Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ರೀತಿಯಲ್ಲಿ ಕೊತ್ತಂಬರಿ ಟೊಮೆಟೋ ಬಾತ್ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ನೀವು ಬೆಳಗ್ಗೆ ತಿಂಡಿಗಾಗಿ ವಿವಿಧ ಬಗೆಯ ರೈಸ್ ನಿಂದ ಮಾಡಬಹುದಾದ ಖಾದ್ಯಗಳ ಪ್ರಯತ್ನಿಸಿಯೇ ಇರುತ್ತೀರಿ. ಅದರಲ್ಲೂ ಪಲಾವ್, ಪುಳಿಯೋಗರೆ, ಚಿತ್ರಾನ್ನ, ಟೊಮೆಟೋ ಬಾತ್, ವಾಂಗಿಬಾತ್ ಹೀಗೆ ಹತ್ತಾರು ರೈಸ್‌ನಿಂದ ಮಾಡುವ ಖಾದ್ಯಗಳ ಮಾಡಿರಬಹುದು. ಹಾಗೆ ಬಹಳ ಸುಲಭವಾಗಿ ಮಾಡುವ ಹಲವಾರು ವಿಶೇಷ ಡಿಷ್‌ಗಳನ್ನು ಸಹ ಸವಿದಿರುತ್ತೀರಿ.
ಹಾಗೆ ಟೊಮೆಟೋ ಬಾತ್ ಸಹ ಈ ಬೆಳಗ್ಗೆ ತಿಂಡಿಗೆ ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಹಾಕಿಕೊಂಡು ಸವಿಯಬಹುದಾದ ಒಂದು ವಿಶೇಷ ಖಾದ್ಯ. ಈ ಖಾದ್ಯವನ್ನು ಬಹುತೇಕ ಎಲ್ಲರು ಇಷ್ಟಪಡುತ್ತಾರೆ. ಹಾಗೆ ಎಲ್ಲಾ ಸಮಯದಲ್ಲೂ ಸವಿಯಲು ಮುಂದಾಗುವುದು ನೋಡಬಹುದು. ಮಕ್ಕಳಿಗೆ ಬೆಳಗ್ಗೆ ತಿಂಡಿಗೆ ಹಾಗೆ ಮಧಾಹ್ನದ ಬಾಕ್ಸ್‌ಗೆ ಹಾಕಿ ಕಳುಹಿಸಿಲು ಯಾವುದಾದರು ಖಾದ್ಯ ನೀವು ಹುಡುಕಿದರೆ ಈ ಟೊಮೆಟೋ ಬಾತ್ ಮೊದಲ ಆಯ್ಕೆ.

ಸಾಮಾನ್ಯವಾಗಿ ಎಲ್ಲರು ಒಂದೇ ರೀತಿಯಾಗಿ ಟೊಮೆಟೋ ಬಾತ್ ಮಾಡುವುದು ನೋಡಿರುತ್ತೀರಿ. ಅದರಲ್ಲಿ ರುಚಿ ಕೂಡ ಸಾಮಾನ್ಯವಾಗಿ ಒಂದೇ ರೀತಿ ಇರಲಿದೆ. ಆದ್ರೆ ನಾವಿಂದು ಬಹಳ ವಿಶೇಷ ರೀತಿಯಲ್ಲಿ ಟೊಮೆಟೋ ಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹೊಸ ರೀತಿಯಲ್ಲಿ ಟೊಮೆಟೋ ಬಾತ್ ಮಾಡಿ ಅದರ ರುಚಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ,.
ಹಾಗಾದ್ರೆ ಹೊಸ ರೀತಿಯಲ್ಲಿ ಟೊಮೆಟೋ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೊಸ ಬಗೆಯ ಟೊಮೆಟೋ ಬಾತ್ ಮಾಡಲು ಬೇಕಾಗುವ ಪದಾರ್ಥಗಳಿವು
- ರೈಸ್
- ಕೊತ್ತಂಬರಿ ಸೊಪ್ಪು
- ಟೊಮೆಟೋ -1
- ಲವಂಗ - 4
- ದಾಲ್ಚಿನ್ನಿ - 2
- ಕರಿಬೇವು
- ಚಕ್ರಮೊಗ್ಗು
- ಜೀರಿಗೆ
- ಕಾಳು ಮೆಣಸು
- ಏಲಕ್ಕಿ - 2
- ಬೆಳ್ಳುಳ್ಳಿ
- ಶುಂಠಿ
- ಈರುಳ್ಳಿ - 1
- ಹಸಿ ಮೆಣಸಿನಕಾಯಿ
- ಹಸಿರು ಬಟಾಣಿ
- ಕೊತ್ತಂಬರಿ ಪುಡಿ
- ಎಣ್ಣೆ
- ಉಪ್ಪು
ಹೊಸ ಬಗೆಯ ಟೊಮೆಟೋ ಬಾತ್ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಇದಕ್ಕೆ ಲವಂಗ, ಚಕ್ಕೆ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಅರ್ಧ ಕಟ್ ಹಾಕಿ, ಟೊಮೆಟೋ ಹಾಕಿ 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಈ ಮಸಾಲೆಯನ್ನು ತೆಗೆದು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ. ಈಗ ಅದೇ ಬಾಣಲೆಗೆ ಮತ್ತೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಮೊಗ್ಗು, ಜೀರಿಗೆ, ಪಲಾವ್ ಎಲೆ, ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ ಈರುಳ್ಳಿ, ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ. ಹಾಗೆ ಇದಕ್ಕೆ ಯಾವುದಾದರು ತರಕಾರಿ ಹಾಕಬಹುದು. ಕ್ಯಾರೆಟ್, ಹಸಿ ಬಟಾಣಿ ಸಹ ಹಾಕಿಕೊಳ್ಳಿ. ಈಗ ತರಕಾರಿ ಬೇಯಲು ಉಪ್ಪು ಹಾಕಿ 3 ನಿಮಿಷ ಫ್ರೈ ಮಾಡಿ. ಈಗ ತೆಗೆದಿಟ್ಟ ಮಸಾಲೆಯನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿದ ಆ ಮಸಾಲೆಯನ್ನು ಈಗ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಧನಿಯಾ ಪುಡಿ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ 2 ನಿಮಿಷ ಫ್ರೈ ಮಾಡಿದ ಬಳಿಕ ಹುಡಿ ಹುಡಿಯಾಗಿ ಮಾಡಿಟ್ಟಿರುವ ಅನ್ನವನ್ನು ಇದಕ್ಕೆ ಹಾಕಿಕೊಳ್ಳಬೇಕು. ಅನ್ನ ಹುಡಿ ಇದ್ದರೆ ಚೆನ್ನಾಗಿ ಬರುತ್ತದೆ. ಅನ್ನ ಹಾಕಿ ಮಸಾಲೆ ಚೆನ್ನಾಗಿ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ 3 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಟೊಮೆಟೋ ಬಾತ್ ರೆಡಿಯಾಗುತ್ತದೆ. ಇದನ್ನು ಕೊತ್ತಂಬರಿ ಟೊಮೆಟೋ ಬಾತ್ ಎನ್ನಬಹುದು. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications