Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ಯಾಚುಲರ್ ಅಡುಗೆ: ಅತ್ಯುದ್ಭುತ ರುಚಿಯ ವಿಭಿನ್ನ ಶೈಲಿಯ ಕುಷ್ಕ ಮಾಡಿ ನೋಡಿ..!!
ವೆಜ್ ಪ್ರಿಯರು ಹಾಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೆ ಒಂದೇ ಖಾದ್ಯ ಮಾಡಿ ಸವಿಯುವುದನ್ನು ನೋಡಿರುತ್ತೇವೆ. ಅದ್ರಲ್ಲೂ ಬ್ಯಾಚುಲರ್ಸ್ ಯಾವಾಗಲು ಇದೇ ರೀತಿ ಮಾಡಿಕೊಳ್ಳುವುದು ಕಾಮನ್, ಏಕೆಂದರೆ ಅವರಿಗೆ ಅಡುಗೆ ಕೆಲಸ ಬಿಟ್ಟು ಬೇರೆ ಕೆಲಸಗಳು ಕೂಡ ಹೆಚ್ಚು ಸಮಯ ಹಿಡಿಯುವ ಕಾರಣಕ್ಕೆ ಅಡುಗೆ ಮನೆಯಲ್ಲಿ ಕಡಿಮೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಹೀಗಾಗಿ ಎರಡು ಹೊತ್ತಿಗೆ ಸವಿಯುವಷ್ಟು ಖಾದ್ಯವನ್ನು ಒಮ್ಮೆಲೆ ಮಾಡಿಕೊಳ್ಳುವುದು ಹೆಚ್ಚು.
ಇಂತಹ ಸಮಯದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಸವಿಯಲು ವೆಜ್ ಕುಷ್ಕ ಮಾಡಬಹುದು. ಇಲ್ಲವೆ ಮಧ್ಯಾಹ್ನ ರಾತ್ರಿಗೆ ಸೇರಿಸಿ ಒಟ್ಟಿಗೆ ಈ ಕುಷ್ಕ ಮಾಡಿ ಸವಿಯಬಹುದು. ವೆಜ್ ಪ್ರಿಯರಿಗೆ ಅಚ್ಚುಮೆಚ್ಚಿನ ಖಾದ್ಯ ಇದಾಗಿದೆ. ಆದ್ರೆ ಸಾಮಾನ್ಯವಾಗಿ ಎಲ್ಲರು ಮಾಡುವಂತೆ ಈ ಕುಷ್ಕ ಮಾಡುವ ಬದಲಾಗಿ ನಾವಿಂದು ಅದ್ಭುತ ರುಚಿಯ ವಿಭಿನ್ನ ಶೈಲಿಯಲ್ಲಿ ಕುಷ್ಕ ಮಾಡುವ ಕುರಿತು ತಿಳಿದುಕೊಳ್ಳೋಣ.

ಈ ಕುಷ್ಕ ನಿಮ್ಮ ಬಾಯಿ ರುಚಿ ಹೆಚ್ಚಿಸುವ ಜೊತೆಗೆ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದಾಗಿದೆ. ಹೀಗಾಗಿ ಎಲ್ಲರಿಗೂ ಇದು ಇಷ್ಟವಾಗುವ ಖಾದ್ಯ. ಹಾಗಾದ್ರೆ ಈ ಕುಷ್ಕ ಮಾಡುವುದು ಹೇಗೆ? ಸುಲಭದ ಕುಷ್ಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಕುಷ್ಕ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಷ್ಕ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ- 1 ಕಪ್
- ಪಲಾವ್ ಎಲೆ - 2
- ಚಕ್ರಮೊಗ್ಗು
- ದಾಲ್ಚಿನ್ನಿ - 3 ಪಿಸಿಗಳು
- ಲವಂಗ-3
- ಏಲಕ್ಕಿ-3
- ಈರುಳ್ಳಿ-4
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 tbs
- ಪುದೀನ
- ಕೊತ್ತಂಬರಿ ಸೊಪ್ಪು - 1/2 ಕಪ್
- ಹಸಿರು ಮೆಣಸಿನಕಾಯಿ - 4
- ಖಾರದ ಪುಡಿ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಟೊಮೆಟೊ - 1
- ಮೊಸರು - 2 tbs
- ಬಿರಿಯಾನಿ ಪುಡಿ
- ಎಣ್ಣೆ
- ಉಪ್ಪು
ಕುಷ್ಕ ಮಾಡುವ ವಿಧಾನವೇನು?
ಮೊದಲು ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಸಿಡಿ. ಈಗ ಒಲೆ ಮೇಲೆ ಬಾನಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಏಲಕ್ಕಿ, ಚಕ್ಕೆ, ಪಲಾವ್ ಎಲೆ, ಲವಂಗ, ಚಕ್ರಮೊಗ್ಗು ಮರಾಠಿ ಮೊಗ್ಗು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಈರುಳ್ಳಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಪುದಿನ ಎಲೆಗಳು, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಉಪ್ಪು, ನೀರು ಹಾಕಿ ಗ್ರೀನ್ ಮಸಾಲೆಯಂತೆ ಚೆನ್ನಾಗಿ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಇರುವ ಮಸಾಲೆಯನ್ನು ತಿರುಗಿಸಿಕೊಳ್ಳುತ್ತಾ ಇದಕ್ಕೆ ರುಬ್ಬಿರುವ ಮಸಾಲೆಯನ್ನು ಹಾಕಿಕೊಳ್ಳಿ. ಹಾಗೆ ಖಾರದ ಪುಡಿ, ಧನಿಯಾ ಪುಡಿ, ಅರಶಿಣ, ಹಾಗೆ ಒಂದು ಟೊಮೆಟೋ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ 3 ಸ್ಪೂನ್ ಮೊಸರು, ಬಿರಿಯಾನಿ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪವೇ ನೀರು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿ.
ಈಗ ಕುದಿಬರಲು ಆರಂಭಿಸಿದಾಗ 2 ಕಪ್ ನೀರು ಹಾಕಿಕೊಳ್ಳಿ. ಇದೇ ಕಪ್‌ನಲ್ಲಿ 1 ಕಪ್ ಅಕ್ಕಿ ತೆಗೆದುಕೊಂಡಿರಬೇಕು. ಈಗ ಅಕ್ಕಿಯನ್ನು ಈ ಕುಕ್ಕರ್‌ಗೆ ಹಾಕಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿ ಹೊಡೆದ ಬಳಿಕ ಒಲೆ ಆಫ್ ಮಾಡಿ ಹಾಗೆಯೆ ಬಿಡಿ. ಅನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಕುಷ್ಕ ರೆಡಿ. ನೀವು ಕೂಡ ಮನೆಯಲ್ಲಿ ಬ್ಯಾಚುಲರ್ ಅಡುಗೆ ಮಾಡಿ ನೋಡಿ.



Click it and Unblock the Notifications