Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಮೂಲಿ ಅಲ್ಲ ಮಂಡಕ್ಕಿ ಇಡ್ಲಿ; ಕಡಿಮೆ ಸಮಯದಲ್ಲಿ ಥಟ್ ಅಂತ ಮಾಡಿ ನೋಡಿ!
ನೀವು ಪ್ರತಿ ದಿನ ಬೆಳಗ್ಗೆ ತಿಂಡಿಗೆ ಯಾವ ಖಾದ್ಯ ಮಾಡಬೇಕು ಎಂಬ ಗೊಂದಲವಂತು ಕಾಡಬಹುದು. ಹಾಗೆ ಹಲವರು ಇಡ್ಲಿ ಮಾಡಿ ಸವಿಯೋದು ಬೆಳಗ್ಗೆ ಫೇಮಸ್ ತಿಂಡಿಯಲ್ಲಿ ಒಂದಾಗಿದೆ. ಕಡಿಮೆ ಎಣ್ಣೆ ಬಳಸಿ ಮಾಡುವ ಈ ತಿಂಡಿ ಫೈಬರ್ ತುಂಬಿರಲಿದೆ. ಹೀಗಾಗಿ ಎಲ್ಲರು ಇದನ್ನು ಸವಿಯಲು ಮುಂದಾಗೋದು ನೋಡಬಹುದು. ಇನ್ನು ಇಡ್ಲಿಗಳಲ್ಲಿ ಹತ್ತು ಹಲವು ಬಗೆಗಳಿವೆ.
ಇಡ್ಲಿಗಳಲ್ಲಿ ಬಗೆ ಬಗೆಯ ಇಡ್ಲಿಗಳು ಅಂದ್ರೆ ಎಲ್ಲರುಗೂ ಇಷ್ಟವಾಗುತ್ತೆ. ರವೆ ಇಡ್ಲಿ, ಮಸಾಲ ಇಡ್ಲಿ, ಹಾಗೆ ಹತ್ತಾರು ಬಗೆಯ ಇಡ್ಲಿ ನೀವು ಕೂಡ ಮಾಡಿ ಸವಿದಿರುತ್ತೀರಿ. ಹಾಗೆ ಈ ಇಡ್ಲಿಗಳು ಬಹಳ ರುಚಿ ನೀಡಲಿದೆ. ಹಾಗೆ ಇಡ್ಲಿ ಮಾಡುವುದು ಬಹಳ ಸುಲಭ ಸಹ ಹೌದು, ಹಿಂದಿನ ದಿನ ಒಂದಿಷ್ಟು ತಯಾರಿ ಮಾಡಿಟ್ಟರೆ ಸುಲಭವಾಗಿ ಮಾಡಿ ಮುಗಿಸಬಹುದಾದ ತಿಂಡಿ ಇದಾಗಿರಲಿದೆ.

ಇಡ್ಲಿ ಮಾಡುವ ವಿಧಾನದಲ್ಲಿ ನಾವಿಂದು ಹೊಸ ವಿಧಾನವೊಂದರ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ನಾವಿಂದು ಸುಲಭವಾಗಿ ಮಾಡಿ ಮುಗಿಸುವ ಮಂಡಕ್ಕಿ ಇಡ್ಲಿ ಕುರಿತು ತಿಳಿಯೋಣ. ಈ ಮಂಡಕ್ಕಿ ಇಡ್ಲಿ ಬಹಳ ರುಚಿಕರವಾಗಿಯೂ ಮೃದುವಾಗಿಯೂ ಮಾಡಬಹುದು. ಹಾಗೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮಂಡಕ್ಕಿ ಇಡ್ಲಿ ಬಹಳ ರುಚಿ ನೀಡಲಿದೆ.
ಮಂಡಕ್ಕಿ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು, ಮಂಡಕ್ಕಿ ಇಡ್ಲಿ ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಂಡಕ್ಕಿ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಂಡಕ್ಕಿ
- ಉಪ್ಪಿಟ್ಟು ರವೆ
- ಈನೋ ಅಥವಾ ಅಡುಗೆ ಸೋಡಾ
- ಎಣ್ಣೆ
- ಉಪ್ಪು
ಮಂಡಕ್ಕಿ ಇಡ್ಲಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 2 ಕಪ್ ಅಳತೆಯ ಮಂಡಕ್ಕಿ ಹಾಕಿಕೊಳ್ಳಿ. ನಂತರ ಅದಕ್ಕೆ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಮಂಡಕ್ಕಿ ಹಿಂಡಿಕೊಂಡು ಇಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್‌ಗೆ ಮಂಡಕ್ಕಿ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಮಂಡಕ್ಕಿ ತೆಗೆದುಕೊಂಡ ಕಪ್‌ನಲ್ಲಿ 1 ಕಪ್ ಉಪ್ಪಿಟ್ಟು ರವೆಯನ್ನು ಅದೇ ಬೌಲ್‌ಗೆ ಸೇರಿಸಿ, ಅರ್ಧ ಕಪ್ ಮೊಸರು ಹಾಕಿಕೊಂಡು ಮಿಕ್ಸ್ ಮಾಡಿ.
ಸ್ವಲ್ಪ ನೀರು ಸಹ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಈ ಹಿಟ್ಟು ಗಟ್ಟಿಯಾಗಿ ಬರಬೇಕು ಹಾಗೆ ಕಲಸಿಕೊಳ್ಳಿ. ಹಾಗೆ ಇದಕ್ಕೆ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ 20 ನಿಮಿಷ ಹಾಗೆಯೇ ಬಿಡಿ. ಹೀಗೆ 20 ನಿಮಿಷ ಬಿಟ್ಟ ಬಳಿಕ ಇದು ಗಟ್ಟಿಯಾಗಿರುತ್ತದೆ. ನಂತರ ಇದಕ್ಕೆ ಮತ್ತೆ ಸ್ವಲ್ಪ ಮೊಸರು ಹಾಕಿ ಮಿಶ್ರಣ ಮಾಡಿ.
ಇಗ ಇದಕ್ಕೆ ಕೊನೆಯಲ್ಲಿ ಈನೋ ಪುಡಿ ಅಥವಾ ಅಡುಗೆ ಸೋಡಾ ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಇಡ್ಲಿ ಕಪ್‌ಗಳಿಗೆ ಎಣ್ಣೆ ಹಚ್ಚಿಕೊಂಡು ಇಟ್ಟುಕೊಳ್ಳಿ ಹಾಗೆ ಹಿಟ್ಟು ಹಾಕಿಕೊಂಡು ಒಲೆ ಮೇಲೆ ಇಟ್ಟು 10 ರಿಂದ 12 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮಂಡಕ್ಕಿ ಇಡ್ಲಿ ಸಿದ್ದವಾಗುತ್ತೆ.
ಈ ಇಡ್ಲಿಗೆ ಜೊತೆಯಾಗಿ ಯಾವುದಾದರೊಂದು ಚಟ್ನಿ ಮಾಡಿಕೊಂಡರೆ ರುಚಿ ದುಪ್ಪಟ್ಟಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications