Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲಕ್ಕೆ ಬೆಸ್ಟ್ ಟೇಸ್ಟ್ ನೀಡುವ ಬೆಳ್ಳುಳ್ಳಿ ಖಾರದ ಚುರುಮುರಿ! ಮಾಡೋದು ಎಷ್ಟು ಸುಲಭ ಗೊತ್ತಾ?
ಮಳೆಗಾಲದಲ್ಲಿ ನೀವು ಯಾವುದಾದರ ಖಾರ ಖಾರದ ಸ್ನ್ಯಾಕ್ಸ್ ಸವಿಯಲು ಇಷ್ಟಪಡಬಹುದು, ಹಾಗೆ ಇದರಿಂದ ನಿಮ್ಮ ಬಾಯಿ ರುಚಿ ಹೆಚ್ಚಿಸಿಕೊಳ್ಳೋದು ನಿಮ್ಮ ಬಯಕೆ ಆಗಿರಬಹುದು, ಹಾಗೆ ಮಳೆಗಾಲದ ಸಮಯದಲ್ಲಿ ಚಳಿಯಲ್ಲಿ ಟೀ ಕಾಫಿಯ ಜೊತೆಗೆ ಯಾವುದಾದರು ತಿಂಡಿ ಇದ್ದರೇನೆ ಸಂಜೆ ಸಮಯ ಬಹಳ ಅದ್ಭುತವಾಗಿ ಕಳೆಯಬಹುದು.
ಇನ್ನು ಒಂದು ಬಾರಿ ಮಾಡಿಟ್ಟು ಹಲವು ದಿನಗಳವರೆಗೂ ಸವಿಯಬಹುದಾದ ಸ್ನ್ಯಾಕ್ಸ್ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇಂತಹ ಸ್ನ್ಯಾಕ್ಸ್‌ನಲ್ಲಿ ಈ ಖಾರ ಚುರುಮುರಿ ಸಹ ಒಂದು, ಮಂಡಕ್ಕಿ ಬಳಸಿ ಖಾರ ಖಾರವಾಗಿ ಮಾಡುವ ಮಸಾಲ ಚುರುಮುರಿಯು ಎಲ್ಲರಿಗೂ ಇಷ್ಟವಾಗುತ್ತೆ, ಹಾಗೆ ಎಲ್ಲರೂ ಸವಿಯಲು ಮುಂದಾಗುತ್ತಾರೆ. ಬೇಕರಿಗಳಲ್ಲಿ ಈ ಚುರುಮುರಿಗೆ ದುಬಾರಿ ಬೆಲೆ ನೀಡಬೇಕಾಗುತ್ತದೆ.

ಇನ್ನು ಈ ಚುರುಮುರಿಯನ್ನು ಹಲವು ರೀತಿಯಾಗಿಯೂ ಮಾಡಬಹುದು, ನಾವಿಂದು ಬೆಳ್ಳುಳ್ಳಿ ಖಾರದಂತೆ ಈ ಬೆಳ್ಳುಳ್ಳಿ ಚುರುಮುರಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ನೀವು ಬೇಕರಿಗಳಲ್ಲಿ ಸಿಗುವಂತಹ ಬೆಳ್ಳುಳ್ಳಿ ಖಾರವನ್ನು ಸವಿದಿರುತ್ತೀರಿ. ಅದರ ರುಚಿ ನಮಗೂ ಇಷ್ಟವಾಗಬಹುದು, ಆದ್ರೆ ನಾವಿಂದು ಬೆಳ್ಳುಳ್ಳು ಖಾರದಂತೆಯೇ ರುಚಿ ನೀಡುವಂತಹ ಚುರುಮುರಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಬೆಳ್ಳುಳ್ಳಿ ಬಳಸಿ ಚುರುಮುರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಂಡಕ್ಕಿ
- ಬೆಳ್ಳುಳ್ಳಿ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಇಂಗು
- ಸೇವ್
ಬೆಳ್ಳುಳ್ಳಿ ಬಳಸಿ ಚುರುಮುರಿ ಮಾಡುವುದು ಹೇಗೆ?
ಮೊದಲು ಮಂಡಕ್ಕಿಯನ್ನು ಜರಡಿ ಹಿಡಿದು ಕಸಗಳು, ಪುಡಿಯನ್ನು ಬೇರೆ ಮಾಡಿ ಒಂದು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ನಂತರ ಅದಕ್ಕೆ 2 ಸ್ಪೂನ್ ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಮಂಡಕ್ಕಿಗೆ ಎಣ್ಣೆ ಹಿಡಿಯಬೇಕು. ಹಾಗೆ ಹಾಕಿಕೊಂಡು ಚೆನ್ನಾಗಿ ಗರಿ ಗರಿಯಾಗುವಂತೆ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ಇಟ್ಟುಕೊಂಡು ಕೈ ಬಿಡದಂತೆ ಮಿಶ್ರಣ ಮಾಡುತ್ತಾ ಇದನ್ನು ಹುರಿದುಕೊಳ್ಳಿ.
ಮಂಡಕ್ಕಿ ಚೆನ್ನಾಗಿ ಗರಿ ಗರಿಯಾಗಬೇಕು. ಸುಮಾರು 4 ನಿಮಿಷ ಹುರಿದುಕೊಂಡು ಬಳಿಕ ಒಲೆ ಆಫ್ ಮಾಡಿಕೊಂಡು ಹಾಗೆಯೇ ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಂದು ಗೆಡ್ಡೆ ಬೆಳ್ಳುಳ್ಳಿಯ ಸಿಪ್ಪೆ ಬಿಡಿಸಿ ನಂತರ ಅದನ್ನು ಒಂದು ಸ್ವಲ್ಪ ಜಜ್ಜಿಕೊಂಡು ಜಾರ್‌ಗೆ ಹಾಕಿ. ಹಾಗೆ ಇದರ ಜೊತೆಗೆ ಖಾರದ ಪುಡಿ, ಇಂಗು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಈ ಮಿಶ್ರಣ ಕೆಂಪು ಖಾರದ ಚಟ್ನಿಯಂತೆ ಕಾಣಿಸಬೇಕು. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಸಣ್ಣ ಉರಿಯಲ್ಲಿ ಇಟ್ಟು ಅದಕ್ಕೆ ರುಬ್ಬಿಕೊಂಡಿರುವ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. 2 ರಿಂದ 3 ನಿಮಿಷ ಹೀಗೆ ಹುರಿದುಕೊಂಡ ಬಳಿಕ ಒಲೆ ಆಫ್ ಮಾಡಿಕೊಂಡು ಪಾತ್ರೆಯನ್ನು ಕೆಳಗೆ ಇಳಿಸಿಕೊಳ್ಳಿ.
ಈಗ ಮೊದಲೇ ಹುರಿದುಕೊಂಡಿದ್ದ ಮಂಡಕ್ಕಿಯನ್ನು ಈ ಪಾತ್ರೆಗೆ ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಬೇಕು. ಕೈಯಿಂದ ಮಿಕ್ಸ್ ಮಾಡಿದರೆ ಎಲ್ಲಾ ಮಸಾಲೆ ಚೆನ್ನಾಗಿ ಹಿಡಿಯಲಿದೆ. ಕೊನೆಯಲ್ಲಿ ಇದಕ್ಕೆ ಬೇಕರಿಯಿಂದ ತಂದಿರುವ ಸೇವ್ ಅನ್ನು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಳ್ಳುಳ್ಳಿ ಚುರುಮುರಿ ರೆಡಿಯಾಗುತ್ತದೆ. ಇದರ ರುಚಿ ನೀವು ಸವಿದರೆ ಮುಂದೆ ಮತ್ತೆ ಮತ್ತೆ ಮಾಡಿ ಸವಿಯಲು ಮುಂದಾಗೋದು ಖಚಿತ. ಮಕ್ಕಳಿಗೂ ಕೂಡ ಇದು ಬಹಳ ಇಷ್ಟವಾಗುತ್ತೆ, ಸಂಜೆ ಸಮಯದಲ್ಲಿ ಟೀ-ಕಾಫಿಯೊಂದಿಗೆ ಸವಿಯಲು ಬಹಳ ಅದ್ಭುತ ರುಚಿಯಾಗಿರಲಿದೆ.



Click it and Unblock the Notifications