Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೇಪರ್‌ನಂತ ಮೃದು ತೆಂಗಿನಕಾಯಿ ರೊಟ್ಟಿ ಮನೆಯಲ್ಲಿ ಮಾಡಿ! ಒಂದು ಬಿಡದೆ ಖಾಯಿಯಾಗುತ್ತೆ!
ನೀವು ರೊಟ್ಟಿ ಖಾದ್ಯಗಳ ಇಷ್ಟಪಡುವ ಮಂದಿ ಆಗಿದ್ದರೆ, ಉತ್ತರ ಕರ್ನಾಟಕ ಶೈಲಿಯ ಹಲವು ರೀತಿಯ ರೊಟ್ಟಿಗಳ ಸವಿದಿರುತ್ತೀರಿ. ಅದ್ರಲ್ಲೂ ರಾಗಿ ರೊಟ್ಟಿ, ಜೋಳದ ರೊಟ್ಟಿ, ಅಕ್ಕಿ ರೊಟ್ಟಿ ಸೇರಿದಂತೆ ಹಲವು ಬೇಳೆ ಕಾಳುಗಳ ಬಳಸಿ ಮಾಡುವ ರೊಟ್ಟಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇವು ಆರೋಗ್ಯದ ದೃಷ್ಟಿಯಿಂದಲ ಸಹ ಬಹಳ ಉತ್ತಮವಾಗಿರಲಿದೆ.
ಹಾಗೆ ರೊಟ್ಟಿ ಮಾಡುವುದು ಅಂದರೆ ಹಲವರು ಕಷ್ಟದ ರೆಸಿಪಿ ಎಂದುಕೊಂಡಿರುತ್ತಾರೆ. ಹಾಗೆ ಇದನ್ನು ಹಲವು ಬಗೆಯಲ್ಲಿ ಮಾಡಬಹುದು. ನಾವಿಂದು ಸುಲಭವಾಗಿ ತೆಂಗಿನಕಾಯಿ ಬಳಸಿಕೊಂಡು ಮಾಡುವ ಮೃದುವಾದ ರೊಟ್ಟಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ರೊಟ್ಟಿ ಮೃದುವಾಗಿ ಬರುವುದಿಲ್ಲ ಎನ್ನುವವರು ಈ ರೀತಿಯ ವಿಧಾನ ಬಳಸಿಕೊಂಡು ಮೃದುವಾದ ರೊಟ್ಟಿ ಮಾಡಿ ಸವಿಯಬಹುದು.

ತೆಂಗಿನಕಾಯಿ ಬಳಸಿಕೊಂಡು ಮಾಡುವ ಈ ರೊಟ್ಟಿ ಪೇಪರ್‌ನಂತೆ ಮೃದುವಾಗಿರಲಿದೆ. ಹಾಗಾದ್ರೆ ಈ ತೆಂಗಿನಕಾಯಿ ಮೃದು ರೊಟ್ಟಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ರೊಟ್ಟಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
ತೆಂಗಿನಕಾಯಿ ತುರಿ
ಅಕ್ಕಿ ಹಿಟ್ಟು
ಉಪ್ಪು
ತೆಂಗಿನಕಾಯಿ ರೊಟ್ಟಿ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟುಕೊಂಡು ಅದಕ್ಕೆ ಒಂದು ಕಪ್ ನೀರು ಹಾಕಿ ಉಪ್ಪು ಹಾಕಿ ಕುದಿಯಲು ಬಿಡಬೇಕು. ನಂತರ ಒಂದು ಮಿಕ್ಸಿ ಜಾರ್‌ಗೆ ಅರ್ಧ ಕಪ್ ತೆಂಗಿನ ತುರಿ ಅಗತ್ಯದಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಈ ತೆಂಗಿನ ತುರಿಯನ್ನು ಒಲೆ ಮೇಲಿನ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ.
ಈ ನೀರು ಕುದಿಯಲು ಆರಂಭಿಸಿದಾಗ 1 ಕಪ್ ಅಕ್ಕಿ ಹಿಟ್ಟನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಿಟ್ಟು ನೀರನ್ನು ಹೀರಿಕೊಂಡು ಹದಕ್ಕೆ ಬಂದಾಗ ಒಲೆ ಆಫ್ ಮಾಡಿ ಇಳಿಸಿಕೊಳ್ಳಿ. ಹಾಗೆ ತಣ್ಣಗಾಗಲು ಬಿಡಿ. ಅನಂತರ ಸ್ವಲ್ಪ ತಣ್ಣಗಾದ ಬಳಿಕ ಕೈಯಿಂದ ಒತ್ತಿಕೊಳ್ಳುತ್ತಾ ನಾದಕೊಳ್ಳಬೇಕು. ಹಿಟ್ಟು ಮೃದುವಾಗಿ ಹಾಗೆ ನಯವಾಗಿ ಬರುವಂತೆ ನಾದುಕೊಳ್ಳಬೇಕು.
ಅನಂತರ ಸಾಮಾನ್ಯವಾಗಿ ನೀವು ರೊಟ್ಟಿ ತಟ್ಟಿಕೊಳ್ಳುವಂತೆ ತಟ್ಟಿಕೊಳ್ಳಬಹುದು. ಇಲ್ಲವೆ ಚಪಾತಿ ಮಣೆಯಲ್ಲಿ ಹಾಕಿಕೊಂಡು ಮೃದುವಾಗಿ ಲಟ್ಟಿಸಿಕೊಳ್ಳಬಹುದು, ಅನಂತರ ಕಾವಯಲ್ಲಿ ಹಾಕಿಕೊಂಡು ನಿಧಾನವಾಗಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೃದು ಮೃದುವಾದ ತೆಂಗಿನಕಾಯಿ ತುರಿಯ ರೊಟ್ಟಿ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಒಂದು ದಿನ ಮಾಡಿದ್ರೆ ಮದೇ ಪದೇ ಮಾಡೋದು ಖಚಿತ.



Click it and Unblock the Notifications