Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಡಿಮೆ ಟೈಮಲ್ಲಿ ಸುಲಭವಾಗಿ ಸ್ಪೆಷಲ್ ಪಲಾವ್ ಮಾಡಿ..! ಸಖತ್ ಟೇಸ್ಟಿ..!
ಬೆಳಗ್ಗೆ ತಿಂಡಿ ಅಂದ್ರೆ ಎಲ್ಲರಿಗೂ ಕೆಲಹೊತ್ತು ಯೋಚಿಸಿಯೇ ನಿರ್ಧಾರಕ್ಕೆ ಬಂದಿರುತ್ತಾರೆ. ಏಕೆಂದರೆ ಬೆಳಗ್ಗೆಯ ತಿಂಡಿ ಸವಿದು ಅವರವರ ಕೆಲಸ ಕಾರ್ಯಗಳತ್ತ ಮುಖ ಮಾಡುತ್ತಾರೆ. ಹೀಗಾಗಿ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಎಂಬುದು ಎಲ್ಲರ ಮನೆಯ ಪ್ರಶ್ನೆ. ಅದರಲ್ಲೂ ಸುಲಭವಾಗಿ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವಂತಹ ತಿಂಡಿಯನ್ನೇ ಹೆಚ್ಚಿನದಾಗಿ ಮಾಡುತ್ತಾರೆ. ಇದಕ್ಕೆ ಸಮಯ ಉಳಿಸುವುದು ಸೇರಿ ಕಡಿಮೆ ಶ್ರಮ ಹಾಕಿ ಮಾಡುವ ತಿಂಡಿಗೆ ಪ್ರಾಶಸ್ತ್ಯ ಇರಲಿದೆ.
ಕಡಿಮೆ ಸಮಯದಲ್ಲಿ ಮಾಡುವ ತಿಂಡಿಗಳಲ್ಲಿ ನಿಮ್ಮ ಬಳಿ ಹತ್ತಾರು ಲೀಸ್ಟ್ ಇರಬಹುದು. ಅದರಲ್ಲು ನಾವು ಎಲ್ಲಾ ತಿಂಡಿಗಳನ್ನು ಬೆಳಗ್ಗೆ ಸವಿಯಲು ಇಷ್ಟಪಡುವುದಿಲ್ಲ. ಕಡಿಮೆ ಸಮಯದಲ್ಲಿ ಮಾಡಬಹುದು ಎಂಬ ಕಾರಣಕ್ಕೆ ಯಾವುದಾದರು ಒಂದು ತಿಂಡಿ ಮಾಡಿದರೆ ಮನೆಯಲ್ಲಿ ಕೆಲವರಿಗೆ ಇಷ್ಟವಾಗದೆ ಇರಬಹುದು.

ಹೀಗಾಗಿ ನಾವಿಂದು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಮಾಡುವಂತೆ ವಿಭಿನ್ನ ರುಚಿಯ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ. ಪಲಾವ್ ಅತ್ಯಂತ ಸುಲಭವಾಗಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದಾದ ತಿಂಡಿಯಾಗಿದೆ. ಅದರಲ್ಲೂ ನಾವು ಬೆಳಗ್ಗೆ ಎದ್ದು ಪರದಾಡುವುದಕ್ಕಿಂತ ಈ ತಿಂಡಿಯನ್ನು ಸುಲಭವಾಗಿ ಮಾಡಬಹುದು.
ನಾವಿಂದು ಹೇಳುವ ಈ ವಿಧಾನದ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಈ ಪಲಾವ್ ಅನ್ನು ಮಾಡುವುದು ಹೇಗೆ? ಯಾವೆಲ್ಲಾ ವಸ್ತು ಹಾಕಿ ಈ ಪಲಾವ್ ಮಾಡಬೇಕು? ಮಾಡುವ ಸರಿಯಾದ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು?
- ಅಕ್ಕಿ
- ಶುಂಠಿ
- ಹಸಿ ಮೆಣಸು -2
- ಕೊತ್ತಂಬರಿ ಸೊಪ್ಪು
- ಪುದಿನ
- ಈರುಳ್ಳಿ
- ಟೊಮೆಟೋ -1
- ಕ್ಯಾರೆಟ್ -2
- ಬಟಾಣಿ
- ಬೀನ್ಸ್ -2
- ಚಕ್ಕೆ
- ಲವಂಗ
- ಪಲಾವ್ ಎಲೆ
- ಎಣ್ಣೆ
- ಉಪ್ಪು
ಸ್ಪೆಷಲ್ ಪಲಾವ್ ಮಾಡುವ ವಿಧಾನ ಏನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಪುದಿನ ಎಲೆಗಳು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಈ ಮಸಾಲೆಯನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿಕೊಂಡು ಅದಕ್ಕೆ ಪಲಾವ್ ಎಲೆ, ಚಕ್ರಮೊಗ್ಗು, ಲವಂಗ, ಏಲಕ್ಕಿ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಚೆನ್ನಾಗಿ ನೀರಿನಲ್ಲಿ ತೊಳೆದು ಇಟ್ಟುಕೊಂರುವ ಎಲ್ಲಾ ತರಕಾರಿಗಳನ್ನು ಹಾಕಿಕೊಳ್ಳಬೇಕು. ಚೆನ್ನಾಗಿ ಮಿಕ್ಸ್ ಮಾಡುತ್ತಾ ಬೇಯಲು ಬಿಡಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ಈ ರೀತಿ ಬದನೆಕಾಯಿ ಚಟ್ನಿ ಮಾಡಿದ್ರೆ 6 ದಿನ ಇಟ್ಟರೂ ಹಾಳಾಗಲ್ಲ..!!
ನಂತರ ಅಳತೆಯ ಗ್ಲಾಸ್‌ನಲ್ಲಿ ನೀರು ಹಾಕಿಕೊಳ್ಳಬೇಕು. ನಂತರ ನೀರು ಕುದಿಯಲು ಬಿಡಬೇಕು. ನಂತರ ನೀವು ನೀರು ಹಾಕಿದ ಗ್ಲಾಸ್‌ನಲ್ಲೇ ಅಕ್ಕಿಯನ್ನು ಕೂಡ ತೆಗೆದುಕೊಂಡು ಅದನ್ನು ತೊಳೆದು ನಂತರ ಕುಕ್ಕರ್‌ಗೆ ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಹಾಕಿಕೊಡಿ. 2 ಸೀಟಿ ಹೊಡೆದ ಬಳಿಕ ಗ್ಯಾಸ್ ಖಾಲಿಯಾಗಲು ಬಿಡಬೇಕು.
2 ಸೀಟಿ ಹೊಡೆದ ಬಳಿಕ ಈ ಗ್ಯಾಸ್ ಓಪನ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಸ್ಪೆಷಲ್ ಪಲಾವ್ ರೆಡಿಯಾಗುತ್ತದೆ. ನೀವು ಕೂಡ ಬೆಳಗ್ಗೆ ತಿಂಡಿಗೆ ಇದನ್ನು ಮಾಡಿ ನೋಡಿ.



Click it and Unblock the Notifications