Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಾಲಿನಂತೆ ಬಿಳಿಯಾದ ರೇಷನ್ ಅಕ್ಕಿ ಇಡ್ಲಿ: ಹಿಟ್ಟು ಮಾಡಿಕೊಳ್ಳುವ ವಿಧಾನವೇನು?
ನೀವು ಬೆಳಗ್ಗೆ ತಿಂಡಿಗೆ ವಿವಿಧ ರುಚಿಯ ಹಾಗೆ ವಿವಿಧ ಬಗೆಯ ತಿಂಡಿಯನ್ನು ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ಒಂದಿಷ್ಟು ತಿಂಡಿಗಳು ನೆನಪಿಗೆ ಬರಲಿವೆ. ಹಾಗೆ ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಇಡ್ಲಿ, ದೋಸೆ ಮಾಡಿ ಸವಿಯೋು ಎಲ್ಲರಿಗೂ ಇಷ್ಟವಾಗುತ್ತೆ. ಇಡ್ಲಿ ಮಾಡುವುದು ಅಂದ್ರೆ ಹಿಂದಿನ ದಿನ ಹಿಟ್ಟು ರೆಡಿ ಮಾಡಿಕೊಂಡು ಮಾರನೆ ದಿನ ಮೃದುವಾದ ಇಡ್ಲಿ ಮಾಡಿ ಸವಿಯಲಾಗುತ್ತೆ.
ದಕ್ಷಿಣ ಭಾರತದ ಅತ್ಯಂತ ರುಚಿಕರ ತಿಂಡಿಗಳ ಪೈಕಿ ಈ ಇಡ್ಲಿ ಸಹ ಒಂದಾಗಿದೆ. ಅದ್ರಲ್ಲೂ ಎಲ್ಲರು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಆರೋಗ್ಯದ ದೃಷ್ಟಿಯಿಂದಲೂ ಕೂಡ ಇಡ್ಲಿ ಬಹಳ ಉತ್ತಮ. ಕಡಿಮೆ ಎಣ್ಣೆ ಬಳಸುವುದು ನಿಮ್ಮ ದೇಹಕ್ಕೆ ಉತ್ತಮವಾಗಿರಲಿದೆ. ಹಾಗೆ ಫೈಬರ್‌ನಿಂದ ಕೂಡಿರುವ ಕಾರಣ ಇದನ್ನು ಜೀರ್ಣಕ್ರಿಯೆ ದೃಷ್ಟಿಯಿಂದ ಸಹ ಸವಿಯುತ್ತಾರೆ.

ಇನ್ನು ಈ ಇಡ್ಲಿಗಳಲ್ಲಿ ಹತ್ತಾರು ವಿಧಗಳಿವೆ. ಎಲ್ಲರಿಗೂ ಒಂದೊಂದು ಬಗೆಯ ಇಡ್ಲಿಗಳು ಇಷ್ಟವಾಗಬಹುದು. ಅದ್ರಲ್ಲೂ ಮೃದುವಾದ ಮಲ್ಲಿಗೆ ಇಡ್ಲಿ ಅಂದರೆ ಎಲ್ಲರ ಬಾಯಲ್ಲು ನೀರು ಬರಲಿದೆ. ಮೃದುವಾದ ಹಾಗೆ ಬಿಳಿ ಬಿಳಿಯ ಹಾಲಿನ ಬಣ್ಣದ ಇಡ್ಲಿ ಸವಿಯೋಕೆ ಎಲ್ಲರಿಗೂ ಮನಸ್ಸಾಗುತ್ತೆ. ಹೀಗಾಗಿ ನಾವಿಂದು ರೇಷನ್ ಅಕ್ಕಿಯನ್ನು ಬಳಸಿಕೊಂಡು ಸುಲಭವಾಗಿ ಮನೆಯಲ್ಲಿ ಮಲ್ಲಿಗೆ ಇಡ್ಲಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ರೇಷನ್ ಅಕ್ಕಿ ಬಳಸಿ ಮಲ್ಲಿಗೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ರೇಷನ್ ಅಕ್ಕಿ ಬಳಸಿಕೊಂಡು ಇಡ್ಲಿ ಮಾಡಲು ಯಾವೆಲ್ಲಾ ವಸ್ತು ಬೇಕು?
- ರೇಷನ್ ಅಕ್ಕಿ
- ಉದ್ದಿನ ಬೇಳೆ
- ಅವಲಕ್ಕಿ
- ಸಬ್ಬಕ್ಕಿ
- ಎಣ್ಣೆ
- ಉಪ್ಪು
- ಸೋಡಾ
ರೇಷನ್ ಅಕ್ಕಿ ಬಳಸಿಕೊಂಡು ಇಡ್ಲಿ ಮಾಡುವುದು ಹೇಗೆ?
ಈ ಇಡ್ಲಿ ಮಾಡಲು ಹಿಂದಿನ ದಿನ ರಾತ್ರಿ ಹಿಟ್ಟು ರೆಡಿ ಮಾಡಿ ಇಡಬೇಕು. ಅದಕ್ಕೂ ಮೊದಲು ಒಂದು ಕಪ್ ನಲ್ಲಿ 3 ಕಪ್ ರೇಷನ್ ಅಕ್ಕಿಯನ್ನು ಪಾತ್ರೆಗೆ ಹಾಕಿ 4ರಿಂದ 5 ಬಾರಿ ತೊಳೆಯಬೇಕು. ಅನಂತರ ಇದಕ್ಕೆ ನೀರು ಹಾಕಿ ನೆನೆಯಲು ಬಿಡಿ. ಹಾಗೆ ಒಂದು ಕಪ್‌ನಲ್ಲಿ 1 ಕಪ್ ಉದ್ದಿನ ಬೇಳೆ ಸಹ ಹಾಕಿ ತೊಳೆದು ನೆನೆಸಿಟ್ಟುಕೊಳ್ಳಿ.
ಈಗ ಅದೇ ಕಪ್‌ನಲ್ಲಿ ಅರ್ಧ ಕಪ್ ಅವಲಕ್ಕಿ ಸಹ ತೆಗೆದುಕೊಂಡು ನೀರು ಹಾಕಿ ನೆನೆಯಲು ಬಿಡಿ. ಹಾಗೆ ಅದೇ ಪಾತ್ರೆಗೆ ಅರ್ಧ ಕಪ್ ಸಬ್ಬಕ್ಕಿ ಸಹ ಹಾಕಿ ನೆನೆಸಿಡಿ. ಇದನ್ನು 5ರಂದ 6 ಗಂಟೆ ನೆನೆಯಲು ಬಿಡಿ. ಅನಂತರ ಎಲ್ಲಾ ವಸ್ತುಗಳನ್ನು ಬೇರೆ ಬೇರೆಯಾಗಿ ರುಬ್ಬಿಕೊಂಡು ನುಣ್ಣಗೆ ಮಾಡಿಕೊಂಡು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ.
ಹಿಟ್ಟುಗಳನ್ನು ಒಂದೇ ಪಾತ್ರೆಗೆ ಹಾಕಿಕೊಂಡು ಒಮ್ಮೆ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಉಪ್ಪು ಹಾಗೆ ಅಡುಗೆ ಸೋಡಾ ಸಹ ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಇಡೀ ರಾತ್ರಿ ಹಾಗೆಯೇ ಬಿಡಿ. ಅನಂತರ ಈಗ ಇಡ್ಲಿ ಅಚ್ಚುಗಳಿಗೆ ಎಣ್ಣೆ ಹಚ್ಚಿಕೊಂಡು ಇಡ್ಲಿ ಹಿಟ್ಟನ್ನು ಅದಕ್ಕೆ ಹಾಕಿಕೊಂಡು ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಬೇಯಲು ಬಿಡಿ.
10 ರಿಂದ 12 ನಿಮಿಷಗಳ ಕಾಲ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಹಾಗೆ ಬಿಳಿಯಾದ ಇಡ್ಲಿ ಸಿದ್ದವಾಗುತ್ತೆ. ಇದು ಮಲ್ಲಿಗೆಯಂತೆ ಮೃದುವಾಗಿರಲಿದೆ. ನೀವು ಸಹ ರೇಷನ್ ಅಕ್ಕಿ ಬಳಸಿಕೊಂಡು ಈ ರೀತಿ ಇಡ್ಲಿ ಮಾಡಿ.



Click it and Unblock the Notifications