Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರಾಹ್ಮಣ ಹೋಟೆಲ್ ಶೈಲಿ ಪಲಾವ್ ಮಾಡಿದ್ದೀರಾ..! ಈ ರುಚಿ ಮತ್ತೆಲ್ಲೂ ಸಿಗಲ್ಲ..!
ನೀವು ಬ್ರೇಕ್ ಫಾಸ್ಟ್‌ಗೆ ಸವಿಯಲು ಪಲಾವ್ ಮಾಡಿಯೇ ಮಾಡಿರುತ್ತೀರಿ. ಕೆಲವರು ವಾರದಲ್ಲಿ ಹಲವು ಬಾರಿ ಪಲಾವ್ ಮಾಡಿರುತ್ತಾರೆ. ಅದ್ರಲ್ಲೂ ಬ್ಯಾಚುಲರ್ಸ್‌ಗಳಿಗೆ ಈ ಪಲಾವ್ ಮಾಡೋದು ಬಹಳ ಇಷ್ಟ. ಹಾಗೆ ಬಹಳ ಸುಲಭವೂ ಕೂಡ. ಹೀಗಾಗಿ ಎಲ್ಲರು ಪಲಾವ್ ಮಾಡಲು ಇಷ್ಟಪಡುತ್ತಾರೆ. ಹಾಗೆ ಹೋಟೆಲ್‌ಗಳಲ್ಲೂ ಪಲಾವ್ ರೆಸಿಪಿಗಳ ನೋಡಬಹುದು. ಒಂದಕ್ಕಿಂತ ಒಂದು ವಿಭಿನ್ನ ಶೈಲಿಯ ಪಲಾವ್ ನಾವೀಗ ಸವಿಯಬಹುದು.
ಕೆಲವೊಂದು ಹೋಟೆಲ್‌ಗಳು ಈ ಪಲಾವ್ ಶೈಲಿಗೆ ಬಹಳ ಫೇಮಸ್ ಆಗಿರುತ್ತವೆ. ಈ ಪಲಾವ್ ನಾವು ಮನೆಯಲ್ಲಿ ಮಾಡುವ ಪಲಾವ್‌ಗಿಂತ ಬಹಳ ರುಚಿಯಾಗಿರುತ್ತೆ. ಹೀಗಾಗಿ ಮನೆಯಲ್ಲಿ ಪಲಾವ್ ಸವಿಯುವುದಕ್ಕೂ ಹೋಟೆಲ್ ರುಚಿಯ ಪಲಾವ್‌ಗೂ ಬಹಳ ವ್ಯತ್ಯಾಸ ನಾವು ನೋಡಬಹುದು. ಹಾಗೆ ನಾವಿಂದು ರುಚಿ ರುಚಿಯಾಗಿ ಹೊಸ ಶೈಲಿಯಲ್ಲಿ ಪಲಾವ್ ಮಾಡುವ ಕುರಿತು ತಿಳಿದುಕೊಳ್ಳೋಣ.

ನೀವು ಯಾವುದಾದರು ಬ್ರಾಹ್ಮಣರ ಹೋಟೆಲ್‌ಗೆ ಹೋದಾಗ ಅವರು ಮಾಡುವಂತಹ ಅದ್ಭುತವಾಗ ಪಲಾವ್ ಸವಿದು ನೋಡಿ. ಕಡಿಮೆ ಮಸಾಲೆ ಬಳಸಿ ಅದ್ಭುತವಾದ ರುಚಿಯ ಪಲಾವ್ ಇದಾಗಿರಲಿದೆ. ಹೀಗಾಗಿ ನಾವಿಂದು ಈ ಬ್ರಾಹ್ಮಣ ಶೈಲಿಯ ತರಕಾರಿ ಪಲಾವ್ ಮಾಡುವ ಕುರಿತಂತೆ ತಿಳಿಯೋಣ. ಈ ಪಲಾವ್ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸ್ಪೆಷಲ್ ತರಕಾರಿ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಕ್ಕಿ - 3 ಕಪ್
- ಪಲಾವ್ ಎಲೆ
- ದಾಲ್ಚಿನ್ನಿ
- ಚಕ್ರಮೊಗ್ಗು
- ಜಾಪತ್ರೆ
- ಏಲಕ್ಕಿ
- ಈರುಳ್ಳಿ
- ಟೊಮೆಟೋ
- ಕ್ಯಾರೆಟ್
- ಬೀನ್ಸ್
- ಹಸಿ ಬಟಾಣಿ
- ಧನಿಯಾ ಕಾಳು
- ಬೆಳ್ಳುಳ್ಳಿ
- ಶುಂಠಿ
- ಹಸಿ ಮೆಣಸು
- ಲವಂಗ
- ಜೀರಿಗೆ
- ತೆಂಗಿನಕಾಯಿ ತುರಿ
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಸ್ಪೆಷಲ್ ತರಕಾರಿ ಪಲಾವ್ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬೆಳ್ಳುಳ್ಳಿ, ಹಸಿ ಮೆಣಸು, ಚಕ್ಕೆ, ಲವಂಗ, ಶುಂಠಿ, ಏಲಕ್ಕಿ, ಧನಿಯಾ ಕಾಳು, ಜೀರಿಗೆ, ಸೋಂಕಾಳು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಸ್ಪೂನ್ ತೆಂಗಿನ ತುರಿ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು ಹಾಕಿ 2 ನಿಮಿಷ ಫ್ರೈ ಮಾಡಿ.
ನಂತರ ಇದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಸಾಲೆ ಒಂದು ಬೌಲ್‌ಗೆ ಹಾಕಿಡಿ.
ಈಗ ಒಂದು ಬೌಲ್‌ಗೆ ಅಳತೆ ಕಪ್‌ನಲ್ಲಿ 2 ಕಪ್ ಅಕ್ಕಿ ತೆಗೆದುಕೊಂಡು ತೊಳೆದು ನಂತರ ನೆನೆಸಿಡಬೇಕು. ಹೀಗೆ ಮಾಡಿದರೆ ಉದುರು ಉದುರಾಗಿ ಪಲಾವ್ ಮಾಡಬಹುದು. ಈಗ ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಜಾಪತ್ರೆ, ಪಲಾವ್ ಎಲೆ, ಚಕ್ಕೆ, ಚಕ್ರಮೊಗ್ಗು, ದಾಲ್ಚಿನ್ನಿ ಹಾಕಿ ಬಳಿಕ ಈರುಳ್ಳಿ ಇದಕ್ಕೆ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಫ್ರೈ ಮಾಡಿದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ತರಕಾರಿಗಳ ಹಾಕಿಕೊಳ್ಳಿ. ಹಾಗೆ ಹಸಿ ಬಟಾಣಿ ಕೂಡ ಹಾಕಿ ಮಿಕ್ಸ್ ಮಾಡಿ 4 ನಿಮಿಷಗಳ ಕಾಲ ಫ್ರೈ ಮಾಡಿ.
4 ನಿಮಿಷದ ಬಳಿಕ ಟೊಮೆಟೋ, ಉಪ್ಪು ಹಾಕಿದ ಬಳಿಕ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಇದಕ್ಕೆ ಹಾಕಿ ಅರ್ಧ ಕಪ್ ನೀರು ಸಹ ಇದಕ್ಕೆ ಹಾಕಿಕೊಳ್ಳಿ. ಈಗ ಮಿಕ್ಸ್ ಮಾಡಿ ಕುದಿಬರಲು ಬಿಡಿ. 4 ನಿಮಿಷದ ಬಳಿಕ ನೆನೆಸಿಟ್ಟ ಅಕ್ಕಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಅಳತೆ ಪ್ರಕಾರವಾಗಿ ನೀರು ಹಾಕಿಕೊಳ್ಳಿ.
ಅನಂತರ ಮಿಕ್ಸ್ ಮಾಡಿ ಈಗ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಸಿಕೊಳ್ಳಿ. ತೆರೆದ ಪಾತ್ರೆಯಲ್ಲಾದರೆ 5ರಿಂದ 6 ನಿಮಿಷದಲ್ಲಿ ಇದು ಬೇಯುತ್ತದೆ. ಇಷ್ಟಾದರೆ ರುಚಿ ರುಚಿಯ ಪಲಾವ್ ಸಿದ್ದವಾಗುತ್ತೆ. ಇದಕ್ಕೆ ಮೊಸರು ಬಜ್ಜೆ ಮಾಡಿ ಸವಿದರೆ ಅದರ ರುಚಿಗೆ ಎಲ್ಲರು ಫಿದಾ ಆಗೋದು ಪಕ್ಕ.



Click it and Unblock the Notifications