Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಹೊಸ ವಿಧಾನದಲ್ಲಿ ಘಮ ಘಮಿಸುವ ಮೊಟ್ಟೆ ಸಾರು ಮಾಡಿ..! ಇಲ್ಲಿದೆ ರೆಸಿಪಿ
ನಾನ್‌ವೆಜ್ ಪ್ರಿಯರು ಹಾಗೂ ವೆಜ್ ಪ್ರಿಯರು ಇಬ್ಬರು ಸಮಾನವಾಗಿ ಇಷ್ಟಪಡುವ ಹಲವು ಖಾದ್ಯಗಳಿವೆ. ಅದರಲ್ಲೂ ಕೆಲವೊಂದು ವಿಶೇಷವಾಗಿ ಪನ್ನೀರ್‌ನಿಂದ ಮಾಡಲ್ಪಡುತ್ತವೆ. ಹಾಗೆ ಕೆಲವರು ಸಸ್ಯಹಾರಿಗಳಾಗಿದ್ದರೂ ಮೊಟ್ಟೆಯಿಂದ ಮಾಡಿದ ಖಾದ್ಯಗಳ ಸವಿಯುತ್ತಾರೆ. ಅದರಲ್ಲೂ ಮೊಟ್ಟೆ ಆರೋಗ್ಯಕ್ಕೆ ಬಹಳ ಉತ್ತಮವಾದ ಆಹಾರವಾಗಿದೆ. ಇನ್ನು ಮೊಟ್ಟೆಯಿಂದ ಹತ್ತು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯಬಹುದು.
ಹಾಗೆ ಮೊಟ್ಟೆಯಿಂದ ಮಾಡುವಂತಹ ಕರಿ ಹಾಗೂ ಸಾಂಬಾರ್ ಅತ್ಯಂತ ರುಚಿಕರವಾಗಿರುತ್ತೆ. ಅದರಲ್ಲೂ ಘಮ ಘಮ ಎನ್ನುವಂತೆ ಮಸಾಲೆಗಳ ಹಾಕಿ ಮಾಡುವ ಸಾರು ಎಲ್ಲಾ ಬಗೆಯ ತಂಡಿ ಸವಿಯಲು ಹಾಗೆ ಊಟಕ್ಕೆ ಅತ್ಯದ್ಭುತ ರುಚಿ ನೀಡುತ್ತದೆ. ಹಾಗಾದ್ರೆ ಈ ಮೊಟ್ಟೆ ಸಾರನ್ನು ವಿಭಿನ್ನ ರೀತಿಯಾಗಿ ಮಾಡುವುದು ಹೇಗೆ? ಅದರಲ್ಲೂ ಎಲ್ಲರಿಗೂ ಇಷ್ಟವಾಗುವಂತೆ ಮಾಡುವ ವಿಧಾನ ಕುರಿತು ನಾವಿಂದು ತಿಳಿಯೋಣ.

ನೀವು ಮನೆಯಲ್ಲಿ ಮೊಟ್ಟೆಯಿಂದ ವಿವಿಧ ರೀತಿಯ ಖಾದ್ಯ, ಕರಿ, ಸಾರು, ಗ್ರೇವಿ, ಆಮ್ಲೆಟ್ ಹೀಗೆ ಒಂದಿಷ್ಟು ವಿಧಾನವಾಗಿ ಸವಿದಿರುತ್ತೀರಿ. ಸಾರು ಮಾಡಿದಾಗ ಯಾವಾಗಲು ಒಂದೇ ರೀತಿ ರುಚಿ ಬರುತ್ತಿರಬಹುದು. ಆದ್ರೆ ನಾವಿಂದು ವಿಶೇಷ ರುಚಿಯಲ್ಲಿ ಮೊಟ್ಟೆ ಸಾರು ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ವಿಶೇಷ ರುಚಿಯಲ್ಲಿ ಈ ರೀತಿಯ ಮೊಟ್ಟೆ ಸಾರು ಮಾಡಿದರೆ ಎಲ್ಲರು ಬಾಯಿ ಚಪ್ಪರಿಸಿ ಸವಿಯುತ್ತಾರೆ.
ಮೊಟ್ಟೆ ಸಾರು ಮಾಡಲು ಬೇಕಾಗುವ ವಸ್ತುಗಳು
- ಮೊಟ್ಟೆ -5
- ಈರುಳ್ಳಿ- 2
- ಕರಿಬೇವು
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಟೊಮೆಟೊ -3
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಖಾರದ ಪುಡಿ
- ಕೊತ್ತಂಬರಿ ಪುಡಿ
- ತೆಂಗಿನ ಕಾಯಿ ತುರಿ
- ಗಸಗಸೆ
- ಲವಂಗ
- ದಾಲ್ಚಿನ್ನಿ
- ಸೋಂಪು ಕಾಳು
- ಕಾಳು ಮೆಣಸು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ರುಚಿಗೆ ಉಪ್ಪು
ಮೊಟ್ಟೆ ಸಾರು ಮಾಡುವ ವಿಧಾನ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಹೆಚ್ಚಿಕೊಂಡಿರು ಈರುಳ್ಳಿ ಹಾಕಿಕೊಳ್ಳಿ. ನಂತರ ಇದಕ್ಕೆ ಕರಿಬೇವು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಒಂದು ಮಿಕ್ಸಿ ಜಾರ್‌ಗೆ 2 ಟೊಮೆಟೋ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಪೇಸ್ಟ್ ಮಾಡಿದ ಟೊಮೆಟೋವನ್ನು ಬಾಣಲೆಗೆ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ.
ನಂತರ ಇದಕ್ಕೆ ಉಪ್ಪು, ಅರಶಿಣ ಪುಡಿ, ಗರಂ ಮಸಾಲೆ, ಎಗ್ ಮಸಾಲೆ ಕೂಡ ಹಾಕಬಹುದು, ಧನಿಯಾ ಪುಡಿ, ಖಾರದ ಪುಡಿ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಬರಲು ಬಿಡಿ. 3 ನಿಮಿಷ ಬಿಡಬೇಕು.
ಈಗ ಒಂದು ಮಿಕ್ಸಿ ಜಾರ್ ತೆಗೆದಿಕೊಂಡು ತೆಂಗಿನಕಾಯಿ, ಕಾಳು ಮೆಣಸು, ಸೋಂಪು ಕಾಳು, ಕೊತ್ತಂಬರಿ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಸಾಲೆಯನ್ನು ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ 1 ಗ್ಲಾಸ್ ನೀರು ಹಾಕಿಕೊಂಡು ಕುದಿಯಲು ಬಿಡಿ. 3 ನಿಮಿಷಗಳ ಕಾಲ ಕುದಿಯಲು ಬಿಡಬೇಕು.
ಈಗ ಒಂದು ಬೌಲ್‌ಗೆ ಮೊಟ್ಟೆಗಳನ್ನು ಒಡೆದು ಹಾಕಿಕೊಳ್ಳಿ. ನಂತರ ಒಲೆ ಸಣ್ಣ ಉರಿಯಲ್ಲಿ ಇಟ್ಟು ಒಡೆದ ಮೊಟ್ಟೆಗಳನ್ನು ಹಾಕಿಕೊಳ್ಳಿ. ತಿರುಗಿಸದೆ ಹಾಗೆಯೇ ಕುದಿಬರಲು ಬಿಡಿ. ಸಣ್ಣ ಉರಿಯಲ್ಲಿ 3 ನಿಮಿಷ ಕುದಿ ಬಂದ ಬಳಿಕ ತಿರುಗಿಸಿಕೊಂಡು ಮೊಟ್ಟೆ ಬೇಯಲು ಬಿಡಿ. ಒಟ್ಟು 5ರಿಂದ 6 ನಿಮಿಷದಲ್ಲಿ ಮೊಟ್ಟೆ ಕುದಿಯುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ಮಸಾಲೆ ಭರಿತ ಮೊಟ್ಟೆ ಸಾರು ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ವಿಧಾನದಲ್ಲಿ ಮೊಟ್ಟೆ ಸಾರು ಮಾಡಿ ನೋಡಿ.



Click it and Unblock the Notifications