Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹತ್ತಿಯಂತಹ ದೋಸೆ ಇಡ್ಲಿಗೆ ಹಿಟ್ಟು ಮಾಡೋದು ಹೇಗೆ? ಇಲ್ಲಿದೆ 5ಕ್ಕೂ ಹೆಚ್ಚು ಟಿಪ್ಸ್!
ನೀವು ಊಟ ತಿಂಡಿಯೊಂದಿಗೆ ಸವಿಯಲು ಪಲ್ಯ, ಸಾಂಬಾರ್ ಮಾಡಿಯೇ ಮಾಡುತ್ತೀರಿ. ಹಾಗೆ ಬೆಳಗ್ಗೆ ತಿಂಡಿಯ ವಿಚಾರಕ್ಕೆ ಬಂದರೆ ದೋಸೆ, ಇಡ್ಲಿ ಮಾಡಿ ಸವಿಯುವುದು ಕೂಡ ನೋಡಬಹುದು. ಇಡ್ಲಿ ದೋಸೆ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು, ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಇಡ್ಲಿ ರೆಸಿಪಿಯು ಎಲ್ಲರಿಗೂ ಬಹಳ ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ಉತ್ತಮ.
ಹಾಗೆ ಇಡ್ಲಿ ದೋಸೆಯನ್ನು ಇಷ್ಟಪಡುವವರು ಬೆಳಗ್ಗೆ ಹೋಟೆಲ್‌ನಲ್ಲಿಯೂ ಸವಿಯುತ್ತಾರೆ. ಹಾಗೆ ಸಂಜೆ ಸಮಯದಲ್ಲೂ ಸ್ನ್ಯಾಕ್ಸ್ ಆಗಿ ಇದನ್ನೇ ಸವಿಯಲು ಮುಂದಾಗುತ್ತಾರೆ, ಇನ್ನು ಮನೆಯಲ್ಲಿ ಮಾಡಿದರೆ 2 ದಿನಕ್ಕಾಗುವಷ್ಟು ಹಿಟ್ಟನ್ನು ಮಾಡಿಟ್ಟು ಸವಿಯುವುದು ನೋಡಬಹುದು. ಇನ್ನು ಹೀಗೆ ದೋಸೆ ಮಾಡಿ ಸವಿಯಲು ಹಿಟ್ಟು ಮಾಡಿಕೊಳ್ಳುವ ಪ್ರಕ್ರಿಯೆ ಕೂಡ ಬಹಳ ಮುಖ್ಯವಾಗುತ್ತೆ.

ದೋಸೆ ಇಡ್ಲಿಗೆ ಹಿಟ್ಟು ಮಾಡಿಕೊಳ್ಳುವುದು ಕೂಡ ಮುಖ್ಯ. ಹಿಟ್ಟು ಹದವಾಗಿ ಬರಬೇಕಾದರೆ ಅಳತೆ ಪ್ರಕಾರವಾಗಿ ಪದಾರ್ಥಗಳ ಬಳಸಬೇಕು. ಹೆಚ್ಚು ಸಮಯ ಉದ್ದು ಹಾಗೂ ಅಕ್ಕಿ ನೆನೆಸಿಟ್ಟು, ಒಂದು ಹದದಲ್ಲಿ ಹಿಟ್ಟನ್ನು ರುಬ್ಬಿಕೊಳ್ಳಬೇಕು. ಒಂದು ವೇಳೆ ಹಿಟ್ಟು ಸರಿಯಾಗಿ ಬಾರದಿದ್ದರೆ ದೋಸೆ ಹಾಗೆ ಇಡ್ಲಿ ಚೆನ್ನಾಗಿ ಬರುವುದಿಲ್ಲ.
ಹಿಟ್ಟು ಮಾಡಿಕೊಳ್ಳುವುದು ಒಂದು ದೊಡ್ಡ ಪ್ರಕ್ರಿಯೆ ಹಿಂದಿನ ದಿನವೇ ಈ ಪ್ರಕ್ರಿಯೆ ಆರಂಭವಾಗುತ್ತೆ. ಇನ್ನು ಹಿಟ್ಟು ಹದವಾಗಿ ಬದಲು ಕೆಲವು ಟ್ರಿಕ್ಸ್‌ಗಳಿವೆ. ಏಕೆಂದರೆ ನೀವು ಹೋಟೆಲ್‌ನಲ್ಲಿ, ಕ್ಯಾಂಟೀನ್‌ಗಳಲ್ಲಿ ದೋಸೆ ಇಡ್ಲಿ ಸವಿದಿರಬಹುದು. ಅಲ್ಲಿ ಬಹಳ ಮೃದುವಾಗಿ ಬರುವುದು ನೋಡಬಹುದು, ಆದ್ರೆ ಮನೆಯಲ್ಲಿ ಮಾಡಿದಾಗ ಕೆಲವೊಮ್ಮೆ ಗಟ್ಟಿಯಾಗಿಯೂ, ತವಕ್ಕೆ ಅಂಟಿಕೊಳ್ಳುವುದು, ಇಡ್ಲಿ ಅಂಟಾಗಿ ಬರುವುದು ಹೀಗೆ ಕೆಲವು ಅಡ್ಡಿ ನೋಡಬಹುದು.
ಆದ್ರೆ ಹಿಟ್ಟು ಮಾಡಿಕೊಳ್ಳುವಾಗ ಈ ರೀತಿ ಟ್ರಿಕ್ಸ್ ಬಳಸಿದ್ರೆ ನೀವು ಕೂಡ ಸುಲಭವಾಗಿ ಈ ಇಡ್ಲಿ ದೋಸೆ ಮಾಡಬಹುದು. ಹಾಗಾದ್ರೆ ದೋಸೆ ಹಿಟ್ಟು ಮಾಡಿಕೊಳ್ಳುವ ಸರಿಯಾದ ವಿಧಾನವೇನು? ಯಾವ ಟ್ರಿಕ್ಸ್ ಬಳಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದೋಸೆ ಹಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?
ಮೊದಲು ಹಿಟ್ಟು ಮಾಡುಗ ಅಕ್ಕಿ, ಉದ್ದಿನ ಜೊತೆಗೆ 2 ಸ್ಪೂನ್ ಮೆಂತ್ಯ ಹಾಕಿಕೊಳ್ಳಬೇಕು. ಇದು ಹಿಟ್ಟು ಉಬ್ಬಿ ಬರಲು ಸಹಕಾರಿಯಾಗಲಿದೆ. ಹಾಗೆ ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ಬೇರೆ ಬೇರೆಯಾಗಿ ನೆನೆಸಿಟ್ಟು ಬೇರೆ ಬೇರೆಯಾಗಿ ರುಬ್ಬಿಕೊಂಡು ಒಂದೇ ಪಾತ್ರೆಗೆ ಹಾಕಿಕೊಳ್ಳಬೇಕು.
ಹಾಗೆ ಉದ್ದು ಅಕ್ಕಿಯ ಜೊತೆಗೆ ಅವಲಕ್ಕಿಯನ್ನು ಹಾಕಿಕೊಳ್ಳಬಹುದು. ಅವಲಕ್ಕಿಯನ್ನು ನೆನೆಸಿಟ್ಟು ಅಕ್ಕಿಯ ಜೊತೆಗೆ ರುಬ್ಬಿಕೊಳ್ಳಬೇಕು. ಮತ್ತೊಂದು ಕಡೆ ಬೇಳೆಗಳನ್ನು ನೆನೆಸಿಟ್ಟ ನೀರಿನ್ನು ಮಾತ್ರವೇ ಬಳಸಿ ಎಲ್ಲಾ ಪದಾರ್ಥಗಳ ರುಬ್ಬಿಕೊಂಡರೆ ಹಿಟ್ಟು ಮೃದುವಾಗಿ ಬರಲಿದೆ. ಹಾಗೆ ಅಕ್ಕಿಯ ಜೊತೆಗೆ 3 ಸ್ಪೂನ್ ಸಿರಿ ಧಾನ್ಯ ಬೆರೆಸಿಕೊಳ್ಳುವುದು ಉತ್ತಮ.
ಹಿಟ್ಟು ರುಬ್ಬಿಕೊಂಡ ಬಳಿಕ ಕೊನೆಯಲ್ಲಿ ಹುಳಿ ಮಜ್ಜಿಗೆಯನ್ನು ಸೇರಿಸುವುದು ಕೂಡ ಮೃದುವಾದ ದೋಸೆ, ಇಡ್ಲಿ ಮಾಡಲು ಸಹಕಾರಿಯಾಗಲಿದೆ. ಇನ್ನು ಹಿಟ್ಟು ರುಬ್ಬುವಾಗ ಅನ್ನವನ್ನು ಹಾಕಿದರೆ ಕೂಡ ದೋಸೆ, ಇಡ್ಲಿ ಮೃದುವಾಗಿ ಬರಲಿದೆ. ಹಿಟ್ಟು ರೆಡಿಯಾದ ಬಳಿಕ ಚೆನ್ನಾಗಿ ಕೈಯಿಂದಲೇ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಅದರ ಮೇಲೆ ಭಾರವಾದ ವಸ್ತುವನ್ನು ಹಾಕಿ ಇಡುವುದರಿಂದಾಗಿಯೂ ಹಿಟ್ಟು ಉಬ್ಬಿ ಬರುವಂತೆ ಮಾಡಬಹುದು.
ಈ ಎಲ್ಲಾ ಟ್ರಿಕ್ಸ್‌ಗಳನ್ನು ನೀವು ಬಳಸಿದರೆ ಅದ್ಭುತವಾದ ಹಿಟ್ಟು ರೆಡಿ ಮಾಡಬಹುದು. ನೀವು ಕೂಡ ಒಮ್ಮೆ ಟ್ರೈ ಮಾಡಿ ನೊಡಿ. ಹೀಗೆ ಮಾಡಿದ್ರೆ ರುಚಿ ರುಚಿಯ ಹಾಗೆ ಮೃದುವಾದ ದೋಸೆ, ಇಡ್ಲಿ ರೆಡಿಯಾಗುತ್ತದೆ.



Click it and Unblock the Notifications