Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಮೂಲಿ ಅಲ್ಲ ಇದು ಜೀರಿಗೆ ಚಿತ್ರಾನ್ನ; 10 ನಿಮಿಷದೊಳಗೆ ಸಿದ್ದ ಮಾಡಿ ಸವಿದು ನೋಡಿ!
ಬೆಳಗ್ಗೆ ತಿಂಡಿಗೆ ನೀವು ರೈಸ್‌ನಿಂದ ಮಾಡುವಂತಹ ಹಲವು ತಿಂಡಿ ಮಾಡಿ ಸವಿದಿರುತ್ತೀರಿ. ಬಹುತೇಕರು ಪಲಾವ್, ರೈಸ್ ಬಾತ್ ಸವಿಯೋದಕ್ಕೆ ಇಷ್ಟಪಡುತ್ತಾರೆ, ಹಾಗೆ ಬಹುತೇಕ ಸಮಯದಲ್ಲಿ ಹೋಟೆಲ್‌ಗೆ ಭೇಟಿ ನೀಡಿದಾಗಲು ಇಂತಹ ಯಾವುದಾದರು ಖಾದ್ಯ ಸವಿಯೋದು ಕಾಮನ್. ಆದ್ರೆ ಮನೆಯಲ್ಲಿ ರೈಸ್ ಬಳಸಿ ಮಾಡುವ ಚಿತ್ರಾನ್ನ ಅಂದ್ರೆ ಕೆಲವರು ಇಷ್ಟಪಡದೆ ಇರಬಹುದು.
ಅದ್ರಲ್ಲೂ ಸ್ಪೆಷಲ್ ಚಿತ್ರಾನ್ನ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಚಿತ್ರಾನ್ನವನ್ನು ಹಲವು ಬಗೆಯಲ್ಲಿ ವಿಧದಲ್ಲಿ ಮಾಡಬಹುದು. ಹಲವು ಬಗೆಯ ಚಿತ್ರಾನ್ನ ರೆಸಿಪಿಗಳು ಬಾಯಲ್ಲಿ ನೀರು ತರಿಸುತ್ತವೆ. ಹೀಗಾಗಿ ನಾವಿಂದು ಜೀರಿಗೆ ಬಳಸಿ ಮಾಡುವ ಚಿತ್ರಾನ್ನ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಜೀರಿಗೆ ಬಳಸಿ ಮಾಡುವ ಚಿತ್ರಾನ್ನದ ಕುರಿತು ತಿಳಿದುಕೊಳ್ಳೋಣ.

ನೀವು ಕೇವಲ 5 ರಿಂದ 10ನಿಮಿಷದೊಳಗೆ ಚಿತ್ರಾನ್ನ ಮಾಡಿ ಸವಿದಿರುತ್ತೀರಿ. ಬಹುತೇಕರು ಹಿಂದಿನ ದಿನ ಉಳಿದ ಅನ್ನದಿಂದ ಚಿತ್ರಾನ್ನ ಮಾಡುವುದು ಹಾಗೆ ಸಮಯ ಇಲ್ಲದಿದ್ದರೆ ಸುಲಭವಾಗಿ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕರು ಮಾಡಿ ಮುಗಿಸುವುದು ನೋಡಬಹುದು. ಹಾಗೆ ಈ ಸಮಯವಿಲ್ಲದ ಗಡಿಬಿಡಿಯ ಸಮಯದಲ್ಲಿ ಥಟ್ ಅಂತ ಮಾಡುವ ಜೀರಿಗೆ ಚಿತ್ರಾನ್ನ ಕುರಿತು ನಾವಿಂದು ತಿಳಿಯೋಣ.
ಜೀರಿಗೆ ಚಿತ್ರಾನ್ನ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಬೇಕು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಜೀರಿಗೆ ಚಿತ್ರಾನ್ನ ಮಾಡಲು ಬೇಕಾಗುವ ಅಗತ್ಯ ವಸ್ತುಗಳು
- ಅನ್ನ
- ಜೀರಿಗೆ
- ತೆಂಗಿನ ಕಾಯಿ ತುರಿ
- ಅರಶಿಣ
- ಒಣ ಮೆಣಸು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಶೇಂಗಾ
- ಉದ್ದಿನ ಬೇಳೆ
- ಸಾಸಿವೆ
- ಎಣ್ಣೆ
ಜೀರಿಗೆ ಚಿತ್ರಾನ್ನ ಮಾಡುವ ಸುಲಭವ ವಿಧಾನವೇನು?
ಮೊದಲು ಒಂದು ಮಿಕ್ಸಿ ಕಾರ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ತೆಂಗಿನತುರಿ, ಒಣ ಮೆಣಸು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣು, ಬೆಲ್ಲ ಹಾಕಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ರುಬ್ಬಿದ ಮಸಾಲೆಯನ್ನು ಒಂದು ಬೌಲ್‌ಗೆ ಹಾಕಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಶೇಂಗಾ ಹಾಕಿ ಬಿಸಿ ಮಾಡಿಕೊಂಡು ತೆಗೆದು ಬದಿಗಿಟ್ಟುಕೊಳ್ಳಿ. ನಂತರ ಇದಕ್ಕೆ 1 ಚಮಚ ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಕರಿಬೇವು ಹಾಕಿ, ಕಾಲು ಚಮಚ ಅರಶಿಣ ಹಾಕಿ. ಈಗ ಮೊದಲು ಹುರಿದುಕೊಂಡಿದ್ದ ಶೇಂಗಾ ಮತ್ತೆ ಇದಕ್ಕೆ ಹಾಕಿಕೊಂಡು, ಮೊದಲು ರುಬ್ಬಿದ್ದ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದರ ನೀರಿನ ಪಸೆ ಸ್ವಲ್ಪ ಕಡಿಮೆಯಾಗುವವರೆಗೂ ಹುರಿದುಕೊಳ್ಳಿ. ಈಗ ಮೊದಲೇ ಮಾಡಿಕೊಂಡಿದ್ದ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ಹುಡಿ ಹುಡಿಯಾದ ಅನ್ನವನ್ನು ಹಾಕಿ ಮಸಾಲೆ ಚೆನ್ನಾಗಿ ಹಿಡಿಯುವಂತೆ ಕಲಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕೊನೆಯಲ್ಲಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಜೀರಿಗೆ ಚಿತ್ರಾನ್ನ ರೆಡಿಯಾಗುತ್ತೆ. ನೀವು ಸಹ ಮನೆಯಲ್ಲಿ, ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಮಾಡಿ ಸವಿದು ನೋಡಿ.
ಎಲ್ಲಾ ವಸ್ತುಗಳು ಇದ್ದರೆ ಈ ಚಿತ್ರಾನ್ನ ಮಾಡಲು ಕೇವಲ 5 ನಿಮಿಷ ಸಾಕಾಗುತ್ತದೆ. ಬೆಳಗ್ಗೆ ಗಡಿಬಿಡಿಯಲ್ಲಿಯೂ ಸಹ ಈ ಚಿತ್ರಾನ್ನ ಸುಲಭವಾಗಿ ಮಾಡಿ ಮುಗಿಸಬಹುದು. ಇದರ ರುಚಿ ಸಹ ಬೇರೆಲ್ಲಾ ಚಿತ್ರಾನ್ನಕ್ಕಿಂತ ಅದ್ಭುತವಾಗಿರಲಿದೆ.



Click it and Unblock the Notifications