Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಮೃದುವಾದ ಪೂರಿ..! ಇಲ್ಲಿದೆ ಸ್ಪೆಷಲ್ ಬ್ರೇಕ್‌ಫಾಸ್ಟ್!!
ಹಬ್ಬದಲ್ಲಿ ಬೆಳಗ್ಗೆ ಯಾವ ತಿಂಡಿ ಯಾವುದು ಮಾಡಬೇಕು ಎಂಬುದು ನಿಮಗೆ ದೊಡ್ಡ ಪ್ರಶ್ನೆಯಾಗಿರಬಹುದು. ಏಕೆಂದರೆ ಸಾಮಾನ್ಯವಾಗಿ ಅಂದು ನಿತ್ಯ ಮಾಡುವ ತಿಂಡಿ ನಿಮಗೆ ಮಾಡಲು ಇಷ್ಟವಿರುವುದಿಲ್ಲ ಇಂತಹ ಸಮಯದಲ್ಲಿ ನೀವು ವಿಶೇಷ ದೋಸೆ, ಪೂರಿ, ಸೇರಿ ಕೆಲವೊಂದು ವಿಶೇಷ ಖಾದ್ಯ ಮಾಡಿ ಹಬ್ಬದ ದಿನ ಸವಿಯಲು ಮುಮದಾಗಿರುತ್ತೀರಿ. ಇಂತಹ ಆಲೋಚನೆ ಇದ್ದರೆ ನಾವಿಂದು ಮೃದುವಾಗಿ, ಅತ್ಯಂತ ಸುಲಭ ರೀತಿಯಲ್ಲಿ ಪೂರಿ ಮಾಡುವ ಕುರಿತು ಹೇಳಲಿದ್ದೇವೆ.
ಪೂರಿ ಹೋಟೆಲ್‌ನಲ್ಲಿ ಅತ್ಯಂತ ದೊಡ್ಡದಾಗಿ, ತೆಳುವಾಗಿ ಉಬ್ಬಿಕೊಂಡು ಮೃದುವಾಗಿ ಬರುತ್ತದೆ. ಆದ್ರೆ ಮನೆಯಲ್ಲಿ ಮಾಡಿದಾಗ ಗಟ್ಟಿಯಾಗಿರುತ್ತೆ. ಹಾಗೆ ರುಚಿಯೂ ಕೂಡ ಆ ರೀತಿಯ ಖಾದ್ಯಕ್ಕೆ ಹೋಲುವುದಿಲ್ಲ. ಇದಕ್ಕೆ ಮುಖ್ಯ ಕಾರಣ ನಾವು ಮಾಡಿಕೊಳ್ಳುವ ಹದವಾದ ಹಿಟ್ಟು. ಹೌದು ನಾವು ಹೇಗೆ ಹಿಟ್ಟನ್ನು ಹದ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಪೂರಿಯ ಗುಣ ಮಟ್ಟ ನಿರ್ಧರಿಸಬಹುದು.

ಹಾಗೆ ನಾವಿಂದು ಹೇಳುವ ಕೆಲವು ಟಿಪ್ಸ್ ಬಳಸಿದರೆ ನೀವು ಸಹ ಮನೆಯಲ್ಲಿ ಈ ರೀತಿ ಮೃದುವಾದ ಗೋಧಿ ಹಿಟ್ಟಿನ ಪೂರಿ ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಈ ವಿಧಾನದಲ್ಲಿ ನೀವು ಒಮ್ಮೆ ಗೋಧಿ ಹಿಟ್ಟಿನ ಪೂರಿ ಮಾಡಿದರೆ ಇದೇ ವಿಧಾನದಲ್ಲಿ ಮತ್ತೆ ಮತ್ತೆ ಮಾಡುತ್ತೀರಿ, ಹಾಗೆ ಬದಲಾವಣೆ ಕೂಡ ನೀವು ಗಮನಿಸುತ್ತೀರಿ. ಹಾಗಾದ್ರೆ ಮೃದುವಾಗಿ ಪೂರಿ ಮಾಡುವುದು ಹೇಗೆ?
ಪೂರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಹಿಟ್ಟುನ್ನು ಹದ ಮಾಡಿಕೊಳ್ಳುವುದು ಹೇಗೆ?, ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನ ಪೂರಿ ಮಾಡಲು ಬೇಕಾಗುವ ಪದಾರ್ಥಗಳು
- ಗೋಧಿ ಹಿಟ್ಟು- 4 ಕಪ್
- ಚಿರೋಟಿ ರವೆ - ಸ್ವಲ್ಪ
- ಉಪ್ಪು
- ಎಣ್ಣೆ
ಗೋಧಿ ಹಿಟ್ಟಿನ ಮೃದುವಾಗಿ ಪೂರಿ ಮಾಡುವ ವಿಧಾನವೇನು?
ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಜರಡಿ ಹಿಡಿದುಕೊಂಡಿರುವ ಗೋಧಿ ಹಿಟ್ಟು ಹಾಕಿಕೊಳ್ಳಿ. ಬಳಿಕ ಇದಕ್ಕೆ ಚಿರೋಟಿ ರವೆ ಕೂಡ ಹಾಕಿಕೊಳ್ಳಿ. ಚಿರೋಟಿ ರವೆ ಅರ್ಧ ಕಪ್‌ಗಿಂತ ಕಡಿಮೆ ಹಾಕಿಕೊಂಡು ಮಿಕ್ಸ್ ಮಾಡಿ ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನ ಹದದಲ್ಲಿ ಇದನ್ನು ಕಲಸಿಕೊಳ್ಳಬೇಕು.
ಹಿಟ್ಟು ತುಂಬಾನೆ ಮೃದುವಾಗುವಂತೆ ಕಲಸಿಕೊಳ್ಳಿ, ಕೊನೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ ನಾದಿಕೊಂಡು ಪ್ಲೇಟ್ ಮುಚ್ಚಿ 15 ನಿಮಿಷ ಹಾಗೆಯೇ ಬಿಡಿ. 15 ನಿಮಿಷದ ನಂತರ ಹಿಟ್ಟನ್ನು ತೆಗೆದುಕೊಂಡು ಉಂಡೆ ಕಟ್ಟಿಕೊಳ್ಳಿ. ನಂತರ ಚಪಾತಿಯಂತೆ ಲಟ್ಟಿಸಿಕೊಳ್ಳಿ. ಲಟ್ಟಿಸಿಕೊಳ್ಳುವಾಗ ಎಣ್ಣೆ ಹಚ್ಚಿಕೊಂಡು ಲಟ್ಟಿಸಿಕೊಳ್ಳಿ. ಒಣ ಹಿಟ್ಟು ಹಾಕದೆಯೇ ಲಟ್ಟಿಸಿಕೊಳ್ಳಬೇಕು.
ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಕಾಯಲು ಬಿಟ್ಟು ಒಂದೊಂದೇ ಪೂರಿಯನ್ನು ಎಣ್ಣೆಗೆ ಹಾಕಿಕೊಂಡು ಕರಿಯಿರಿ. ಈ ರೀತಿ ಮಾಡಿದ ಪೂರಿ ಉಬ್ಬಿಕೊಂಡು ಬರುತ್ತದೆ. ಬೇಗೆ ಬೇಗೆ ತಿರುಗಿಸಿಕೊಂಡು ಎಲ್ಲಾ ಪೂರಿ ಮಾಡಿಕೊಳ್ಳಿ. ಬಿಸಿ ಇದ್ದಾಗಲೇ ಈ ಮೃದುವಾದ ಪೂರಿ ಸವಿಯಲು ನೀಡಿ. ಸುಲಭವಾಗಿ ಉಬ್ಬುವಂತಹ ಗೋಧಿ ಪೂರಿ ಮಾಡುವ ವಿಧಾನ ಇದಾಗಿದೆ.
ನೀವು ಕೂಡ ಹಬ್ಬದಲ್ಲಿ ಈ ರೀತಿ ಗೋಧಿ ಹಿಟ್ಟಿನ ಮೃದವಾದ ಪೂರಿ ಮಾಡಿ ನೋಡಿ. ಈ ಪೂರಿ ಜೊತೆಗೆ ತೆಂಗಿನಕಾಯಿ ಚಟ್ನಿ, ಇಲ್ಲವೆ ಯಾವುದೇ ರೀತಿಯ ಚಟ್ನಿ ಇದ್ದರೂ ರುಚಿ ಹೆಚ್ಚಾಗುತ್ತದೆ.



Click it and Unblock the Notifications