Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಯಂತೆ ಕರಗುವ ರಾಗಿ ಮುದ್ದೆ 5 ನಿಮಿಷದಲ್ಲಿ ಮಾಡಿ..! ಇಲ್ಲಿದೆ ಸ್ಪೆಷಲ್ ರೆಸಿಪಿ
ಕರ್ನಾಟಕದ ವಿಶೇಷ ಖಾದ್ಯಗಳಲ್ಲಿ ರಾಗಿ ಮುದ್ದೆ ಕೂಡ ಒಂದು, ಆರೋಗ್ಯಕ್ಕೆ ಅತ್ಯುತ್ತಮ ರೀತಿಯ ಖಾದ್ಯಗಳಲ್ಲಿ ಈ ರಾಗಿಮುದ್ದೆ ಮೊದಲು. ಮಕ್ಕಳಿಂದ ಹಿರಿಯರವರೆಗೂ ಈ ಮುದ್ದೆ ಸವಿಯಬಹುದು. ಹಾಗೆ ರಾಗಿಮುದ್ದೆ ವೆಜ್ ಪ್ರಿಯರು ಹಾಗು ಮಾಂಸಹಾರಿಗಳ ಅಚ್ಚುಮೆಚ್ಚಿನ ಖಾದ್ಯ ಆಗಿರುತ್ತೆ, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎಲ್ಲ ಸಮಯದಲ್ಲೂ ರಾಗಿ ಮುದ್ದೆ ಸವಿಯೋದು ಸಾಮಾನ್ಯ.
ರಾಗಿಯಲ್ಲಿರುವ ಕಬ್ಬಿಣ ಮತ್ತು ಫೈಬರ್ ಪೋಷಕಾಂಶಗಳು ದೇಹಕ್ಕೆ ಅನೇಕ ಪ್ರಯೋಜನಗಳ ನೀಡಲಿದೆ. ಹೀಗಾಗಿ ಮುದ್ದೆ ತಿಂದವರ ಆರೋಗ್ಯ ಯಾವಾಗಲು ಚೆನ್ನಾಗಿರುತ್ತೆ ಎನ್ನಲಾಗುತ್ತದೆ. ಹಾಗೆ ರಾಗಿ ಮುದ್ದೆ ನುಂಗಿದರೆ ಬಂಡೆಕಲ್ಲು ಬೇಕಾದರು ಪುಡಿ ಮಾಡುತ್ತಾರೆ ಎಂಬ ಮಾತುಗಳಿವೆ. ಅದರಲ್ಲೂ ಹೆಚ್ಚಾಗಿ ಮೈಸೂರು, ಮಂಡ್ಯ, ತುಮಕೂರು, ಹಾಸನ ಸೇರಿ ಹಲವು ಭಾಗದಲ್ಲಿ ರಾಗಿ ಮುದ್ದೇ ಬಹಳ ಫೇಮಸ್.

ಇನ್ನು ರಾಗಿ ಮುದ್ದೆಯನ್ನು ಮಾಡುವುದು ಕೂಡ ಒಂದು ಕಲೆಯಂತೆ. ಎಲ್ಲರೂ ಈ ಮುದ್ದೆ ಮಾಡಲು ಕಲಿತಿರುವುದಿಲ್ಲ. ಹಾಗೆ ಕೆಲವೊಮ್ಮೆ ಇದು ಚೆನ್ನಾಗಿ ಬರುವುದಿಲ್ಲ. ಆದ್ರೆ ನಾವಿಂದು ಮೃದುವಾಗಿ ಸ್ಪೆಷಲ್ ಆಗಿ ಮಾಡುವ ರಾಗಿ ಮುದ್ದೆ ಕುರಿತು ತಿಳಿದುಕೊಳ್ಳೋಣ. ಈ ರೀತಿ ಮುದ್ದೆ ಮಾಡಿದರೆ ಒಂದು ಮುದ್ದೆ ತಿನ್ನುವರರು ಎರಡು ಮೂರು ಮುದ್ದೆ ಸವಿಯಲು ಮುಂದಾಗುವುದು ಪಕ್ಕಾ.
ಹಾಗಾದ್ರೆ ಸ್ಪೆಷಲ್ ಮುದ್ದೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಈ ರೀತಿ ಮೃದುವಾದ ಮುದ್ದೆ ಮಾಡುವ ಸರಿಯಾದ ವಿಧಾನವೇನು? ಈ ಮುದ್ದೆ ಮಾಡಲು ಎಷ್ಟು ಸಮಯ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೆಣ್ಣೆಯಂತ ಮೃದುವಾದ ಮುದ್ದೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರಾಗಿ ಹಿಟ್ಟು
- ಉಪ್ಪು
- ನೀರು
ಬೆಣ್ಣೆಯಂತ ಮೃದುವಾದ ಮುದ್ದೆ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅಳತೆ ಕಪ್‌ನಲ್ಲಿ ಒಂದೂವರೆ ಕಪ್ ನೀರು ಹಾಕಿಕೊಳ್ಳಿ, ಬಳಿಕ ಇದಕ್ಕೆ ಒಂದು ಸ್ಪೂನ್ ರಾಗಿ ಹಿಟ್ಟು ತೆಗೆದುಕೊಂಡು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ನೀರು ಕುದಿಬರಲು ಬಿಡಬೇಕು. ಸುಮಾರು 5ರಿಂದ 7 ನಿಮಿಷದಲ್ಲಿ ನೀರು ಕುದಿಬರಲು ಆರಂಭಿಸಲಿದೆ.
ಈ ನೀರು ಚೆನ್ನಾಗಿ ಕುದಿ ಬರಲು ಆರಂಭಿಸಿದಾಗ ಅಳತೆ ಕಪ್‌ನಲ್ಲಿ ತೆಗೆದಿಟ್ಟಿದ್ದ 1 ಕಪ್ ರಾಗಿ ಹಿಟ್ಟನ್ನು ನೀರಿಗೆ ಹಾಕಿಕೊಳ್ಳುತ್ತಾ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ದೊಡ್ಡ ಕಟ್ಟಿಗೆ ತುಂಡಿನಲ್ಲಿ ಚೆನ್ನಾಗಿ ಮೇಲಿನಿಂದ ಹದ ಮಾಡುತಾ ತಿರುಗಿಸಿಕೊಳ್ಳಿ. ಗಟ್ಟಿಯಾಗುವ ಸಮಯದ ವರೆಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಅರ್ಧ ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಹಿಟ್ಟು ಬೇಯಲು ಬಿಡಿ.
ನಂತರ ಒಲೆ ಆಫ್ ಮಾಡಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಬೇಕು. ಗಟ್ಟಿಯಾದ ಹಿಟ್ಟನ್ನು ಗಂಟುಗಳು ಇಲ್ಲದಂತೆ ಚೆನ್ನಾಗಿ ಹದ ಮಾಡಬೇಕು. ಬಿಳಿ ಬಿಳಿಯ ಹಿಟ್ಟು ಒಂದೇ ಬಣ್ಣಕ್ಕೆ ತಿರುಗುವಂತೆ ಮಿಕ್ಸ್ ಮಾಡಿಕೊಳ್ಳಿ. ಆಗಾಗ ನಾದುಕೊಂಡು ಮಿಕ್ಸ್ ಮಾಡಿ. ತಕ್ಷಣ ಹಿಟ್ಟನ್ನು ಒಂದು ಪ್ಲೇಟ್‌ಗೆ ಹಾಕಿಕೊಳ್ಳಿ, ಹಾಗೆ ನೀರು ಇಟ್ಟುಕೊಂಡು ಕೈಯನ್ನು ನೀರಿಗೆ ಅದ್ದಿಕೊಂಡು ಹಿಟ್ಟು ಕಟ್ಟಲು ಮುಂದಾಗಿ.
ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮುದ್ದೆಯನ್ನು ಕಟ್ಟಿಕೊಳ್ಳಬಹುದು. ಕೈ ಸುಡುವುದಾದರೆ ನೀರು ಅದ್ದಿಕೊಳ್ಳಿ. ಹಾಗೆ ಮುದ್ದೆ ಕಟ್ಟಿ ಬಿಸಿ ಬಿಸಿ ಇದ್ದಾಗಲೇ ಸವಿಯಲು ನೀಡಿ. ಆದ್ರೆ ಮುದ್ದೆ ಕಟ್ಟುವ ಮುನ್ನ ಒಂದು ಸ್ಪೂನ್ ತುಪ್ಪವನ್ನು ಈ ಹಿಟ್ಟಿನ ಜೊತೆಗೆ ಹಾಕಿ ಮುದ್ದೆ ಕಟ್ಟಿದರೆ ಅದರ ರುಚಿ ಹಾಗೂ ಸುವಾಸನೆಗೆ ಮತ್ತೊಂದು ಮುದ್ದೆ ಹೆಚ್ಚಿಗೆ ಸವಿಯುತ್ತಾರೆ. ನೀವು ಕೂಡ ಈ ರೀತಿ ವಿಧಾನದಲ್ಲಿ ಮುದ್ದೆ ಮಾಡಿ ನೋಡಿ.



Click it and Unblock the Notifications