Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೃದುವಾದ ಹತ್ತಿಯಂತಹ ಬನ್ ದೋಸೆ ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ದೋಸೆ ಮಾಡಿ ಸವಿಯುವ ಅಭ್ಯಾಸ ಇಟ್ಟುಕೊಂಡಿರುತ್ತೀರಿ, ವಿವಿಧ ಬಗೆಯ ವಿವಿಧ ರುಚಿಯ ದೋಸೆಯನ್ನು ಸವಿಯಲು ನೀವು ಕೂಡ ಇಷ್ಟಪಡುತ್ತೀರಿ. ದೋಸೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ದೋಸೆ ರೆಸಿಪಿಗಳೆಂದರೆ ಹೋಟೆಲ್‌ನಲ್ಲೂ ಬಹಳ ಬೇಡಿಕೆ ಇರುವ ತಿಂಡಿ. ಮಸಾಲೆ ದೋಸೆ, ಸೆಟ್ ದೋಸೆ, ರವೆ ದೋಸೆ, ಮೆಂತ್ಯ ದೋಸೆ, ಹಾಗೆ ವಿಶೇಷ ದೋಸೆಗಳೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ.
ಇನ್ನು ವಿಶೇಷ ದಿನಗಳಲ್ಲಿ ಮಾಡುವಂತಹ ರುಚಿ ರುಚಿಯ ದೋಸೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ವಿಭಿನ್ನ ರುಚಿ ನೀಡುವಂತಹ ದೋಸೆಯಲ್ಲಿ ನಾವಿಂದು ಬನ್ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬನ್ ದೋಸೆ ಮಾಡೋದು ಬಹಳ ಸುಲಭ ಹಾಗೆ ಹೆಸರಿಗೆ ತಕ್ಕಂತೆ ಬಹಳ ಮೃದುವಾಗಿರಲಿದೆ. ಹಾಗಾದ್ರೆ ನಾವಿಂದು ಈ ಬನ್ ದೋಸೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಬನ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಬನ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ರವೆ - 1 ಕಪ್
ಮೊಸರು - 1/4 ಕಪ್
ಅಕ್ಕಿ ಹಿಟ್ಟು - 2 ಚಮಚ
ಈನೋ
ಈರುಳ್ಳಿ
ಶುಂಠಿ
ಜೀರಿಗೆ
ಸಾಸಿವೆ
ಕರಿಬೇವು
ಕೊತ್ತಂಬರಿ ಸೊಪ್ಪು
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಬನ್ ದೋಸೆ ಮಾಡುವ ವಿಧಾನವೇನು?
ಮೊದಲಿಗೆ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಅದಕ್ಕೆ ಸಾಸಿವೆ, ಜೀರಿಗೆ, ಹಸಿ ಮೆಣಸು, ಈರುಳ್ಳಿ, ಶುಂಠಿ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದರ ಜೊತೆಗೆ ಕರಿಬೇವು ಸಣ್ಣದಾಗಿ ಹೆಚ್ಚಿಕೊಂಡು ಹಾಕಿಕೊಳ್ಳಿ. ಈಗ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್‌ಗೆ 1 ಕಪ್ ಉಪ್ಪಿಟ್ಟು ರವೆ, ಕಾಲು ಕಪ್ ಮೊಸರು, ಸ್ವಲ್ಪ ಅಕ್ಕಿ ಹಿಟ್ಟು ಸ್ವಲ್ಪ ನೀರು ಅಂದರೆ ಸುಮಾರು 1 ಕಪ್ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ಇದು ಇಡ್ಲಿ ಹಿಟ್ಟಿನ ಹದ ಬರುವಂತೆ ರುಬ್ಬಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ತಣ್ಣಗಾಗಿರುವ ಒಗ್ಗರಣೆ ಕೂಡ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. 10 ನಿಮಿಷ ಹಾಗೆಯೇ ಬಿಟ್ಟು ಬಳಿಕ ಇದಕ್ಕೆ ಅಡುಗೆ ಸೋಡಾ ಅಥವಾ ಈನೋ ಸಾಲ್ಟ್ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ದೋಸೆ ಕಾವಲಿಯ್ನು ಒಲೆ ಮೇಲೆ ಇಟ್ಟು ಎಣ್ಣೆ ಹಚ್ಚಿ ಬಿಸಿಯಾಗಲು ಬಿಡಿ. ನಂತರ ಮಧ್ಯದಲ್ಲಿ ಈ ಹಿಟ್ಟು ಹಾಕಿ ದಪ್ಪವಾಗಿ ದೋಸೆ ಹಾಕಿಕೊಳ್ಳಿ.
ಇದು ಒಂದು ಭಾಗ ಬೇಐಲು ಸಮಯ ಹಿಡಿಯಲಿದೆ. ನಿಧಾನವಾಗಿ ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಎರಡು ಕಡೆ ಬೇಯಿಸಿಕೊಂಡ ಬಳಿಕ ನೀವು ಈ ದೋಸೆಯನ್ನು ಸವಿಯಲು ನೀಡಬಹುದು. ನೀವು ಕೂಡ ಇದನ್ನು ಮನೆಯಲ್ಲಿ ಒಮ್ಮೆ ಮಾಡಿ ನೋಡಿ. ಇದು ಸವಿಯಲು ಬಹಳ ಮೃದುವಾಗಿ ಎಲ್ಲರಿಗೂ ಇಷ್ಟವಾಗುತ್ತೆ. ನೀವು ಕೂಡ ಮನೆಯಲ್ಲಿ ಒಮ್ಮೆ ಮಾಡಿದರೆ ಜನ ಪದೇ ಪದೇ ಇದನ್ನು ಸವಿಯಲು ಮುಂದಾಗುತ್ತಾರೆ. ನಿಮಗಿದು ಅತ್ಯಂತ ರುಚಿ ಎನಿಸಬಹುದು. ಇದರ ಜೊತೆಗೆ ಒಂದು ಚಟ್ನಿ ಇದ್ದರೆ ರುಚಿ ದುಪ್ಪಟ್ಟಾಲಿದೆ.



Click it and Unblock the Notifications