Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಊಟ, ತಿಂಡಿಗೆ ಅದ್ಭುತ ರುಚಿ ನೀಡುವ ಸೊಪ್ಪಿನ ಪಲ್ಯ ಮಾಡಿ.! ಎರಡು ಸೊಪ್ಪು ಹಾಕಿ ಹೀಗೆ ಮಾಡಿ!!
ನಿಮ್ಮ ಆರೋಗ್ಯಕ್ಕೆ ಸೊಪ್ಪು ಎಷ್ಟು ಮುಖ್ಯ ಎಂಬುದನ್ನು ತಿಳಿದಿರುತ್ತೀರಿ. ಹಲವು ರೀತಿಯ ಹಸಿರು ತರಕಾರಿಗಳು ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶಗಳನ್ನು ಹೊಂದಿರುತ್ತವೆ. ಅದರಲ್ಲೂ ಸೊಪ್ಪುಗಳು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಕ್ಯಾಲ್ಸಿಯಂ, ಕಬ್ಬಿಣಾಂಶ, ಫೈಬರ್ ಹೀಗೆ ಹತ್ತು ಹಲವು ರೀತಿಯ ಅಂಶಗಳನ್ನು ದೇಹಕ್ಕೆ ಪೂರೈಸಲು ಅವು ಮುಖ್ಯವಾಗಿವೆ.
ಹೀಗಾಗಿ ಸೊಪ್ಪಿನ ಸಾರು, ಸೊಪ್ಪಿನ ಪಲ್ಯ, ಸೊಪ್ಪಿನಿಂದ ಮಾಡಲಾಗುವ ಪದಾರ್ಥಗಳನ್ನು ಹೆಚ್ಚಾಗಿ ಸವಿಯಬೇಕು ಎಂದು ಸಲಹೆ ನೀಡಲಾಗುತ್ತದೆ. ಹಾಗೆ ಸೊಪ್ಪಿನಿಂದ ವಿಭಿನ್ನ ವಿಭಿನ್ನವಾದ ಖಾದ್ಯ ಮಾಡಬಹುದು ಎಂಬುದನ್ನು ಕೂಡ ನೀವು ನೋಡಿರಬಹುದು. ಅದರಲ್ಲೂ ವಿಶೇಷವಾಗಿ ಸೊಪ್ಪಿನಿಂದಾಗಿ ಮಾಡುವ ಪಲ್ಯವು ಬಹಳ ರುಚಿಕರವಾಗಿರುತ್ತದೆ.

ಇನ್ನು ಎರಡು ಮೂರು ಬಗೆಯ ಸೊಪ್ಪುಗಳನ್ನು ಮಿಕ್ಸ್ ಮಾಡಿ ಅದರಿಂದ ಮಾಡುವ ಪಲ್ಯವಂತು ಬಾಯಲ್ಲಿ ನೀರು ತರಿಸುತ್ತವೆ. ಕಡಿಮೆ ಮಸಾಲೆ ಹಾಕಿ ಮಾಡುವ ಈ ವಿಧವಾದ ಪಲ್ಯ ಊಟ, ತಿಂಡಿಯ ಜೊತೆಗೂ ಕೂಡ ಸವಿಯಬಹುದು. ಹಾಗಾದ್ರೆ ಸೊಪ್ಪಿನ ಪಲ್ಯ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದರಲ್ಲೂ ಎರಡು ಸೊಪ್ಪನ್ನು ಬಳಸಿ ಮಾಡುವ ಈ ವಿಶೇಷ ಸೊಪ್ಪಿನ ಪಲ್ಯ ನೀವು ಕೂಡ ಮಾಡಿ.
ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ದಂಟಿನ ಸೊಪ್ಪು / ಹರುವೆ ಸೊಪ್ಪು 1 ಕಟ್ಟು
- ಚಿಲ್ಕರವೆ ಸೊಪ್ಪು 1 ಕಟ್ಟು
- ಹೆಸರು ಕಾಳು
- ಈರುಳ್ಳಿ
- ಒಣ ಕೊಬ್ಬರಿ
- ಸಾಸಿವೆ
- ಜೀರಿಗೆ
- ಬೆಳ್ಳುಳ್ಳಿ
- ಕರಿಬೇವಿನ ಸೊಪ್ಪು
- ಒಣ ಮೆಣಸು
- ಉಪ್ಪು
- ಎಣ್ಣೆ
ಸೊಪ್ಪಿನ ಪಲ್ಯ ಮಾಡುವ ವಿಧಾನವೇನು?
ಮೊದಲು ಎರಡು ಸೊಪ್ಪುಗಳನ್ನು ಚಿಕ್ಕದಾಗಿ ಕತ್ತರಿಸಿಕೊಂಡು ತೊಳೆದು ಬೌಲ್‌ಗೆ ಹಾಕಿ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಹೆಸರು ಕಾಳು ಹಾಕಿಕೊಳ್ಳಿ. ಈ ಹೆಸರು ಕಾಳು 6ರಿಂದ 8 ಗಂಟೆ ಆದರು ನೀರಿನಲ್ಲಿ ನೆನೆಸಿಟ್ಟಿರಬೇಕು. ಈ ಕಾಳು ಹಾಕಿಕೊಂಡು ಬಳಿಕ ಅದಕ್ಕೆ ಕಾಳು ಮುಳುಗುವಷ್ಟು ನೀರು, ಉಪ್ಪು ಹಾಕಿ ಮುಚ್ಚಳ ಮುಚ್ಚಿ 1 ಸೀಟಿ ಹೊಡೆಸಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾದ ಬಳಿಕ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, 6 ಒಣ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಈರುಳ್ಳಿ, ಕರಿಬೇವು ಸಹ ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ತಳ ಹಿಡಿಯದಂತೆ ಮಿಕ್ಸ್ ಮಾಡಿಕೊಳ್ಳಿ.
ಈಗ ಇದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಸೊಪ್ಪನ್ನು ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. 8 ನಿಮಿಷ ಆದರು ಮುಚ್ಚಳ ಮುಚ್ಚಿ ಸೊಪ್ಪು ಬೇಯಲು ಬಿಡಬೇಕು. ನಂತರ ಈ ಸೊಪ್ಪಿಗೆ ಕುಕ್ಕರ್‌ನಲ್ಲಿ ಬೇಯಿಸಿಕೊಂಡಿರುವ ಹೆಸರು ಕಾಳನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಂಡು ಹೆಚ್ಚುವರಿ ನೀರು ಆವಿಯಾಗುವವರೆಗೂ ಬೇಯಿಸಿಕೊಳ್ಳಿ.
ಈ ವೇಳೆ ಒಣ ಕೊಬ್ಬರಿ ತುರಿ ಅಥವಾ ಹಸಿ ತೆಂಗಿನಕಾಯಿ ತುರಿಯನ್ನು ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳ. 2ರಿಮದ 3 ನಿಮಿಷ ಮಿಕ್ಸ್ ಮಾಡಿಕೊಂಡರೆ ಸಾಕು. ಇಷ್ಟಾದರೆ ರುಚಿ ರುಚಿಯ ಸೊಪ್ಪಿನ ಪಲ್ಯ ರೆಡಿಯಾಗಲಿದೆ.



Click it and Unblock the Notifications