ಬಾಯಲ್ಲಿ ಕರಗುವ ಇಡ್ಲಿ! ಸಾಫ್ಟ್ ಮತ್ತು ಫ್ಲಫಿ ವೆಜಿಟೆಬಲ್ ಇಡ್ಲಿ ಹೇಗೆ ಮಾಡೋದು?

Posted By:

ಬೆಳಗ್ಗಿನ ಉಪಹಾರಕ್ಕೆ ಆರೋಗ್ಯಕರ ಮತ್ತು ರುಚಿಕರವಾದ ತಿಂಡಿಯನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಈ 'ಫ್ಲಫಿ ವೆಜಿಟೇಬಲ್ ಇಡ್ಲಿ' (fluffy vegetable idli) ನಿಮಗೆ ಉತ್ತಮ ಆಯ್ಕೆಯಾಗಿದೆ. ಹೌದು, ದಕ್ಷಿಣ ಭಾರತದ ಪ್ರಮುಖ ಬ್ರೇಕ್‌ಫಾಸ್ಟ್ ಐಟಂ ಎಂದರೆ ಇಡ್ಲಿ (idli). ಇದು ಸಾಮಾನ್ಯವಾಗಿ ಬಿಳಿಯಾಗಿರುತ್ತದೆ. ಆದರೆ, ಇದಕ್ಕೆ ತರಕಾರಿಗಳ ಸೇರ್ಪಡೆಯಿಂದ ಹೆಚ್ಚು ಆರೋಗ್ಯಕರ ಮತ್ತು ಕಲರ್ ಫುಲ್ ಆಗಿ ಬದಲಾಗುತ್ತದೆ. ಮಕ್ಕಳೂ ಸಹ ಇಷ್ಟಪಟ್ಟು ತಿನ್ನುವ ಈ ಇಡ್ಲಿಯನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಈ ಮೃದುವಾದ ಮತ್ತು ಹಗುರವಾದ ತರಕಾರಿ ಇಡ್ಲಿಗಳನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಸುಲಭ ವಿಧಾನ ಇಲ್ಲಿದೆ ನೋಡಿ.

ತರಕಾರಿ ಇಡ್ಲಿ ದಕ್ಷಿಣ ಭಾರತದ ಪೌಷ್ಟಿಕಾಂಶಯುಕ್ತ ಉಪಹಾರವಾಗಿದೆ. ಇದನ್ನು ಹುದುಗಿಸಿದ ಹಿಟ್ಟು ಮತ್ತು ತಾಜಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಈ ಖಾದ್ಯವು ಮಕ್ಕಳು ಮತ್ತು ದೊಡ್ಡವರಿಗೆ ಎಲ್ಲಾ ಸಮಯದ ಊಟಕ್ಕೆ ಸೂಕ್ತವಾಗಿದೆ. ನೀವು ಇದಕ್ಕೆ ಮತ್ತೊಂದು ರೂಪ ನೀಡಬಹುದು. ಅದುವೇ ವೆಜಿಟೇಬಲ್ ಇಡ್ಲಿ. ಮೃದುವಾಗಿರುವ, ಹೊದಿಕೆಯಂತೆ ಹಗುರವಾದ ಇಡ್ಲಿ ಸವಿದರೆ ಚೆಂದ. ಆದರೆ, ಮನೆಯಲ್ಲಿ ಮಾಡಿದಾಗ ಕೆಲವೊಮ್ಮೆ ಇಡ್ಲಿ ಗಟ್ಟಿಯಾಗುವುದು ಸಹಜ. ಈ ಲೇಖನದಲ್ಲಿ ನಾವು ಮೃದುವಾಗಿರುವ ಹಾಗೂ ಫ್ಲಫಿ ವೆಜಿಟೇಬಲ್ ಇಡ್ಲಿ (vegetable idli recipe) ಮಾಡುವ ಬಗ್ಗೆ ತಿಳಿಸಿದ್ದೇವೆ.

How To Make soft and fluffy vegetable idli

ತರಕಾರಿ ಇಡ್ಲಿ ತಯಾರಿಸಲು ಬೇಕಾಗುವ ಪದಾರ್ಥಗಳು

• ಇಡ್ಲಿ ಹಿಟ್ಟು - 3 ಕಪ್
• ತುರಿದ ಕ್ಯಾರೆಟ್ - 1
• ಬೀನ್ಸ್ - 8 ರಿಂದ 10 (ಚಿಕ್ಕದಾಗಿ ಕತ್ತರಿಸಿದ)
• ಕ್ಯಾಪ್ಸಿಕಂ - ½ (ಚಿಕ್ಕದಾಗಿ ಕತ್ತರಿಸಿದ)
• ಹಸಿಮೆಣಸು - 1 ರಿಂದ 2 (ಚಿಕ್ಕದಾಗಿ ಕತ್ತರಿಸಿದ)
• ಹಸಿ ಬಟಾಣಿ - ಸ್ವಲ್ಪ
• ಕೋತ್ತಂಬರಿ ಸೊಪ್ಪು - ಸ್ವಲ್ಪ
• ಉಪ್ಪು - ರುಚಿಗೆ ತಕ್ಕಂತೆ
• ಎಣ್ಣೆ ಅಥವಾ ನೀರು - ಅಗತ್ಯಕ್ಕೆ ತಕ್ಕಂತೆ

vegetable idli

ತರಕಾರಿ ಇಡ್ಲಿ ತಯಾರಿಸುವ ವಿಧಾನ

ಹಂತ 1: ಮೊದಲಿಗೆ ಕ್ಯಾರೆಟ್, ಬೀನ್ಸ್, ಬಟಾಣಿ ಮತ್ತು ಕ್ಯಾಪ್ಸಿಕಂ ಸೇರಿದಂತೆ ನೀವು ಬಳಸುವ ತರಕಾರಿಗಳನ್ನು ತೊಳೆಯಿರಿ. ಬಳಿಕ ಚಿಕ್ಕದಾಗಿ ಕತ್ತರಿಸಿ. ಕೆಲವು ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ. ಅವು ಮೃದುವಾಗುವವರೆಗೆ ಇಡಿ.

ಹಂತ 2: ಆವಿಯಲ್ಲಿ ಬೇಯಿಸಿದ ತರಕಾರಿಗಳು ಮತ್ತು ಕೊತ್ತಂಬರಿ ಸೊಪ್ಪನ್ನು ಇಡ್ಲಿ ಹಿಟ್ಟಿಗೆ ಸೇರಿಸಿ. ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಹಂತ 3: ಇಡ್ಲಿ ಅಚ್ಚುಗಳನ್ನು ಎಣ್ಣೆ ಅಥವಾ ತುಪ್ಪದಿಂದ ಗ್ರೀಸ್ ಮಾಡಿ. ತರಕಾರಿ ಮತ್ತು ಹಿಟ್ಟಿನ ಮಿಶ್ರಣವನ್ನು ಪ್ರತಿ ಅಚ್ಚಿಗೆ 3/4 ಭಾಗ ತುಂಬುವವರೆಗೆ ಹಾಕಿ.

ಹಂತ 4: ಇಡ್ಲಿ ಕುಕ್ಕರ್ ಅಥವಾ ಸ್ಟೀಮರ್‌ನಲ್ಲಿ 10 ರಿಂದ 12 ನಿಮಿಷಗಳ ಕಾಲ ಅಥವಾ ಟೂತ್‌ಪಿಕ್ ಸ್ವಚ್ಛವಾಗಿ ಹೊರಬರುವವರೆಗೆ ಆವಿಯಲ್ಲಿ ಬೇಯಿಸಿ.

ಹಂತ 5: ನಿಧಾನವಾಗಿ ಅಚ್ಚಿನಿಂದ ಇಡ್ಲಿಯನ್ನು ತೆಗೆಯಿರಿ. ಇದನ್ನು ತೆಂಗಿನಕಾಯಿ ಚಟ್ನಿ, ಸಾಂಬಾರ್ ಅಥವಾ ಖಾರದ ಪುಡಿಯೊಂದಿಗೆ ಬಿಸಿ ಬಿಸಿಯಾಗಿ ಸವಿಯಬಹುದು. ಇದು ಉಪಹಾರ, ಊಟ ಅಥವಾ ರಾತ್ರಿಯ ಊಟ ಮತ್ತು ತಿಂಡಿಗೆ ಸೂಕ್ತವಾಗಿದೆ.

Make low calorie Oats Idli

ಇಡ್ಲಿ ಸಾಫ್ಟ್ ಮತ್ತು ಫ್ಲಫಿಯಾಗಿ ಬರಲು ಟಿಪ್ಸ್‌ಗಳು

• ಇಡ್ಲಿ ಹಿಟ್ಟು ತುಂಬಾ ತೆಳುವಾಗಿದ್ದರೆ ಇಡ್ಲಿ ಗಟ್ಟಿಯಾಗಿ ಬರುತ್ತದೆ. ಆದ್ದರಿಂದ, ಹಿಟ್ಟು ದಪ್ಪವಾಗಿರಲಿ.

• ಇಡ್ಲಿ ಹಿಟ್ಟನ್ನು ಸರಿಯಾದ ತಾಪಮಾನದಲ್ಲಿ ಹುದುಗಿಸುವುದು ಬಹಳ ಮುಖ್ಯ. ಇದು ಇಡ್ಲಿಗಳನ್ನು ಮೃದುಗೊಳಿಸುತ್ತದೆ.

• ಇಡ್ಲಿ ಪಾತ್ರೆಯಲ್ಲಿ ಸರಿಯಾದ ಪ್ರಮಾಣದ ನೀರನ್ನು ಬಳಸಿ. ತುಂಬಾ ಕಡಿಮೆ ನೀರು ಇಡ್ಲಿಗಳನ್ನು ಗಟ್ಟಿಯಾಗಿಸಬಹುದು.

• ಹಿಟ್ಟು ಚೆನ್ನಾಗಿ ಹುಳಿಯಾದರೆ ಇಡ್ಲಿ ನೈಸರ್ಗಿಕವಾಗಿ ಮೃದುವಾಗುತ್ತದೆ. ಉದ್ದಿನ ಬೇಳೆಯನ್ನು ಹೆಚ್ಚು ಹಾಕಿದರೆ ಇಡ್ಲಿ ಹಗುರವಾಗುತ್ತದೆ. ಹೆಚ್ಚು ಬೇಯಿಸಿದರೆ ಇಡ್ಲಿ ಒಣಗುತ್ತದೆ, ಕಡಿಮೆ ಬೇಯಿಸಿದರೆ ಹದ ಬರುವುದಿಲ್ಲ.

[ of 5 - Users]
Story first published: Sunday, August 10, 2025, 9:50 [IST]
X
Desktop Bottom Promotion