Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿತ್ರಾನ್ನ, ಪುಳಿಯೋಗರೆ ಮರೆತುಬಿಡಿ..! 5 ನಿಮಿಷದಲ್ಲಿ ಮಾಡುವ ಈರುಳ್ಳಿ ರೈಸ್ ಮಾಡಿ!
ನೀವು ಬೆಳಗ್ಗೆ ಗಡಿಬಿಡಿಯಲ್ಲಿ ಒಂದು ತಿಂಡಿ ಮಾಡಬೇಕೆಂದರೆ ಬಹಳ ಸಮಯ ಯೋಚಿಸಬೇಕಾಗುತ್ತೆ. ಅದ್ರಲ್ಲು ಯಾವುದಾದರು ವಸ್ತುಗಳು ಕೈಗೆ ಸಿಗುತ್ತಿಲ್ಲ, ಥವಾ ತಿಂಡಿ ಮಾಡಲು ಕೆಲವೊಂದು ಅಗತ್ಯ ವಸ್ತು ಇಲ್ಲ ಎಂದಾದರು ಆ ದಿನ ಬೆಳಗ್ಗೆ ಹೆಚ್ಚು ಗಿಡಿಬಿಡಿಯಾಗುತ್ತೆ. ಹಾಗೆ ಹೆಚ್ಚು ಸಮಯ ಅಡುಗೆ ಮನೆಯಲ್ಲಿ ಕಳೆಯುವ ಹಾಗಾಗುತ್ತೆ. ಕೆಲವೊಮ್ಮೆ ಸಮಯದ ಕೊರತೆಯಲ್ಲಿ ನೀವು ರುಚಿಕರವಾಗಿ ಏನಾದರು ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ.
ಇಲ್ಲವೆ ಬೆಳಗ್ಗೆ ಬೇಗ ನೀವು ಹೊರಗೆ ಹೋಗಬೇಕಾದರೆ ಅಥವಾ ಮನೆಯಲ್ಲಿ ಯಾರಾದರು ಹೊರ ಹೋಗುವ ಸಂದರ್ಭದಲ್ಲಿ ಬಹುಬೇಗ ತಿಂಡಿ ಮಾಡಲು ನೀವು ಮುಂದಾಗುತ್ತೀರಿ. ಈ ವೇಳೆ ಸವಿಯಲು ಏನು ಮಾಡಬೇಕು ಅನ್ನೋದು ದೊಡ್ಡ ಪ್ರಶ್ನೆಯಾಗಿ ನಿಮ್ಮನ್ನು ಕಾಡಬಹುದು. ಹಾಗಾದ್ರೆ ಈ ಸಮಯದಲ್ಲಿ ಅತ್ಯಂತ ಸುಲಭವಾಗಿ ಮಾಡಬಹುದಾದ ಒಂದು ಹೊಸ ರೀತಿ ರೆಸಿಪಿ ನಾವಿಂದು ಇಲ್ಲಿ ತಿಳಿಸಲಿದ್ದೇವೆ.

ಹೌದು ಸುಲಭವಾಗಿ ಕಡಿಮೆ ವಸ್ತುಗಳ ಬಳಸಿ, ಅಂದರೆ ಕೇವಲ 2 ಈರುಳ್ಳಿ, ಅನ್ನ ಕೆಲವೇ ಕೆಲವು ಮಸಾಲೆಗಳ ಬಳಸಿಕೊಂಡು ಮಾಡುವಂತಹ ಈ ರೈಸ್ ರೆಸಿಪಿ ನೀವು ಕೂಡ ಒಮ್ಮೆ ಪ್ರಯತ್ನಿಸಿ ನೋಡಿ. ಚಿತ್ರಾನ್ನ, ಪುಳಿಯೋಗರೆಗಿಂತಲೂ ರುಚಿಕರವಾಗಿ 5 ನಿಮಿಷದಲ್ಲಿ ಈ ಖಾದ್ಯ ರೆಡಿ ಮಾಡಬಹುದು. ಬೆಳಗ್ಗೆಯ ಗಡಿಬಿಡಿಯ ಸಮಯದಲ್ಲಿ ಇದಕ್ಕಿಂತ ಅತ್ಯುತ್ತಮ ರೆಸಿಪಿ ಮತ್ತೊಂದಿಲ್ಲ.
ಹಾಗಾದ್ರೆ ಈ ಸ್ಪೆಷಲ್ ರೈಸ್ ರೆಸಿಪಿಯನ್ನು ಮಾಡೋದು ಹೇಗೆ? ಈ ರೆಸಿಪಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯದೊಳಗೆ ಮಾಡಿ ಮುಗಿಸಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೊಸ ರೈಸ್ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಈರುಳ್ಳಿ- 2
- ಜೀರಿಗೆ
- ಸಾಸಿವೆ
- ಕಡಲೆ ಬೇಳೆ
- ಕಡಲೆ ಬೀಜ
- ಗೋಡಂಬಿ
- ಹಸಿ ಮೆಣಸು
- ಬಿಳಿ ಎಳ್ಳು
- ಕರಿಬೇವು
- ಅರಿಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- ಧನಿಯಾ ಪುಡಿ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಹೊಸ ರೈಸ್ ರೆಸಿಪಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಅದಕ್ಕೆ ಸಾಸಿವೆ, ಕಡಲೆ ಬೇಳೆ, ಕಡಲೆ ಬೀಜ, ಜೀರಿಗೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 10 ಗೋಡಂಬಿ ಭಾಗ ಮಾಡಿಕೊಂಡು ಇದಕ್ಕೆ ಹಾಕಿಕೊಳ್ಳಿ (ಹಾಕದೆ ಇದ್ದರೂ ನಡೆಯುತ್ತೆ). ಇದರ ಜೊತೆಗೆ ಹಸಿ ಮೆಣಸು, ಬಿಳಿ ಎಳ್ಳು (ಬೇಕಾದರೆ ಹಾಕಿಕೊಳ್ಳಬಹುದು) ಹಾಗೆ ಕತ್ತರಿಸಿದ ಈರುಳ್ಳಿ, ಕರಿಬೇವು ಹಾಕಿ 2 ನಿಮಿಷ ಫ್ರೈ ಮಾಡಿ.
ನಂತರ ಹುಡಿ ಹುಡಿಯಾಗಿ ಮಾಡಿರುವ ಅನ್ನವನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪುಡಿ, ಗರಂ ಮಸಾಲೆ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ 2 ನಿಮಿಷಗಳ ಕಾಲ ಮಿಶ್ರಣ ಮಾಡಿ.
ಈಗ ಈ ಮಿಶ್ರಣಕ್ಕೆ 2 ನಿಮಿಷದ ಬಳಿಕ ಸ್ವಲ್ಪ ತೆಂಗಿನಕಾಯಿ ತುರಿ ಹಾಕಿಯೂ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಂಡ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಇಳಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈರುಳ್ಳಿ ರೈಸ್ ರೆಡಿಯಾಗುತ್ತದೆ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಬಾಕ್ಸ್‌ಗೆ ಇದು ಹೇಳಿ ಮಾಡಿಸಿದ ಖಾದ್ಯ.



Click it and Unblock the Notifications