Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶೀತ, ನೆಗಡಿ ಇದ್ರೆ ಗಣಿಕೆ ಸೊಪ್ಪಿನ ಚಟ್ನಿ ಮಾಡಿದ್ರೆ ಸಾಕು!
ಆರ್ಯುವೇದದಲ್ಲಿ ಗಿಡಮೂಲಿಕೆಗಳಿಂದ ಹಲವು ರೀತಿಯ ಆರೋಗ್ಯಕರ ಲಾಭ ಇರುವುದು ನೋಡಬಹುದು. ಹಲವು ಗಿಡ ಮೂಲಿಕೆಗಳು ಹಲವು ರೀತಿಯ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ. ಹಾಗೆ ಹಲವು ಗಿಡಗಳಿಂದ ಯಾವ ಪ್ರಯೋಜನವಿದೆ ಎಂಬುದು ನಿಮಗೂ ತಿಳಿದಿರುವುದಿಲ್ಲ. ಕೆಲವೊಂದು ಗಿಡವನ್ನು ನಾವು ನಿತ್ಯವೂ ನೋಡುತ್ತಿದ್ದರೂ ಕೂಡ ಅದರ ಪ್ರಯೋಜನಗಳು ಮಾತ್ರ ತಿಳಿದಿರುವುದಿಲ್ಲ.
ಇಂತಹ ಹಲವು ಪ್ರಯೋಜನಗಳ ತನ್ನಲ್ಲಿಟ್ಟುಕೊಂಡಿರುವ ಗಿಡದಲ್ಲಿ ಗಣಿಕೆ ಸೊಪ್ಪು ಕೂಡ ಒಂದು. ಈ ಗಿಡವನ್ನು ಒಂದೊಂದು ಕಡೆ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಕಮಾಚಿ, ಕಾಕಮಟ್ಟಲು, ಕಾಕಿ ಸೊಪ್ಪು, ಗಣಿಕೆ ಸೊಪ್ಪು ಹೀಗೆ ಹಲವು ಹೆಸರಿನಿಂದ ಕರೆಯಲಾಗುತ್ತದೆ. ಈ ಗಿಡದಲ್ಲಿ ಬಿಡುವ ಕಪ್ಪು ಬಣ್ಣದ ಚಿಕ್ಕ ಚಿಕ್ಕ ಹಣ್ಣನ್ನು ತಿನ್ನಬಹುದು. ಹಳ್ಳಿಗಳಲ್ಲಿ ಕಾಕಿ ಹಣ್ಣು ಎಂದೇ ಪ್ರಸಿದ್ದಿ ಪಡೆದಿದೆ.

ಆದ್ರೆ ಈ ಗಣಿಕೆ ಸೊಪ್ಪಿನಿಂದ ಮಾಡುವ ಚಟ್ನಿ ನೀವು ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ. ಆದ್ರೆ ಈ ಗಣಿಕೆ ಸೊಪ್ಪು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನಿಮಗೂ ಅಚ್ಚರಿಯಾಗಬಹುದು. ಇದು ಶೀತ, ನೆಗಡಿ ಇದ್ದರೆ ಈ ಗಣಿಕೆ ಸೊಪ್ಪಿನ ಚಟ್ನಿ ಸವಿದರೆ ಥಟ್ ಅಂತ ಸಮಸ್ಯೆ ಮಾಯವಾಗಲಿದೆ. ಹಾಗಾದ್ರೆ ಈ ಗಣಿಕೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗೆ ಈ ಗಣಿಕೆ ಸೊಪ್ಪು ಕೆಲವು ಮಾರುಕಟ್ಟೆಯಲ್ಲಿ ಸಿಗುತ್ತದೆ. ಹಾಗೆ ತೋಟ, ಗದ್ದೆಗಳಂತಹ ತಂಪು ವಾತಾವರಣದಲ್ಲಿ ಬೆಳೆಯುತ್ತದೆ. ಹಾಗಾದ್ರೆ ಈ ಗಣಿಕೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗಣಿಕೆ ಸೊಪ್ಪಿನ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗಣಿಕೆ ಸೊಪ್ಪು
- ಹಸಿ ಮೆಣಸು
- ಬೆಳ್ಳುಳ್ಳಿ
- ಬ್ಯಾಡಗಿ ಮೆಣಸು
- ಜೀರಿಗೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಅರಶಿಣ
- ಸಾಸಿವೆ
- ಶುಂಠಿ
- ಹುಣಸೆ ಹಣ್ಣು
- ಎಣ್ಣೆ
- ಉಪ್ಪು
ಗಣಿಕೆ ಸೊಪ್ಪಿನ ಚಟ್ನಿ ಮಾಡುವ ವಿಧಾನವೇನು?
ಸೊಪ್ಪನ್ನು ಹೂವು ಕಡ್ಡಿ ಸಮೇತವಾಗಿ ಬಳಸಿಕೊಳ್ಳಬೇಕು. ಬರಿ ಎಲೆಗಳಾದರೆ ಪ್ರಮಾಣ ಕಡಿಮೆಯಾಗುತ್ತದೆ. ಈ ಸೊಪ್ಪನ್ನು ತೊಳೆದು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ, ಜೀರಿಗೆ, ಹಸಿ ಮೆಣಸು, ಬೆಳ್ಳುಳ್ಳಿ, ಬ್ಯಾಡಗಿ ಮೆಣಸು, ಹುಣಸೆ ಹಣ್ಣು ಹಾಕಿಕೊಂಡು 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ತದ ನಂತರ ತೊಳೆದುಕೊಂಡಿರುವ ಸೊಪ್ಪನ್ನು ಈ ಬಾಣಲೆಗೆ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈ ಸಮಯದಲ್ಲಿ ಸೊಪ್ಪು ಬಾಡಿಕೊಂಡು ಕಡಿಮೆ ಪ್ರಮಾಣಕ್ಕೆ ಬರಲಿದೆ. ಹಾಗೆ 2 ನಿಮಿಷದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಮತ್ತೆ ನೀವು ಒಂದು ಮಿಕ್ಸಿ ಜಾರ್ ತೆಗೆದುಕೊಳ್ಳಿ.
ಈ ಮಿಕ್ಸಿ ಜಾರ್‌ಗೆ ಬಾಣಲೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕೂಡ ಹಾಕಿಕೊಂಡು ಮೊದಲಿಗೆ ನೀರು ಹಾಕದೆ ರುಬ್ಬಿಕೊಳ್ಳಿ. ತರಿತರಿಯಾದ ಬಳಿಕ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಹೀಗೆ ರುಬ್ಬಿದ ಚಟ್ನಿಯನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಫ್ರೈ ಮಾಡಿ. ನಂತರ ಇದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಕರಬೇವು ಹಾಕಿ ಫ್ರೈ ಮಾಡಿ. ನಂತರ ಉಪ್ಪು, ಅರಶಿಣ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ಈಗ ಇದೇ ಬಾಣಲೆಗೆ ರುಬ್ಬರುವ ಚಟ್ನಿ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಕೂಡ ಹಾಕಿಕೊಂಡು ಮಿಕ್ಸ್ ಮಾಡಿ.



Click it and Unblock the Notifications