?

ಕಡಲೆ ಕಾಳು, ಹಾಗೆ ಹಲವು ಮಸಾಲೆಗಳ ಬಳಸಿ ಅತ್ಯುದ್ಭುತ ರುಚಿಯ ಈ ಅನ್ನದ ಖಾದ್ಯ ಮಾಡಿದರೆ ಅದರ ರುಚಿಯಲ್ಲಿ ನೀವು ಬೇರೆ ಯಾವುದೇ ಖಾದ್ಯ ಸವಿಯಲು ಇಷ್ಟಪಡೋದಿಲ್ಲ. ಈ ರೈಸ್‌ಗೆ ಮಸಾಲೆಗಳು ಮುಖ್ಯವಾಗಿದ್ದು, ಸರಿಯಾದ ಪ್ರಮಾಣದಲ್ಲಿ ಬೆರೆತರೆ ಇಷ್ಟೊಂದು ರುಚಿಯ ರೈಸ್ ಮತ್ತೊಂದಿಲ್ಲ. ಹಾಗೆ ಮನೆಯಲ್ಲಿ ಮಕ್ಕಳಿದ್ದರೆ ಅವರಿಗೂ ಕೂಡ ಇಷ್ಟವಾಗುವ ಖಾದ್ಯವಿದು.
ಹಾಗಾದ್ರೆ ಈ ರಾಜ ಮಸಾಲೆ ಅನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಜ ಮಸಾಲೆ ಅನ್ನ ಮಾಡಲು ಬೇಕಾಗುವ ವಸ್ತುಗಳು
- ಅನ್ನ
- ಕರಿಬೇವು
- ಜೀರಿಗೆ
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಶೇಂಗಾ ಬೀಜ
- ಬ್ಯಾಡಗಿ ಮೆಣಸು
- ಬಿಳಿ ಎಳ್ಳು
- ಹುಣಸೆ ಹುಳಿ
- ಇಂಗು
- ಅರಶಿಣ ಪುಡಿ
- ಎಣ್ಣೆ
- ಉಪ್ಪು
ರಾಜ ಮಸಾಲೆ ಅನ್ನ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಒಂದು ಸ್ಪೂನ್ ಜೀರಿಗೆ ಹಾಕಿಕೊಂಡು ಜೀರಿಗೆ ಸಿಡಿಯಲು ಬಿಡಿ. ನಂತರ ಇದಕ್ಕೆ ಕಡಲೆ ಬೇಳೆ ಹಾಕಿ ಫ್ರೈ ಮಾಡಿ. ನಂತರ ಉದ್ದಿನ ಬೇಳೆ, ಶೇಂಗಾ ಬೀಜ, ಬ್ಯಾಡಗಿ ಮೆಣಸು ಹಾಕಿಕೊಂಡು ಫ್ರೈ ಮಾಡಿ. ಹಾಗೆ ನಂತರ 1 ಸ್ಪೂನ್ ಬಿಳಿ ಎಳ್ಳು, ಹುಣಸೆ ಹುಳಿ ಕೂಡ ಹಾಕಿಕೊಂಡು ಫ್ರೈ ಮಾಡಿ.
ಈಗ ಸ್ವಲ್ಪ ಇಂಗು ಹಾಕಿ ಒಲೆ ಆಫ್ ಮಾಡಿಕೊಂಡು ಪದಾರ್ಥ ತಣ್ಣಗಾಗಲು ಬಿಡಿ. ಈಗ ಮತ್ತೆ ಅದೆ ಬಾಣಲೆಗೆ ಎಣ್ಣೆ ಹಾಕಿಕೊಂಡು ಬೆಳ್ಳುಳ್ಳಿ ಹಾಕಿ 1 ನಿಮಿಷ ಫ್ರೈ ಮಾಡಿ. ಹಾಗೆ ಹೆಚ್ಚಿನ ಪ್ರಮಾಣದ ಕರಿಬೇವು ಹಾಕಿ ಹುರಿದುಕೊಳ್ಳಬೇಕು. ಪರಿಮಳ ಬರುವವರೆ 1 ನಿಮಿಷ ಫ್ರೈ ಮಾಡಿ ಒಲೆ ಆಫ್ ಮಾಡಿ. ಹಾಗೆ ತಣ್ಣಗಾಗಲು ಬಿಡಿ.
ಈಗ ಈ ಕರಿಬೇವನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಸಣ್ಣಗೆ ಪುಡಿಯಾದ ಬಳಿಕ ಇದಕ್ಕೆ ಮೊದಲು ಹುರಿದುಕೊಂಡಿರುವ ಪದಾರ್ಥಗಳನ್ನು ಸಹ ಹಾಕಿಕೊಂಡು ಮತ್ತೆ ರುಬ್ಬಿಕೊಳ್ಳಬೇಕು. ನೀರು ಬಳಸದೆ ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ಈಗ ಈ ಪುಡಿಯನ್ನು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು , ಅರಶಿಣ ಪುಡಿ, ಕಡಲೆ ಬೇಲೆ, ಉದ್ದಿನ ಬೇಳೆ, ಶೇಂಗಾ ಹಾಕಿ ಫ್ರೈ ಮಾಡಿ.
1 ನಿಮಿಷದ ಬಳಿಕ ಮೊದಲು ಮಾಡಿ ಇಟ್ಟಿರುವ ಹುಡಿ ಹುಡಿಯಾದ ಅನ್ನವನ್ನು ನಿಮಗೆ ಎಷ್ಟು ಬೇಕೋ ಆ ಪ್ರಮಾಣದಲ್ಲಿ ಹಾಕಿಕೊಂಡು ಪುಡಿ ಮಾಡಿರುವ ಮಸಾಲೆಯನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೈಯಿಂದ ಕಲಸಿಕೊಂಡು ಸವಿಯಲು ನೀಡಿದರೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications