Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆ ಮನೆ ಅವಲಕ್ಕಿ ಗೊಜ್ಜು: ಮನೆಯಲ್ಲೇ ಮಾಡೋದು ಹೇಗೆ ಗೊತ್ತಾ?
ನೀವು ಮದುವೆ ಮನೆ ಹಾಗೆ ಯಾವುದಾದರು ಶುಭ ಕಾರ್ಯಕ್ಕೆ ತೆರಳಿದ್ದಾಗ ಅಲ್ಲಿನ ಊಟೋಪಚಾರ ಸವಿಯಲು ಬಹಳ ಇಷ್ಟಪಡುತ್ತೀರಿ, ಈಗ ಊಟದಲ್ಲೂ ಹತ್ತಾರು ಬಗೆಗಳನ್ನು ಮಾಡಿ ಬಡಿಸುವುದು ನೋಡಬಹುದು. ಹಾಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟದಲ್ಲಿ ವಿವಿಧ ಬಗೆಯ ಖಾದ್ಯಗಳು ನಿಮ್ಮ ಬಾಯಲ್ಲಿ ನೀರು ತರಿಸುತ್ತಿರುತ್ತವೆ.
ಹಾಗೆ ನಾವಿಂದು ಬಾಯಲ್ಲಿ ನೀರು ತರಿಸುವಂತೆ ಮದುವೆ ಮನೆಗಳಲ್ಲಿ ಮಾಡುವ ಈ ಅವಲಕ್ಕಿ ಖಾದ್ಯ ಕುರಿತು ತಿಳಿಯೋಣ. ನೀವು ಮನೆಯಲ್ಲಿ ಮಾಡಿದಂತೆ ಅಲ್ಲ ಬದಲಿಗೆ ವಿಶೇಷ ರುಚಿಯಲ್ಲಿ ವಿಭಿನ್ನ ಶೈಲಿಯಲ್ಲಿ ಮನೆಗಿಂತ ರುಚಿಯಾಗಿ ಈ ಮದುವೆ ಮನೆಯಲ್ಲಿ ಅವಲಕ್ಕಿ ಖಾದ್ಯ ಮಾಡುತ್ತಾರೆ. ಅವಲಕ್ಕಿಯ ಒಗ್ಗರಣೆಗಿಂತ ಭಿನ್ನವಾಗಿ ಮಾಡುವ ಅವಲಕ್ಕಿ ಇದು.

ನೀವು ಮದುವೆ ಮನೆಯ ಈ ಅವಲಕ್ಕಿ ಗೊಜ್ಜು ಸವಿದರೆ ಮನೆಯಲ್ಲಿಯೂ ಅದೇ ರೀತಿ ಮಾಡಿ ಸವಿಯಲು ಇಷ್ಟಪಡುತ್ತೀರಿ. ಹಾಗಾದ್ರೆ ಈ ಅವಲಕ್ಕಿಯನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಅವಲಕ್ಕಿ ಖಾದ್ಯ ಮಾಡಲು ಬೇಕಾಗುವ ವಸ್ತುಗಳು ಯಾವುದು? ಮಾಡುವುದು ಹೇಗೆ?, ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳೋಣ.
ಮದುವೆ ಮನೆಯ ರುಚಿ ರುಚಿಯ ಅವಲಕ್ಕಿ ಮಾಡಲು ಬೇಕಾಗುವ
ಪದಾರ್ಥಗಳು
- ಅವಲಕ್ಕಿ
- ಒಣ ಕೊಬ್ಬರಿ ಅರ್ಧ ಕಪ್
- ಎಣ್ಣೆ 4 ಟೇಬಲ್ ಸ್ಪೂನ್
- ಕಡ್ಲೇಬೀಜ 4 ಟೇಬಲ್ ಸ್ಪೂನ್
- ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
- ಹುಣಸೆಹಣ್ಣು ಅಳತೆಯ ಬೆಲ್ಲ
- ಸಾರಿನಪುಡಿ 2 ಟೇಬಲ್ ಸ್ಪೂನ್
- ಜೀರಿಗೆ ಪುಡಿ ಅರ್ಧ ಟೀ ಸ್ಪೂನ್
- ಕಡ್ಲೆಬೇಳೆ 1 ಟೇಬಲ್ ಸ್ಪೂನ್
- ಉದ್ದಿನಬೇಳೆ 1 ಟೇಬಲ್ ಸ್ಪೂನ್
- ಎಳ್ಳು 2 ಟೇಬಲ್ ಸ್ಪೂನ್
- ಕರಿಬೇವಿನ ಸೊಪ್ಪು ಸ್ವಲ್ಪ
- ಇಂಗು ಚಿಟಿಕೆಯಷ್ಟು
- ಅರಿಶಿನದ ಪುಡಿ ಕಾಲು ಟೀ ಚಮಚ
- ಸಾಸಿವೆ ಸ್ವಲ್ಪ
- ಬ್ಯಾಡಗಿ ಮೆಣಸಿನಕಾಯಿ 2
- ಉಪ್ಪು ರುಚಿಗೆ ತಕ್ಕಷ್ಟು
ಮದುವೆ ಮನೆಯ ಅವಲಕ್ಕಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿಯನ್ನು ಬಿಸಿ ನೀರಿನಲ್ಲಿ ಹಾಕಿ ನೆನೆಸಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು 2 ಕಪ್ ಅವಲಕ್ಕಿ ಹಾಕಿಕೊಳ್ಳಿ. ನಂತರ ಹಾಗೆ ಪುಡಿ ಮಾಡಿ. 2 ಸುತ್ತು ರುಬ್ಬಿದರೆ ಸಾಕು. ಅದರು ಎರಡು ಭಾಗವಾಗುವಂತೆ ಮಾಡಿದರೆ ಸಾಕು. ನುಣ್ಣಗೆ ಪುಡಿ ಮಾಡಬೇಡಿ. 5 ಸೆಕೆಂಡ್ ರುಬ್ಬಿದರೆ ಸಾಕು.
ಪುಡಿ ಮಾಡಿದ ಈ ಅವಲಕ್ಕಿಯನ್ನು ಬೌಲ್‌ಗೆ ಹಾಕಿ ಅದಕ್ಕೆ ನೀರು ಹಾಕಿ ತೊಳೆದುಕೊಳ್ಳಿ. ಅನಂತರ ಒಂದು ಜರಡಿ ಇಟ್ಟು ಅವಲಕ್ಕಿಯ ನೀರನ್ನು ಚೆನ್ನಾಗಿ ಒತ್ತಿ ಹೀರಲು ಬಿಡಿ. ಅನಂತರ ಅವಲಕ್ಕಿಯನ್ನು ಪಾತ್ರೆಯಲ್ಲಿ ಮುಚ್ಚಿ ಇಡಿ. ಇನ್ನೊಂದು ಕಡೆ ಹುಣಸೆ ಹಣ್ಣಿನಿಂದ ಹುಳಿ ನೀರನ್ನು ಸಿದ್ದ ಮಾಡಿಕೊಳ್ಳಿ.
ಒಂದು ಬಾಣಲೆ ಒಲೆ ಮೇಲೆ ಇಟ್ಟಿ ಅದಕ್ಕೆ ಬಿಳಿ ಎಳ್ಳು ಅಥವಾ ಕಪ್ಪು ಎಳ್ಳು ಹಾಕಿ ಹುರಿದುಕೊಳ್ಳಿ. ಇದು ಬಿಸಿಯಾದಾಗ ತೆಗೆದು ತಣ್ಣಗಾಗಲು ಬಿಡಿ. ಅನಂತರ ಇದನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿ ಮತ್ತೆ ಪುಡಿ ಪುಡಿ ಮಾಡಿಟ್ಟುಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಅರಶಿಣ ಪುಡಿ, ಹುಣಸೆ ಹುಳಿ ನೀರು 1 ಕಪ್, ಜೀರಿಗೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಬೇಕು. ನಂತರ 2 ನಿಮಿಷ ಕುದಿರಬಲು ಬಿಡಬೇಕು.
ಈಗ 2 ಸ್ಪೂನ್ ಬೆಲ್ಲ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ. ಮತ್ತೆ 5 ನಿಮಿಷ ಕುದಿಯಲು ಬಿಡಿ. ಈ ಗೊಜ್ಜು ರೆಡಿಯಾದ ಬಳಿಕ ಇದಕ್ಕೆ ಪುಡಿ ಮಾಡಿದ್ದ ಅವಲಕ್ಕಿಯನ್ನು ಬಿಡಿ ಬಿಡಿ ಯಾಗಿ ಬಾಣಲೆಗೆ ಹಾಕಿಕೊಳ್ಳಿ. ಹಾಗೆ ಎಳ್ಳಿನ ಪುಡಿ ಸಹ ಇದೇ ಬಾಣಲೆಗೆ ಹಾಕಿ.
ನಂತರ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಈಗ ಇದಕ್ಕೊಂದು ಸಣ್ಣ ಒಗ್ಗರಣೆ ಹಾಕಿ. ಇಷ್ಟಾದರೆ ನಿಮ್ಮ ಮುಂದೆ ಅವಲಕ್ಕಿ ಗೊಜ್ಜು ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications