Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುದ್ದೆ ಕೋಲು ಬಳಸದೆಯೂ ಮೃದುವಾದ ರಾಗಿ ಮುದ್ದೆ ಮಾಡಿ! ಹೇಗೆ ಗೊತ್ತಾ?
ರಾಗಿಯಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಅನ್ನೋದನ್ನು ನೀವು ತಿಳಿದಿದ್ದೀರಿ. ರಾಗಿ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಹಾಗೆ ಅಗತ್ಯ ವಿಟಮಿನ್‌ಗಳ ಪೂರೈಸುವ ಅಂಶವಾಗಿದೆ. ಅದ್ರಲ್ಲೂ ಈ ರಾಗಿಯಲ್ಲಿರುವ ಫೈಬರ್ ಅಂಶ ನಿಮ್ಮ ದೇಹಕ್ಕೆ ಉತ್ತಮ. ನೀವು ತೂಕ ಇಳಿಸಲು ಮುಂದಾಗುವುದಾದರೆ ಈ ರಾಗಿಯಿಂದ ಮಾಡುವ ಹಲವು ಖಾದ್ಯಗಳು ನಿಮ್ಮ ನೆರವಿಗೆ ಬರಲಿವೆ.
ರಾಗಿಯಲ್ಲಿರುವ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವು ನಿಮ್ಮ ಮೂಳೆಗಳ ಬಲವಾಗಲು ಕಾರಣವಾಗಲಿದೆ. ಇನ್ನು ರಾಗಿಯಿಂದ ಮಾಡಬಹುದಾದ ಬಹುತೇಕ ಎಲ್ಲಾ ಖಾದ್ಯಗಳು ಕೂಡ ಅದ್ಭುತ ರುಚಿ ನೀಡಲಿವೆ. ರಾಗಿ ದೋಸೆ, ರಾಗಿ, ರೊಟ್ಟಿ, ರಾಗಿ ಇಡ್ಲಿ, ರಾಗಿ ಗಂಜಿ ರಾಗಿ ಮುದ್ದೆ ಕೂಡ ಬಹಳ ಉತ್ತಮ ಖಾದ್ಯ ಎನ್ನಬಹುದು.

ಹಾಗೆ ಕರ್ನಾಟದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ರಾಗಿಯ ಖಾದ್ಯ ನೋಡಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ರಾಗಿ ರೊಟ್ಟಿ ಸವಿಯುವುದು ನೋಡಬಹುದು. ಹಾಗೆ ಮಧ್ಯ ಕರ್ನಾಟಕದಲ್ಲಿ ಮುದ್ದೆ ಬಹಳ ಫೇಮಸ್ ಹಾಗೆ ದಕ್ಷಿಣ ಅಥವಾ ಕರಾವಳಿ ಭಾಗದಲ್ಲಿ ರಾಗಿ ದೋಸೆ ನೋಡಬಹುದು, ಆದ್ರೆ ಎಲ್ಲಾ ಖಾದ್ಯಗಳು ಆರೋಗ್ಯದ ದೃಷ್ಟಿಯಲ್ಲಿ ಬಹಳ ಉತ್ತಮ ಖಾದ್ಯ ಎನ್ನಬಹುದು.
ಆದ್ರೆ ರಾಗಿ ಮುದ್ದೆ ಮಾಡೋದು ಅಂದ್ರೆ ಹಲವರಿಗೆ ಕಷ್ಟ ಎನಿಸಬಹುದು. ಅದಕ್ಕೆ ಹಲವು ರೀತಿಯ ತಯಾರಿಯ ಅಗತ್ಯ ಇರಲಿದೆ. ಮುಖ್ಯವಾಗಿ ರಾಗಿ ಹಿಟ್ಟು ಮಾಡಿಕೊಳ್ಳುವುದು ಹೇಗೆ ಅನ್ನೋದು ಹಲವರ ಪ್ರಶ್ನೆಯಾಗಿರಲಿದೆ. ಹಾಗೆ ಹಿಟ್ಟು ಮಾಡಿಕೊಳ್ಳಲು ಕೋಲು, ಪಾತ್ರೆಗಳ ಬಳಕೆ ಮಾಡುವುದು ಹಿಟ್ಟು ಹದ ಮಾಡುವುದು ಕಷ್ಟ ಎನಿಸಿರಬಹುದು. ಆದ್ರೆ ನಾವಿಂದು ರಾಗಿ ಕೋಲಿನ ಸಹಾಯವೇ ಇಲ್ಲದೆ ಸುಲಭವಾಗಿ ರಾಗಿ ಮುದ್ದೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ರಾಗಿ ಮುದ್ದೆ ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು
- ಉಪ್ಪು
- ತುಪ್ಪ
ರಾಗಿ ಮುದ್ದೆ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದಕ್ಕೆ 1 ಕಪ್ ರಾಗಿ ಹಿಟ್ಟು ಹಾಕಿಡಿ. ಈಗ ಇನ್ನೊಂದು ಪಾತ್ರೆಯಲ್ಲಿ 2 ಕಪ್ ನೀರು, ಉಪ್ಪು ಹಾಗೆ ರಾಗಿ ಹಿಟ್ಟಿನ ಪುಡಿಯನ್ನು ಮೇಲೆ ಸ್ವಲ್ಪ ಹಾಕಿ ಕರಡಿಕೊಂಡು ಇಟ್ಟುಕೊಳ್ಳಿ. 1 ಸ್ಪೂನ್ ಹಿಟ್ಟು ಹಾಕಿದರೆ ಸಾಕಾಗುತ್ತದೆ. ಈಗ ಇದನ್ನು ಒಲೆ ಮೇಲೆ ಇಟ್ಟು ಕುದಿ ಬರಲು ಬಿಡಿ. ನಿಧಾನವಾಗಿ ಕುದಿ ಬರಲು ಆರಂಭಿಸಿದಾಗ ತಿರುಗಿಸಿ ಮಿಶ್ರಣ ಮಾಡಿಕೊಳ್ಳಲು ಮುಂದಾಗಿ.
ಹೀಗೆ ಕುದಿಬರಲು ಆರಂಭಿಸಿದಾಗ ಅಳತೆ ಮಾಡಿ ಇಟ್ಟಿದ್ದ 1 ಕಪ್ ರಾಗಿ ಹಿಟ್ಟನ್ನು ಇದಕ್ಕೆ ಹಾಕಿ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಬೇಕಿದ್ದರೆ ಈ ಸಮಯದಲ್ಲಿ ಅರ್ಧ ಸ್ಪೂನ್ ತುಪ್ಪ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸಣ್ಣ ಉರಿಯಲ್ಲಿ ಇಟ್ಟು ಮುಚ್ಚಳ ಮುಚ್ಚಿ 2 ನಿಮಿಷ ಹಾಗೆಯೇ ಬಿಡಿ. ನಂತರ ಒಲೆ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ.
ಈಗ ಕೈಯನ್ನು ಒದ್ದೆ ಮಾಡಿಕೊಂಡು ಮುದ್ದೆ ಕಟ್ಟಲು ಮುಂದಾಗಿ. ಈ ರೀತಿಯಾಗಿ ಮುದ್ದೆ ಮಾಡಲು ನಿಮಗೆ ಮುದ್ದೆ ಕೋಲಿನ ಅವಶ್ಯಕತೆ ಇರುವುದಿಲ್ಲ. ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ. ಬಳಿಕ ಹಿಟ್ಟನ್ನು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮುದ್ದೆ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯಾಗಿ ಮೃದುವಾದ ಮುದ್ದೆ ಮಾಡಿ ನೋಡಿ.



Click it and Unblock the Notifications