Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧಾರವಾಡದ ಸ್ಪೆಷಲ್ ತುಪ್ಪದ ಅವಲಕ್ಕಿ ಮಾಡಿ..! 5 ನಿಮಿಷದಲ್ಲಿ ರೆಡಿ
ನಾವು ಬೆಳಗ್ಗೆ ತಿಂಡಿಗೆ ಎಷ್ಟೆಲ್ಲಾ ವಿಧವಾದ ಖಾದ್ಯ ಮಾಡಿ ಸವಿದಿರುತ್ತೇವೆ. ಕೆಲವೊಮ್ಮೆ ತಿಂಡಿ ಇಷ್ಟವಾಗದಿದ್ದರೂ ಕೂಡ ಸವಿದಿರುತ್ತೇವೆ. ಮತ್ತೆ ಗೃಹಿಣಿಯರಂತು ಬೆಳಗ್ಗೆ ಎದ್ದ ತಕ್ಷಣ ಅವರ ತಲೆಯಲ್ಲಿ ಇಂದು ಯಾವ ತಿಂಡಿ ಮಾಡಬೇಕು ಅನ್ನೋ ಪ್ರಶ್ನೆ ಸುಳಿಯುತ್ತಲೇ ಇರುತ್ತೆ. ಹಾಗೆ ಗಡಿ ಬಿಡಿಯಲ್ಲಿ ಕಡಿಮೆ ಸಮಯದಲ್ಲಿ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ ಮಾಡಬೇಕು ಎಂದುಕೊಂಡಿರುತ್ತಾರೆ.
ಹಾಗಾದ್ರೆ ಕಡಿಮೆ ಸಮಯದಲ್ಲಿ ಮಾಡಬಹುದುದಾದ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ ಯಾವುದು? ಹೀಗೆ ಕೇಳಿದರೆ ಹಲವು ಉತ್ತರ ಬರಬಹುದು, ಆದ್ರೆ ನಾವಿಂದು ಸುಲಭವಾಗಿ ಮಾಡಬಹುದಾದ ತುಪ್ಪದ ಅವಲಕ್ಕಿ ತಿಂಡಿ ಕುರಿತು ತಿಳಿದುಕೊಳ್ಳೋಣ. ಅವಲಕ್ಕಿಯನ್ನು ಹಲವು ರೀತಿ ಮಾಡಬಹುದು. ಅದರಲ್ಲಿ ಒಗ್ಗರಣೆ ಅವಲಕ್ಕಿ, ಗೊಜ್ಜು ಅವಲಕ್ಕಿ ತುಂಬಾನೆ ಫೇಮಸ್ ಆಗಿವೆ.

ಆದರೆ ನೀವು ಧಾರವಾಡ ಕಡೆಯಲ್ಲಿ ಈ ತುಪ್ಪದ ಅವಲಕ್ಕಿಯನ್ನ ಹೆಚ್ಚಾಗಿ ಮಾಡುತ್ತಾರೆ. ತುಪ್ಪದ ಸುವಾಸನೆಯುಕ್ತ ಅವಲಕ್ಕಿ ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ ರೀತಿ ಇರುತ್ತೆ. ಹಾಗಾದ್ರೆ ನಾವು ಈ ಅವಲಕ್ಕಿ ಮಾಡುವುದು ಹೇಗೆ ಎಂಬುದನ್ನು ಇಂದು ತಿಳಿಯೋಣ.
ತುಪ್ಪದ ಅವಲಕ್ಕಿ ಮಾಡುವುದು ಹೇಗೆ? ತುಪ್ಪದ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು, ತುಪ್ಪದ ಅವಲಕ್ಕಿ ಮಾಡುವ ಸರಿಯಾದ ಕ್ರಮವೇನು? ಎಷ್ಟು ಸಮಯ ಬೇಕು ಎಂಬುದನ್ನ ನಾವಿಲ್ಲಿ ತಿಳಿಯೋಣ.
ತುಪ್ಪದ ಅವಲಕ್ಕಿ ಮಾಡಲು ಬೇಕಾಗುವ ಪದಾರ್ಥಗಳು
- ಪೇಪರ್ ಅವಲಕ್ಕಿ- 1 ಬೌಲ್
- ಈರುಳ್ಳಿ
- ಹಸಿ ಮೆಣಸು
- ತುಪ್ಪ
- ಎಣ್ಣೆ
- ಉಪ್ಪು
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
ತುಪ್ಪದ ಅವಲಕ್ಕಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಗೂ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ. ಬಳಿಕ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಹಸಿ ಮೆಣಸು ಕರಿಬೇವು ಹಾಕಿ ಫ್ರೈ ಮಾಡಿ, ಬಳಿಕ ಈರುಳ್ಳಿ ಹಾಕಿಕೊಂಡು 30 ಸೆಕೆಂಡ್ ಬಳಿಕ ಒಲೆ ಆಫ್ ಮಾಡಿ. ಈಗ ಉಪ್ಪು, ನಿಂಬೆಹಣ್ಣು ಹಿಂಡಿಕೊಂಡು ಮಿಕ್ಸ್ ಮಾಡಿ. ಒಲೆ ಆಫ್ ಮಾಡಿರುವುದರಿಂದ ಹಾಗೆಯೆ ತಣ್ಣಗಾಗಲು ಬಿಡಿ.
ಈಗ ಇನ್ನೊಂದು ಕಡೆ ಒಂದು ಬೌಲ್‌ನಲ್ಲಿ ಅವಲಕ್ಕಿ ತೆಗೆದುಕೊಳ್ಳಿ. ಪೇಪರ್ ಅವಲಕ್ಕಿಯಾಗಿರಬೇಕು. ಇದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸಕ್ಕರೆ ಹಾಕಿ ಕಲಸಿಕೊಳ್ಳಿ. ಚೆನ್ನಾಗಿ ಮಿಕ್ಸ್ ಆದ ಬಳಿಕ ಈಗ ಒಲೆ ಮೇಲೆ ಇಟ್ಟು ತಣ್ಣಗಾಗಿರುವ ತುಪ್ಪದ ಫ್ರೈಗೆ ಈ ಅವಲಕ್ಕಿ ಹಾಕಿಕೊಳ್ಳಿ.
ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಚೆನ್ನಾಗಿ ಕೈ ಬಳಸದೆ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಒಲೆ ಹಚ್ಚಿಕೊಳ್ಳುವುದು ಬೇಡ ಹಾಗೆಯೇ ಮಿಕ್ಸ್ ಮಾಡಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತುಪ್ಪದ ಅವಲಕ್ಕಿ ರೆಡಿಯಾಗುತ್ತದೆ. ಇದನ್ನು ನೀವು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಬೆಳಗ್ಗಿನ ತಿಂಡಿಗೆ ಅತ್ಯುತ್ತಮ ಖಾದ್ಯ ಇದಾಗಿದೆ. ಮಾಡುವುದು ಸಹ ಸುಲಭ. ಕಡಿಮೆ ಸಮಯದಲ್ಲಿ ಮಾಡಬಹುದು.



Click it and Unblock the Notifications