Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
3 ನಿಮಿಷದಲ್ಲಿ ಈ ಸೊಲ್ಲಾಪುರ ಶೇಂಗಾ ಚಟ್ನಿ ಪುಡಿ ಮಾಡಿ..! ಸುಲಭದ ರೆಸಿಪಿ
ನೀವು ಹಲವು ರೀತಿಯ ತಿಂಡಿಗಳ ಜೊತೆಗೆ ಚಟ್ನಿಯನ್ನು ಸವಿದಿರುತ್ತೀರಿ, ಅದೇ ರೀತಿ ಚಟ್ನಿಯನ್ನು ಊಟ ಹಾಗೂ ತಿಂಡಿಯ ಜೊತೆಗೆ ಸವಿಯೋದು ನಿಮಗೆ ಅಭ್ಯಾಸ ಆಗಿರಬಹುದು. ಹೀಗಾಗಿ ಒಂದು ದಿನ ಚಟ್ನಿ ಇರದಿದ್ದರೆ ನಿತ್ಯದ ತಿಂಡಿ ಊಟ ರುಚಿಸದೆ ಇರಬಹುದು. ಹೀಗಾಗಿ ಬಹುತೇಕರು ತಿಂಗಳ ಕಾಲ ಸವಿಯಲು ಆಗುವಂತೆ ಚಟ್ನಿ ಪುಡಿಯನ್ನು ಮಾಡಿಟ್ಟುಕೊಳ್ಳುವುದು ನೋಡಬಹುದು.
ಮಳೆಗಾಲದಲ್ಲಿ ಹೆಚ್ಚಾಗಿ ಈ ಖಾರ ಖಾರದ ಚಟ್ನಿ ಪುಡಿಯನ್ನು ಮಾಡಿಟ್ಟುಕೊಂಡು ಸವಿಯುತ್ತಾರೆ. ಅದರಲ್ಲೂ ಹಲವು ಬಗೆಯ ಚಟ್ನಿ ಪುಡಿಗಳು ಬಾಯಲ್ಲಿ ನೀರು ತರಿಸಲಿವೆ. ನೀವು ಬೆಳಗ್ಗೆ ಚಪಾತಿ, ರೊಟ್ಟಿ, ದೋಸೆ ಸವಿಯುವಾಗ ಈ ಚಟ್ನಿ ಪುಡಿಯನ್ನ ಬಳಸಬಹುದು. ಹಾಗೆ ಊಟದ ಜೊತೆಗೂ ಕೂಡ ಅದ್ಭುತ ರುಚಿ ನೀಡಲಿವೆ.

ಸಾಮಾನ್ಯವಾಗಿ ಈ ಚಟ್ನಿ ಪುಡಿಗಳನ್ನು ಮಾಡೋದು ಬಹಳ ಸುಲಭವಾಗಿರುತ್ತೆ, ನಿಮಿಷಗಳಲ್ಲಿ ಮಾಡಿ ಮುಗಿಸಬಹುದು. ಅದ್ರಲ್ಲೂ ಖಾರದ ಪುಡಿ, ಶೇಂಗಾ ಬಳಸಿಕೊಂಡು ನಿಮಿಷದಲ್ಲಿ ಈ ಚಟ್ನಿ ಪುಡಿಗಳ ಮಾಡುತ್ತಾರೆ. ಇದಕ್ಕೆ ತೆಂಗಿನಕಾಯಿ ಬಳಸದೆ ಇರುವುದರಿಂದ ಬಹಳಷ್ಟು ದಿನಗಳ ಕಾಲ ಇವುಗಳನ್ನು ಇಟ್ಟು ಸವಿಯಬಹುದು.
ನಾವಿಂದು ಈ ಚಟ್ನಿ ಪುಡಿಯಲ್ಲಿ ಅತ್ಯಂತ ರುಚಿಕರವಾಗಿ ಮಾಡುವಂತಹ ಸೊಲ್ಲಾಪುರ ಶೇಂಗಾ ಚಟ್ನಿಯ ಕುರಿತಾಗಿ ತಿಳಿದುಕೊಳ್ಳೋಣ. ಸೊಲ್ಲಾಪುರದಲ್ಲಿ ಮಾಡಲಾಗುವ ಈ ಖಾರ ಖಾರದ ಚಟ್ನಿ ಪುಡಿ ಎಲ್ಲಾ ಖಾದ್ಯದೊಂದಿಗೆ ಸವಿಯಬಹುದು. ಹಾಗಾದ್ರೆ ನಾವಿಂದು ಈ ಚಟ್ನಿ ಪುಡಿಯನ್ನು ಮನೆಯಲ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಸೊಲ್ಲಾಪುರ ಚಟ್ನಿ ಪುಡಿಯನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸೊಲ್ಲಾಪುರ ಚಟ್ನಿ ಪುಡಿ ಮಾಡಲು ಬೇಕಾಗುವ ಪದಾರ್ಥಗಳು
ಕಡಲೆ ಬೀಜ
ಕಡಲೆಕಾಯಿ
ಜೀರಿಗೆ
ಬೆಳ್ಳುಳ್ಳಿ
ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಬೆಲ್ಲ
ಸೊಲ್ಲಾಪುರ ಚಟ್ನಿ ಪುಡಿ ಮಾಡುವ ವಿಧಾನವೇನು?
ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಚಟ್ನಿ ಪುಡಿಗೆ ಅಗತ್ಯವಾದಷ್ಟು ಶೇಂಗಾ ಕಾಳುಗಳ ಹಾಕಿಕೊಂಡು ಹುರಿದುಕೊಳ್ಳಿ. 3ರಿಂದ 4 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಂಡರೆ ಸಾಕು. ಶೇಂಗಾ ಬೀಜಗಳಿಂದ ಸಿಪ್ಪೆ ತೆಗೆಯಲು ಬರುವಷ್ಟು ಹದವಾಗಿರಲಿ. ಒಲೆ ಆಫ್ ಮಾಡಿ ಈ ಶೇಂಗಾ ಬೀಜದಿಂದ ಸಿಪ್ಪೆಯನ್ನು ತೆಗೆದುಕೊಳ್ಳಿ. ಅನಂತರ ಮತ್ತೆ ಒಲೆ ಮೇಲೆ ಬಾಣಲೆ ಇಟ್ಟು ಶೇಂಗಾ ಎಣ್ಣೆ ಅಥವಾ ಸಾಮಾನ್ಯ ಎಣ್ಣೆ ಹಾಕಿ.
ಈಗ ಈ ಎಣ್ಣೆಗೆ ಸಿಪ್ಪೆ ತೆಗೆದುಕೊಂಡಿರುವ ಶೇಂಗಾ ಬೀಜವನ್ನು ಹಾಕಿಕೊಳ್ಳಿ. ಹಾಗೆ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೂ ಹುರಿದುಕೊಳ್ಳಿ. ಬಳಿಕ ಅರ್ಧ ಚಮಚ ಜೀರಿಗೆ ಪುಡಿ, ಬೆಳ್ಳುಳ್ಳಿ ಇದಕ್ಕೆ ಹಾಕಿ ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ನಂತರ ಮತ್ತೆ ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಈ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಲ್ಲಾ ಪದಾರ್ಥಗಳ ಹಾಕಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಬೆಲ್ಲದ ಪುಡಿಯನ್ನು ಕೂಡ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಕೆಲವು ಶೇಂಗಾ ಕಾಳುಗಳು ಹಾಗೆಯೇ ಉಳಿಯಬೇಕು. ಈ ಹದದಲ್ಲಿ ಪುಡಿ ಮಾಡಿ.
ಇಷ್ಟಾದರೆ ನಿಮ್ಮ ಮುಂದೆ ಸೊಲ್ಲಾಪುರ ಚಟ್ನಿ ಪುಡಿ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ, ಇದು ಬಹಳ ರುಚಿಕರ ಹಾಗೆ ಎಲ್ಲಾ ತಿಂಡಿಗೂ ಅದ್ಭುತ ರುಚಿ ನೀಡಲಿದೆ. ಚಪಾತಿ, ರೊಟ್ಟಿ ಇದ್ದಾಗ ಈ ಚಟ್ನಿ ಪುಡಿಯೊಂದಿಗೆ ಗಟ್ಟಿ ಮೊಸರು ಹಾಕಿಕೊಂಡು ಸವಿಯಲು ಮುಂದಾದರೆ ರುಚಿ ಅದ್ಭುತವಾಗಿರಲಿದೆ.



Click it and Unblock the Notifications