Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹತ್ತಿಯಂತಹ ಮೃದುವಾಗಿ ಅಕ್ಕಿ ರೊಟ್ಟಿ ಮನೆಯಲ್ಲೇ ಮಾಡಿ..! 5 ನಿಮಿಷವೂ ಬೇಕಾಗಿಲ್ಲ!
ಬೆಳಗ್ಗೆ ತಿಂಡಿಯ ಸಮಯದಲ್ಲಿ ನೀವು ರೊಟ್ಟಿ, ದೋಸೆ ಸವಿಯುವುದನ್ನು ಬಹಳ ಇಷ್ಟಪಡುತ್ತೀರಿ. ರೊಟ್ಟಿಗಳಲ್ಲಿ ಹಲವು ವಿಧಗಳಿವೆ. ನೀವು ಬೆಳಗ್ಗೆ ರೊಟ್ಟಿ ಸವಿಯಲು ಇಷ್ಟಪಡುವ ಮಂದಿ ಆಗಿದ್ದರೆ ಯಾವಾಗಲು ಜೋಳದ ರೊಟ್ಟಿ, ರಾಗಿ ರೊಟ್ಟಿ, ಅಕ್ಕಿ ರೊಟ್ಟಿ ಮನೆಯಲ್ಲೇ ಮಾಡಿ ಅಥವಾ ಅಂಗಡಿಯಿಂದ ಖರೀದಿಸಿ ತಂದು ಮನೆಯಲ್ಲೇ ಬೇಯಿಸಿ ಸವಿದಿರಬಹುದು.
ಅದ್ರಲ್ಲೂ ಅಕ್ಕಿ ರೊಟ್ಟಿ ರುಚಿಕರ ಹಾಗೆ ಬಹಳ ಸುಲಭವಾಗಿ ಮಾಡಿ ಸವಿಯಬಹುದಾದ ರೊಟ್ಟಿಯಾಗಿದೆ. ಆದ್ರೆ ಹಲವರಿಗೆ ಈ ಅಕ್ಕಿ ರೊಟ್ಟಿ ಮಾಡುವ ವಿಧಾನದ ಕುರಿತಾಗಿ ತಿಳಿದಿರೋದಿಲ್ಲ. ಅದ್ರಲ್ಲೂ ಸುಲಭವಾಗಿ ಹೇಗೆ ಈ ಅಕ್ಕಿ ರೊಟ್ಟಿ ಮಾಡಬೇಕು ಎಂಬುದು ತಿಳಿಯೋದಿಲ್ಲ. ಅವರು ಅಕ್ಕಿ ರೊಟ್ಟಿ ಮಾಡುವಾಗ ಅದು ಬಹಳ ದಪ್ಪವಾಗಿ ಬರಲಿದೆ ಎಂಬ ಆರೋಪ ಸಾಮಾನ್ಯವಾಗಿ ಕೇಳಿಬರುತ್ತದೆ.

ಆದ್ರೆ ಅಕ್ಕಿ ರೊಟ್ಟಿಯನ್ನು ತೆಳುವಾಗಿ ಪೇಪರ್‌ನಂತೆಯೂ ಮಾಡಬಹುದು. ಹೀಗೆ ಮಾಡುವಾಗ ಅಕ್ಕಿ ಹಿಟ್ಟು ರೆಡಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅದ್ರಲ್ಲೂ ನಾವಿಂದು ಈ ಅಕ್ಕಿ ರೊಟ್ಟಿ ಮಾಡಲು ಹೇಗೆ ಹಿಟ್ಟು ರೆಡಿಮಾಡಬೇಕು. ಇದರಿಂದ ಹೇಗೆ ತೆಳುವಾದ ಹಾಗೆ ಮೃದುವಾದ ರೊಟ್ಟಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಈ ಅಕ್ಕಿ ರೊಟ್ಟಿ ಮಾಡಲು ಹೇಗೆ ಹಿಟ್ಟು ಮಾಡಬೇಕು?, ರೊಟ್ಟಿ ಮಾಡುವುದು ಹೇಗೆ? ಯಾವೆಲ್ಲಾ ಪದಾರ್ಥಗಳು ಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು ಬೇಕು?
- ಅಕ್ಕಿ ಹಿಟ್ಟಿ
- ಉಪ್ಪು
- ಎಣ್ಣೆ
ಅಕ್ಕಿ ರೊಟ್ಟಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆಲ್ಲಿ ನೀರು ಇಟ್ಟು ಅದಕ್ಕೆ ಉಪ್ಪು 1 ಸ್ಪೂನ್ ಎಣ್ಣೆ ಹಾಕಿ ಕುದಿಯಲು ಬಿಡಬೇಕು. ಈಗ ಕುದಿಬರುತ್ತಿರುವ ನೀರಿಗೆ ಜರಡಿ ಹಿಡಿದು ಇಟ್ಟುಕೊಂಡಿರುವ 1 ಕಪ್ ನುಣ್ಣಗಿನ ಅಕ್ಕಿ ಹಿಟ್ಟನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿ ಇಡಿ. 5 ನಿಮಿಷ ಇಟ್ಟು ಕೈಯಿಂದಲೇ ಹಿಟ್ಟನ್ನು ಹದ ಮಾಡಿಕೊಳ್ಳಿ.
ಚೆನ್ನಾಗಿ ಹಿಟ್ಟನ್ನು ಒತ್ತಿಕೊಂಡು ಚಪಾತಿ ಹಿಟ್ಟಿನಂತಹ ಹದಕ್ಕೆ ಬರುವವರೆಗೂ ಹದ ಮಾಡಿಕೊಳ್ಳಬೇಕು. ಈ ಹಿಟ್ಟು ಕೈಗೆ ಪಾತ್ರೆಗೆ ಅಂಟಿಕೊಳ್ಳಬಾರದು. ಅನಂತರ ಕೈಯಲ್ಲಿ ನೀರು ಹಚ್ಚಿಕೊಂಡು ನಿಂಬೆ ಹಣ್ಣಿನ ಗಾತ್ರಕ್ಕೆ ಉಂಡೆಗಳ ಮಾಡಿ ಇಟ್ಟಕೊಳ್ಳಬೇಕು.
ಈಗ ಚಪಾತಿಯಂತೆಯೇ ಒಣ ಹಿಟ್ಟು ಹಾಕಿಕೊಳ್ಳುತ್ತಾ ಮೆದುವಾಗಿ ಲಟ್ಟಿಸಿಕೊಳ್ಳಬೇಕು. ಚಪಾತಿಯಂತೆ ಒತ್ತಿ ಲಟ್ಟಿಸಬೇಡಿ. ಈಗ ಈ ರೊಟ್ಟಿ ಮಾಡಿ ಕಾವಲಿ ಮೇಲೆ ಹಾಕಿಕೊಳ್ಳಿ. ಈಗ ಕಾಟನ್ ಬಟ್ಟೆಯಲ್ಲಿ ನೀರನ್ನು ಅದ್ದಿ ಈ ರೊಟ್ಟಿಯ ಮೇಲೆ ನಿಧಾನಕ್ಕೆ ಹಚ್ಚಿಕೊಳ್ಳಿ. ಈ ರೀತಿ ಮಾಡಿದ್ರೆ ರೊಟ್ಟಿ ಒಣಗುವುದಿಲ್ಲ ಅಥವಾ ಗಟ್ಟಿಯಾಗುವುದಿಲ್ಲ.
ಬೇಗ ಬೇಗ ತಿರುಗಿಸಿಕೊಂಡು ಸ್ವಲ್ಪ ಬಾಡಿಕೊಳ್ಳಲು ಬಿಡಬೇಕು. ನಂತರ ಇದನ್ನು ನೇರವಾಗಿ ಸ್ಟನ ಒಲೆ ಉರಿಯಲ್ಲಿ ಸುಟ್ಟುಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಮೃದುವಾದ, ಉಬ್ಬಿಬರುವ ಅಕ್ಕಿ ರೊಟ್ಟಿ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ನೋಡಿ. ಬೆಳಗ್ಗೆ ತಿಂಡಿಗೆ ಮಾಡಿದ್ರೆ ಎಲ್ಲರಿಗೂ ಬಹಳ ಇಷ್ಟವಾಗುತ್ತೆ.



Click it and Unblock the Notifications