Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವೆಂದು ರುಚಿ ನೋಡದ ಮಸಾಲೆ ಉಪ್ಪಿಟ್ಟು..! ಹೇಗೆ ಮಾಡೋದು ನೋಡಿ..!
ನೀವು ಬೆಳಗ್ಗೆ ತಿಂಡಿಗೆ ವಿಶೇಷವಾಗಿ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದರಲ್ಲೂ ನಿಮಗೆ ಉಪ್ಪಿಟ್ಟು ಅಂದರೆ ಬಹಳ ಇಷ್ಟದ ಖಾದ್ಯವೂ ಆಗಿರಬಹುದು. ಮತ್ತೆ ಕೆಲವರು ಉಪ್ಪಿಟ್ಟು ಅಂದರೆ ದೂರಾಗುತ್ತಾರೆ, ಆದ್ರೆ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ನೀಡುವ ಉಪ್ಪಿಟ್ಟು ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರ ರುಚಿಗೆ ಎಲ್ಲರು ಫಿದಾ ಆಗೋರೆ ಹೆಚ್ಚು. ಹಾಗೆ ಮಸಾಲೆ ಭರಿತ ಈ ಉಪ್ಪಿಟ್ಟು ಅಂದರೆ ಎಲ್ಲರ ಬಾಯಲ್ಲಿ ನೀರು ಬರುವಂತಹ ರುಚಿಯಲ್ಲಿ ಮಾಡಬಹುದು.
ಉಪ್ಪಿಟ್ಟು ಮಾಡುವುದರಲ್ಲೂ ಹಲವು ವಿಧಗಳಿವೆ. ಹಾಗೆ ಹಲವು ರುಚಿಯಲ್ಲಿ ಮಾಡಬಹುದು, ಬಹಳ ಕಡಿಮೆ ಸಮಯದಿಂದ ಹಿಡಿದು ಹಲವು ವಸ್ತುಗಳ ಸೇರಿಸಿ ಅದರ ರುಚಿ ದುಪ್ಪಟ್ಟಾಗಿಸುವಂತಹ ಖಾದ್ಯ ರೆಡಿ ಮಾಡಬಹುದು. ಅದರಲ್ಲೂ ಬೆಳಗ್ಗೆ ಈ ರೀತಿಯಾಗಿ ಉಪ್ಪಿಟ್ಟು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಹೊಸ ರೀತಿಯಲ್ಲು ಉಪ್ಪಿಟ್ಟು ಮಾಡುವಂತಹ ವಿಧಾನದ ಕುರಿತು ತಿಳಿದುಕೊಳ್ಳೋಣ.

ನಾವು ಮೊದಲೇ ಹೇಳಿದಂತೆ ಉಪ್ಪಿಟ್ಟನ್ನು ಹಲವು ರೀತಿಯಲ್ಲಿ ಮಾಡಬಹುದು. ಹಾಗೆ ಹಲವು ರುಚಿಯಲ್ಲಿ ಸವಿಯಬಹುದು, ನಾವಿಂದು ಮಸಾಲೆ ಭರಿತ ನೀವೆಂದು ಸವಿಯದೆ ಇರುವಂತಹ ವಿಧಾನದಲ್ಲಿ ಈ ಉಪ್ಪಿಟ್ಟು ಮಾಡೋಣ. ಹಾಗಾದ್ರೆ ಈ ಮಸಾಲೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬನ್ಸಿ ರವಾ ಅಥವಾ ಉಪ್ಪಿಟ್ಟು ರವೆ - 1 ಕಪ್
- ತೆಂಗಿನಕಾಯಿ
- ಹಸಿ ಮೆಣಸಿನಕಾಯಿ
- ಬೆಳ್ಳುಳ್ಳಿ
- ಶುಂಠಿ
- ದಾಲ್ಚಿನ್ನಿ
- ಲವಂಗ
- ಕೊತ್ತಂಬರಿ ಸೊಪ್ಪು
- ಪುದೀನ ಸೊಪ್ಪು
- ಅರಿಶಿನ ಪುಡಿ
- ತುಪ್ಪ
- ಹಸಿರು ಬೀನ್ಸ್
- ಕ್ಯಾರೆಟ್
- ಈರುಳ್ಳಿ
- ಕರಿಬೇವು
- ಸಾಸಿವೆ
- ಗೋಡಂಬಿ
- ಇಂಗು
- ಟೊಮೆಟೋ
- ಒಣ ಮೆಣಸು
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಉಪ್ಪು
ಮಸಾಲೆ ಉಪ್ಪಿಟ್ಟು ಮಾಡುವ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತೆಂಗಿನ ಕಾಯಿ ತುರಿ 4 ಹಸಿ ಮೆಣಸು, ಶುಂಠಿ , ಚಕ್ಕೆ, ಲವಂಗ, ಬೆಳ್ಳುಳ್ಳಿ, ಕೊತ್ತಂಬರಿ, ಪುದಿನ ಸ್ವಲ್ಪ ನೀರು, ಅರಶಿಣ ಪುಡಿ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡ ಬಳಿಕ ಅದನ್ನು ಬೌಲ್‌ಗೆ ಹಾಕಿಡಿ.
ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ರವೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಮಧ್ಯಮ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಹುರಿದುಕೊಳ್ಳಿ. ನಂತರ ಬಾಣಲೆಯಿಂದ ರವೆ ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಎಣ್ಣೆ ಹಾಕಿಕೊಂಡು ಸಾಸಿವೆ, ಗೋಡಂಬಿ, ಒಣ ಮೆಣಸು, ಬೀನ್ಸ್, ಕ್ಯಾರೆಟ್, ಹಾಗೆ 2 ಈರುಳ್ಳಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಹಾಗೆ ಇಂಗು ಮತ್ತು ಉಪ್ಪು ಸಹ ಹಾಕಿ ಫ್ರೈ ಮಾಡಿ.
ಈಗ ರುಬ್ಬಿಕೊಂಡಿದ್ದ ಮಸಾಲೆಯನ್ನು ಈ ಬಾಣಲೆಗೆ ಹಾಕಿ ಮಿಕ್ಸಿ ಜಾರ್‌ಗೆ ಸ್ವಲ್ಪ ನೀರು ಹಾಕಿ ಇದಕ್ಕೆ ಹಾಕಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಯಾವ ಕಪ್‌ನಲ್ಲಿ ರವೆ ತೆಗೆದುಕೊಂಡಿದ್ದೀರೋ ಅದೇ ಕಪ್‌ನಲ್ಲಿ 2 ಕಪ್ ನೀರು ಹಾಕಿ 4 ನಿಮಿಷ ಕುದಿಯಲು ಬಿಡಿ. ನೀರು ಕುದಿಯುವಾಗ ಇದಕ್ಕೆ ಹುರಿದುಕೊಂಡಿದ್ದ ರವೆಯನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. 2 ನಿಮಿಷ ಬಿಟ್ಟು ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ 1 ನಿಮಿಷ ಬಿಡಿ. ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ಮಸಾಲೆ ಉಪ್ಪಿಟ್ಟು ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಈ ಮಸಾಲೆ ಉಪ್ಪಿಟ್ಟು ಟ್ರೈ ಮಾಡಿ.



Click it and Unblock the Notifications