Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ನೀವು ಸೋಯಾ ಚಂಕ್ಸ್ ಬಳಸಿಕೊಂಡು ಹತ್ತು ಹಲವು ರೀತಿಯ ಖಾದ್ಯಗಳ ಸವಿದಿರುತ್ತೀರಿ. ಸೋಯಾ ಆರೋಗ್ಯಕ್ಕೂ ಬಹಳ ಉತ್ತಮ. ಅದರಲ್ಲಿನ ಉತ್ತಮ ಫೈಬರ್ ಹಾಗೆ ಪ್ರೋಟಿನ್ ನಿಮ್ಮ ದೇಹಕ್ಕೆ ಬಹಳ ಉತ್ತಮ. ಹಾಗೆ ಸೋಯಾ ಬಳಸಿಕೊಂಡು ನೀವು ಅತ್ಯುತ್ತಮ ಖಾದ್ಯಗಳ ಮಾಡಬಹುದು. ಸೋಯಾ ಬಿರಿಯಾನಿ, ಸೋಯಾ ಗ್ರೇವಿ, ಸೋಯಾ ಪಲಾವ್ ಹೀಗೆ ಹತ್ತಾರು ಬಗೆಯ ತಿಂಡಿಗನ್ನು ಮಾಡೋದು ಕಾಮನ್.
ಸೋಯಾ ಚಂಕ್ನ ಗ್ರೇವಿಯಂತು ಎಲ್ಲಾ ಊಟದೊಂದಿಗೆ ತಿಂಡಿಯೊಂದಿಗೆ ಬೆಸ್ಟ್ ಖಾದ್ಯ ಆಗಿರಲಿದೆ. ಈ ಸೋಯಾದಲ್ಲಿ ಒಮೆಗಾ 3 ಕೊಬ್ಬಿನಾಂಶ, ಫೈಬರ್ ಸೇರಿ ಹಲವು ಅಂಶಗಳನ್ನು ತನ್ನಲ್ಲಿಟ್ಟುಕೊಂಡಿದೆ. ಸ್ನಾಯುಗಳ ಬೆಳವಣಿಗೆ, ಹೃದಯದ ಆರೋಗ್ಯ ಮತ್ತು ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಇದು ಮೂಳೆಗಳ ಬಲಪಡಿಸಲು ಹಾಗೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇದು ಸಹಕಾರಿ.
ನಾವಿಂದು ಈ ಸೋಯಾ ಚಂಕ್ನಿಂದ ಮಾಡುವ ವಿಶೇಷ ರೆಸಿಪಿ ಮಾಡೋಣ. ಸೋಯಾ ಚಂಕ್ ಬಳಸಿಕೊಂಡು ಈ ನಾಡಿ ಸ್ಟೈಲ್ನ ಸೋಯಾ ಚಾಪ್ಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಸೋಯಾ ಚಾಪ್ಸ್, ಊಟಕ್ಕೆ, ಚಪಾತಿಯೊಂದಿಗೆ, ದೋಸೆ, ಪರೋಟ, ಹೀಗೆ ಎಲ್ಲಾ ಖಾದ್ಯದೊಂದಿಗೂ ಉತ್ತಮ ರುಚಿ ನೀಡಲಿದೆ. ಸದ್ಯ ನಾಟಿ ಸ್ಟೈಲ್ನಲ್ಲಿ ನಾನ್ ವೆಜ್ ಖಾದ್ಯದಂತೆಯೇ ಇದನ್ನು ಸಹ ಮಾಡಬಹುದು.
ಹಾಗಾದ್ರೆ ಈ ಸೋಯಾ ಚಾಪ್ಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೋಯಾ ಚಾಪ್ಸ್ ಮಾಡಲು ಬೇಕಾಗುವ ಪದಾರ್ಥಗಳು
- ಸೋಯಾ ಚಂಕ್
- ಈರುಳ್ಳಿ
- ಬೆಳ್ಳುಳ್ಳಿ
- ಶುಂಠಿ
- ಸೋಂಪು
- ಕಾಳು ಮೆಣಸು
- ಹಸಿ ಮೆಣಸು
- ಚಕ್ಕೆ
- ಲವಂಗ
- ಟೊಮೆಟೋ
- ಗೋಡಂಬಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಎಣ್ಣೆ
- ಅರಶಿಣ
ಸೋಯಾ ಚಾಪ್ಸ್ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ ಸೋಯಾ ಚಂಕ್ ಅನ್ನು ಹಾಕಿ ನೀರು ಹಾಕಿ ನೆನೆಸಿಡಬೇಕು. ಅದಕ್ಕೆ ಉಪ್ಪು ಸಹ ಹಾಕಿ 20 ನಿಮಿಷ ನೆನೆಯಲು ಬಿಡಿ. ಈಗ ಮಿಕ್ಸಿ ಜಾರ್ಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಕಾಳು ಮೆಣಸು, ಜೀರಿಗೆ, ಸೋಂಪುಕಾಳು, ಚಕ್ಕೆ, ಲವಂಗ, ಟೊಮೆಟೋ, ಗೋಡಂಬಿ ಪೀಸ್ಗಳು, ಕೊತ್ತಂಬರಿ ಸೊಪ್ಪು, ನೀರು ಹಾಕಿಕೊಂಡು ರುಬ್ಬಿಕೊಂಡು ಮಸಾಲೆಯನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಈರುಳ್ಳಿ, ಕರಿಬೇವು ಹಾಕಿ 1 ನಿಮಿಷ ಫ್ರೈ ಮಾಡಿ. ಅನಂತರ ರುಬ್ಬಿಕೊಂಡಿರುವ ಮಸಾಲೆಯನ್ನು ಹಾಕಿಕೊಳ್ಳಬೇಕು. ಅನಂತರ 2 ನಿಮಿಷ ಚೆನ್ನಾಗಿ ಫ್ರೈ ಮಾಡಿ. ಈಗ ಇದಕ್ಕೆ ಸ್ವಲ್ಪ ನೀರು ಸಹ ಹಾಕಿ ಕುದಿಬರಲು ಬಿಡಿ. ಈ ಸಮಯದಲ್ಲಿ ಉಪ್ಪು ಸಹ ಹಾಕಿಕೊಳ್ಳಿ.
ಈಗ ನೆನೆಸಿಟ್ಟ ಸೋಯಾವನ್ನು 2 ಬಾರಿ ತೊಳೆದು ನೀರನ್ನು ಚೆನ್ನಾಗಿ ಹಿಂಡಿ ತೆಗೆದಿಟ್ಟುಕೊಳ್ಳಿ. ಈಗ ಮತ್ತೊಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಅರಶಿಣ, ಉಪ್ಪು ಹಾಕಿ ಈ ಸೋಯಾ ಚಂಕ್ ಅನ್ನು ಹಾಕಿ ಹುರಿದುಕೊಳ್ಳಬೇಕು. ಇದು ಬಣ್ಣ ಸ್ವಲ್ಪ ಬದಲಾಗಬೇಕು. ಹೀಗೆ ಹುರಿದ ಈ ಸೋಯಾವನ್ನು ಒಲೆ ಮೇಲೆ ಕುದಿಯುತ್ತಿರುವ ಗ್ರೇವಿಗೆ ಇದನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಸುಮಾರು 2ರಿಂದ 3 ನಿಮಿಷ ಈ ಸೋಯಾ ಚಂಕ್ ಬೇಯಿಸಿಕೊಳ್ಳಿ. ಗ್ರೇವಿ ಗಟ್ಟಿ ಎನಿಸಿದರೆ ನೀರು ಹಾಕಿಕೊಂಡು ಮತ್ತೆ ಕುದಿಬರಲು ಬಿಡಿ. ಮುಚ್ಚಳ ಮುಚ್ಚಿ ಕುದಿಬರಿಸಿಕೊಂಡು ಕೊತ್ತಂಬರಿ ಸೊಪ್ಪು ಹಾಕಿ ಇಳಿಸಿಕೊಂಡರೆ ನಿಮ್ಮ ಮುಂದೆ ನಾಟಿ ಸ್ಟೈಲ್ನ ಸೋಯಾ ಚಾಪ್ಸ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
