Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಾಮಾನ್ಯ ದೋಸೆ ಮಾಡೋದು ಮರೆತು ಬಿಡಿ: ಈ ರೀತಿ ತೆಂಗಿನಕಾಯಿ ದೋಸೆ ಮಾಡಿ!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ಖಾದ್ಯಗಳ ಮಾಡಿರುತ್ತೀರಿ. ಅದ್ರಲ್ಲೂ ರುಚಿ ರುಚಿಯಾದ ಖಾದ್ಯಗಳ ಪೈಕಿ ದೋಸೆ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುವ ಖಾದ್ಯ. ದೋಸೆ ಹೆಸರು ಕೇಳಿದ ತಕ್ಷಣ ಹಲವರಿಗೆ ಮಸಾಲ ದೋಸೆ, ರವೆ ದೋಸೆ, ಈರುಳ್ಳಿ ದೋಸೆ, ಉದ್ದಿನ ದೋಸೆ, ನೀರ್ ದೋಸೆ ಹೀಗೆ ಹಲವು ಬಗೆಯ ದೋಸೆಗಳು ಬಾಯಲ್ಲಿ ನೀರು ತರಿಸುತ್ತವೆ.
ಇನ್ನು ಈ ದೋಸೆಗಳನ್ನು ಸವಿಯೋಕೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ದೋಸೆ ಮಾಡಲು ಹಿಂದಿನ ದಿನವೇ ಹಿಟ್ಟು ಮಾಡುವುದು, ತಯಾರಿ ಮಾಡಿಕೊಳ್ಳುವುದು ನೋಡಬಹುದು. ಆದ್ರೆ ಇಂತಹ ದೋಸೆಗಳ ನಡುವೆಯೂ ವಿಶೇಷ ಎನಿಸುವ ವಿಭಿನ್ನ ರುಚಿಯ ಹಲವು ದೋಸೆಗಳ ಮಾಡಿ ಸವಿಯೋದು ನೋಡಬಹುದು.

ಇಂತಹ ದೋಸೆಗಳಲ್ಲಿ ನಾವಿಂದು ಸುಲಭವಾಗಿ ಮಾಡಲಾಗುವ ತೆಂಗಿನಕಾಯಿ ದೋಸೆ ಕುರಿತು ತಿಳಿದುಕೊಳ್ಳೋಣ. ಅದ್ರಲ್ಲೂ ಈ ತೆಂಗಿನಕಾಯಿ ದೋಸೆ ಮಾಡಿ ಸವಿಯೋದು ಹೇಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಹಿಡಿಯಲಿದೆ? ಇದಕ್ಕೆ ಹಿಟ್ಟು ಮಾಡಿಕೊಳ್ಳುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತೆಂಗಿನಕಾಯಿ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ತೆಂಗಿನಕಾಯಿ
ಅಕ್ಕಿ
ಉಪ್ಪು
ಎಣ್ಣೆ
ತೆಂಗಿನಕಾಯಿ ದೋಸೆ ಮಾಡುವ ಸುಲಭದ ವಿಧಾನ ಇದು
ಮೊದಲು 2 ಕಪ್ ಅಕ್ಕಿ ತೆಗೆದುಕೊಂಡು ಅದನ್ನು ಒಂದು ಬೌಲ್‌ಗೆ ಹಾಕಿಕೊಂಡು 2 ಸ್ಪೂನ್ ಮೆಂತ್ಯ ಹಾಕಿ ಚೆನ್ನಾಗಿ ತೊಳೆದು ನೀರು ಹಾಕಿ ನೆನೆಯಲು ಬಿಡಿ. 4ರಿಂದ 5 ಗಂಟೆ ನೆನೆದರೆ ಸಾಕಾಗುತ್ತದೆ. 5 ಗಂಟೆ ಬಳಿಕ ಈಗ ನೀರು ತೆಗೆದು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಬೇಕು ನೀರು ಕಡಿಮೆ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಬಹಳ ತೆಳುವಾಗಿ ಹಿಟ್ಟು ಮಾಡಿಕೊಳ್ಳಬೇಡಿ. ಹಾಗೆ ರುಬ್ಬುವಾಗ ಉಪ್ಪು ಹಾಕಿಕೊಳ್ಳಬೇಡಿ. ಅಕ್ಕಿ ರುಬ್ಬಿಕೊಂಡ ಬಳಿಕ ಈಗ ಒಂದು ಕಪ್ ತೆಂಗಿನಕಾಯಿ ಹಾಕಿಕೊಂಡು ಅದನ್ನು ಸಹ ರುಬ್ಬಬೇಕು. ಇದು ಕೂಡ ಬಹಳ ಮೃದುವಾಗಿ ಬರಬೇಕು. ಸ್ವಲ್ಪ ನೀರು ಹಾಕಿ ಮೃದುವಾಗಿ ರುಬ್ಬಿಕೊಂಡು ಅಕ್ಕಿ ಹಿಟ್ಟಿನ ಜೊತೆಗೆ ಹಾಕಿ ಮಿಕ್ಸ್ ಮಾಡಿ.
ಮಿಕ್ಸ್ ಮಾಡುವಾಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ. ಹೀಗೆ ಒಂದು ರಾತ್ರಿ ಸಂಪೂರ್ಣ ಬಿಡಬೇಕು. ಮಾರನೆ ದಿನ ಇದನ್ನು ಚೆನ್ನಾಗಿ ಕಲಸಿಕೊಳ್ಳಿ. ಸೋಡಾ ಪುಡಿ ಬೇಕಿದ್ದರೆ ನೀವು ಬಳಸಬಹುದು, ಹಾಗೆ 2 ಸ್ಪೂನ್ ಸಕ್ಕರೆ ಕೂಡ ಬಳಸಬಹುದು. ಈಗ ದೋಸೆ ಕಾವಲಿ ಒಲೆ ಮೇಲೆ ಇಟ್ಟು ಎಣ್ಣೆ ಹಚ್ಚಿಕೊಳ್ಳಿ.
ಕಾವಲಿ ಕಾದ ಬಳಿಕ ದೋಸೆ ಹಿಟ್ಟು ಹಾಕಿಕೊಂಡು ದೋಸೆ ಮಾಡಿ. ಈ ದೋಸೆ ಬಹಳ ತೆಳುವಾಗಿ ಬೇಡ, ದಪ್ಪವಾಗಿಯೇ ಮಾಡಿಕೊಳ್ಳಿ. ಒಂದು ಬದಿ ಕಾಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ತೆಂಗಿನಕಾಯಿ ದೋಸೆ ಸಿದ್ದವಾಗುತ್ತೆ. ನೀವು ಕೂಡ ಬ್ರೇಕ್ ಫಾಸ್ಟ್‌ಗೆ ಈ ದೋಸೆ ಮಾಡಿ ಸವಿದು ನೋಡಿ.
ಒಮ್ಮೆ ಈ ದೋಸೆ ಮಾಡಿದ್ರೆ ಪದೇ ಪದೇ ಇದನ್ನೇ ಮಾಡುತ್ತೀರಿ. ಉದ್ದು ಬಳಸದೆಯೇ ಮಾಡುವ ದೋಸೆ ಅದ್ಭುತ ರುಚಿ ನೀಡಲಿದ. ಹಾಗೆ ಇದು ಬಹಳ ಮೃದುವಾಗಿ ಬರಲಿದೆ. ಮಕ್ಕಳಿಗೂ ಈ ದೋಸೆ ಇಷ್ಟವಾಗೋದ್ರಲ್ಲಿ ಅನುಮಾನವಿಲ್ಲ. ನೀವು ಸಹ ಮಾಡಿ ನೋಡಿ. ಮಾಡೋದು ಕೂಡ ತುಂಬಾನೆ ಸುಲಭ, ಕೆಲವೇ ವಸ್ತುಗಳ ಬಳಸಿಯೂ ಮಾಡಬಹುದು.



Click it and Unblock the Notifications