Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಘಮ ಘಮ ಎನ್ನುವ ಮದುವೆ ಮನೆಯ ಪನೀರ್ ಪಲಾವ್..ಮಾಡುವ ವಿಧಾನ ಇಲ್ಲಿದೆ!
ನೀವು ಮದುವೆ ಮನೆ ಅಥವಾ ಶುಭ ಸಮಾರಂಭಗಳಲ್ಲಿ ಭಾಗಿಯಾದಾಗ ಊಟದ ಸಮಯದಲ್ಲಿ ಸವಿಯುವ ಪಲಾವ್ ಬಹಳ ಇಷ್ಟವಾಗಿರಬಹುದು. ವಿಶೇಷ ರುಚಿಯ ಈ ಪಲಾವ್ ಎಲ್ಲರಿಗೂ ಇಷ್ಟವಾಗುತ್ತೆ. ಅದರ ರುಚಿಗೆ ನೀವು ಮತ್ತೆ ಮತ್ತೆ ಹಾಕಿಸಿಕೊಂಡು ಸವಿದಿರುತ್ತೀರಿ. ಈ ಪಲಾವ್ ರುಚಿ ಎಲ್ಲರಿಗೂ ಇಷ್ಟವಾಗುತ್ತೆ, ಏಕೆಂದರೆ ಅದರ ಮಸಾಲೆಯು ವಿಭಿನ್ನ ರುಚಿ ನೀಡಲಿದೆ.
ಹಾಗೆ ಇದಕ್ಕೆ ಪನೀರ್ ಬಳಸುವುದರಿಂದ ರುಚಿಯು ದುಪ್ಪಟ್ಟಾಗಿರುತ್ತೆ. ಹೀಗಾಗಿ ನಾವು ಮನೆಯಲ್ಲಿ ಮಾಡಿರುವ ಪಲಾವ್ಗಿಂತಲೂ ಈ ಖಾದ್ಯ ಬಹಳ ರುಚಿ ನೀಡಲಿದೆ. ಇನ್ನು ಈ ರೀತಿಯ ಪನೀರ್ ಪಲಾವ್ ಅನ್ನು ನೀವು ಕೂಡ ಮನೆಯಲ್ಲಿ ಮಾಡಿ ಸವಿಯಲು ಮುಂದಾಗಬಹುದು. ಹಾಗಾದ್ರೆ ನಾವಿಂದು ಸುಲಭವಾಗಿ ಈ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ.

ಈ ಪಲಾವ್ ಎಲ್ಲರಿಗೂ ಇಷ್ಟವಾಗುವಂತಹ ರುಚಿ ಹೊಂದಿರಲಿದೆ. ಹಾಗೆ ಮನೆಯಲ್ಲಿ ಈ ಪಲಾವ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಪನೀರ್ ಪಲಾವ್ ಮಾಡುವುದು ಹೇಗೆ?, ಪನೀರ್ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪನೀರ್ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು?
- ಅಕ್ಕಿ
- ಶುಂಠಿ
- ಎಣ್ಣೆ
- ಈರುಳ್ಳಿ
- ಪನೀರ್
- ಬೆಳ್ಳುಳ್ಳಿ
- ಹಸಿ ಮೆಣಸು
- ಜೀರಿಗೆ
- ಚಕ್ಕೆ
- ಲವಂಗ
- ಅರಶಿಣ
- ಪಾಲಕ್ ಸೊಪ್ಪು
- ಕೊತ್ತಂಬರಿ ಸೊಪ್ಪು
- ಚಕ್ರ ಮೊಗ್ಗು
- ಪಲಾವ್ ಎಲೆ
- ಉಪ್ಪು
- ಗೋಡಂಬಿ ಸೋಂಪು
- ತೆಂಗಿನಕಾಯಿ
ಪನೀರ್ ಪಲಾವ್ ಮಾಡುವುದು ಹೇಗೆ?
ಈ ಪಲಾವ್ ಮಾಡಲು ಮನೆಯಲ್ಲಿ ಮಾಡಿರುವ ಪನೀರ್ ಇದ್ದರೆ ರುಚಿ ಹೆಚ್ಚಾಗಲಿದೆ. ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಮಸಾಲೆಗೆ ಬೇಕಾದ ವಸ್ತುಗಳ ಹುರಿದುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಬಳಿಕ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಪಾಲಕ್ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಪಾಲಕ್ ಬದಲಿಗೆ ನೀವು ಪುದಿನ ಸೊಪ್ಪು ಕೂಡ ಬಳಸಬಹುದು.
ಈಗ ಬಾಣಲೆಗೆ ತುರಿದ ತೆಂಗಿನಕಾಯಿ ಹಾಕಿ 1 ನಿಮಿಷ ಫ್ರೈ ಮಾಡಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಅರಶಿಣ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಈಗ ತಣ್ಣಗಾಗಲು ಬಿಡಿ. ಈ ನಡುವೆ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಕುಕ್ಕರ್ಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಹೆಚ್ಚಾಗಿ ಹಾಕಿಕೊಳ್ಳಿ. ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಸೋಂಪು, ಪಲಾವ್ ಎಲೆ, ಚಕ್ರ ಮೊಗ್ಗು, ಗೋಡಂಬಿ ಹಾಕಿಕೊಂಡು ಹುರಿದುಕೊಳ್ಳಿ.
ಈಗ ಹೆಚ್ಚಿಕೊಂಡಿರುವ ಈರುಳ್ಳಿ, ಕಸೂರಿ ಮೇತಿ, ಕ್ಯಾರೆಟ್, ಬೀನ್ಸ್, ಬಟಾಣಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈ ಫ್ರೈ ಆಗುವ ಸಮಯದಲ್ಲಿ ಮೊದಲು ಹುರಿದುಕೊಂಡಿದ್ದ ಪದಾರ್ಥಗಳನ್ನು ಮಿಕ್ಸಿ ಜಾರ್ಗೆ ಹಾಕಿಕೊಂಡು ಗ್ರೀನ್ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂಡ ಹಾಕಿಕೊಂಡು ಬಳಿಕ ಅಳತೆ ಪ್ರಕಾರವಾಗಿ ನೀರು ಹಾಕಬೇಕು.
1 ಕಪ್ ಅಕ್ಕಿಗೆ ಒಂದೂವರೆ ಕಪ್ ನೀರಿನ ಅಳತೆ ಬಳಸಿಕೊಳ್ಳಿ. ನೀರು ಹಾಕಿದ ಬಳಿಕ ಈಗ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ತೊಳೆದು 15 ನಿಮಿಷ ನೆನೆಸಿಕೊಂಡಿರುವ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಮುಚ್ಚಿ, 2 ಸೀಟಿ ಹೊಡೆಯಲು ಬಿಡಿ. ಬಳಿಕ ಕುಕ್ಕರ್ ತಣ್ಣಗಾಗಲು ಬಿಡಿ.
ನಂತರ ಪನೀರ್ ಅನ್ನು ಹೆಚ್ಚಿಕೊಂಡು ಒಮ್ಮೆ ನೀರಿನಲ್ಲಿ ಹಾಕಿ ಅದ್ದಿಕೊಂಡು ಈ ಪಲಾವ್ಗೆ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಪನೀರ್ ಪಲಾವ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ಮದುವೆ ಮನೆ ಪನೀರ್ ಪಲಾವ್ ಟ್ರೈ ಮಾಡಿ ನೋಡಿ.



Click it and Unblock the Notifications