Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾರು ಬೇಡ ಅನ್ನಲ್ಲಾ ಈ ಪಡವಲಕಾಯಿ ಮಸಾಲೆ ರಿಂಗ್! ಸಖತ್ ಸುಲಭದ ತಿಂಡಿ
ನೀವು ಮನೆಯಲ್ಲಿ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಸವಿಯುವ ಇಷ್ಟಪಡುತ್ತಿದ್ದರೆ ಹಲವು ರೀತಿ ಕರಿದ ತಿಂಡಿಗಳ ಮಾಡಿರಬಹುದು. ಹಾಗೆ ರಸ್ತೆ ಬದಿಯಲ್ಲಿ ಸಿಗುವಂತಹ ರುಚಿ ರುಚಿಯ ಕರಿಚ ತಿಂಡಿಗಳ ಸವಿಯಲು ನೀವು ಇಷ್ಟಪಡಬಹುದು. ಹಾಗೆ ಕಾಫಿ ಟೀ ಜೊತೆಗೆ ಒಂದು ಸ್ನ್ಯಾಕ್ಸ್ ಕೂಡ ಇದ್ದರೆ ಅದರ ರುಚಿ ದುಪ್ಪಟ್ಟಾಗೋದು ಖಚಿತ.
ಹಾಗೆ ನೀವು ಸ್ಪೆಷಲ್ ಆಗಿ ಯಾವುದಾದರು ಕರಿದ ತಿಂಡಿಗಳ ಮಾಡಲು ಮುಂದಾದರೆ ನಾವಿಂದು ನಿಮಗಾಗಿ ಪಡವಲಕಾಯಿಯಿಂದ ಮಾಡುವ ಟೇಸ್ಟಿ ಮಸಾಲೆ ರಿಂಗ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನೀವು ಪಡವಲಕಾಯಿಯನ್ನು ಸಾಂಬಾರ್ ಮಾಡಿ ಇಲ್ಲವೆ ಪಲ್ಯ ಮಾಡಿ ಸವಿದಿರುತ್ತೀರಿ. ಈ ರುಚಿಯಲ್ಲಿ ನೀವು ನಿತ್ಯ ಪಡವಲಕಾಯಿಯ ಸವಿಯಲು ಇಷ್ಟಪಡುತ್ತೀರಿ.

ಆದ್ರೆ ನಾವಿಂದು ಸುಲಭವಾಗಿ ಮಾಡುವ ಹಾಗೆ ಮಕ್ಕಳಿಗೆ ಇಷ್ಟವಾಗುವಂತಹ ಪಡವಲಕಾಯಿಯ ಮಸಾಲೆ ರಿಂಗ್ ಮಾಡುವ ಕುರಿತು ತಿಳಿಯೋಣ. ಇದನ್ನು ಸಂಜೆ ಸಮಯದಲ್ಲಿ ಟೀ ಕಾಫಿಯ ಜೊತೆಗೆ ಸವಿಯಲು ನೀಡಬಹುದು. ಹಾಗೆ ಇದರ ರುಚಿಗೆ ನೀವು ಫಿದಾ ಆಗುತ್ತೀರಿ. ಹಾಗಾದ್ರೆ ನಾವಿಂದು ಈ ರುಚಿ ರುಚಿಯ ಪಡವಲಕಾಯಿ ಮಸಾಲೆ ರಿಂಗ್ ಮಾಡುವ ಕುರಿತಾಗಿ ತಿಳಿಯೋಣ.
ಈ ಪಡವಲಕಾಯಿ ಮಸಾಲೆ ರಿಂಗ್ ಮಾಡೋದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಡವಲಕಾಯಿ ಮಸಾಲೆ ರಿಂಗ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಪಡವಲಕಾಯಿ
ಕಡಲೆ ಹಿಟ್ಟು 1 ಕಪ್
ಅಚ್ಚಕಾರದ ಪುಡಿ
ಓಂಕಾಳು
ಸೋಡಾ
ಉಪ್ಪು
ಎಣ್ಣೆ
ಪಡವಲಕಾಯಿ ಮಸಾಲೆ ರಿಂಗ್ ಮಾಡುವ ವಿಧಾನವೇನು?
ಮೊದಲು ಪಡವಲಕಾಯಿಯನ್ನು ತೊಳೆದು ಚಾಕು ಸಹಾಯದಿಂದ ಸಣ್ಣಗೆ ಮೇಲಿನ ಪದರ ತೆಗೆದುಕೊಳ್ಳಿ. ಕ್ಯಾರೆಟ್ ರೀತಿ ಸಿಪ್ಪೆ ತೆಗೆದರೆ ಸಾಕು. ನಂತರ ಪಡವಲಕಾಯಿಯನ್ನು ವೃತ್ತಾಕಾರದಲ್ಲಿ ಹೆಚ್ಚಿಕೊಳ್ಳಬೇಕು. ಸೌತೆಕಾಯಿ ಕತ್ತರಿಸಿಕೊಂಡಂತೆ ಕತ್ತರಿಸಿಕೊಳ್ಳಿ. ಪಡವಲಕಾಯಿಯು ಮಧ್ಯದಲ್ಲಿ ಟೊಳ್ಳಾಗಿರುವ ಕಾರಣ ಸುಲಭವಾಗಿ ವೃತ್ತಕ್ಕೆ ಕತ್ತರಿಸುವುದು ಸುಲಭ.
ಹೀಗೆ ಪಡವಲಕಾಯಿ ಕ್ಲೀನ್ ಮಾಡಿ ಕತ್ತರಿಸಿ ಇಟ್ಟುಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು, ಖಾರದ ಪುಡಿ, ಓಂಕಾಳು, ಸೋಡಾ, ಉಪ್ಪು ಹಾಕಿಕೊಂಡು ಡ್ರೈ ಮಿಕ್ಸ್ ಮಾಡಿಕೊಳ್ಳಿ. ಈಗ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಕಲಸಿಕೊಳ್ಳಿ. ಇದು ಬೋಂಡಾ ಮಾಡಲು ಬೇಕಾಗುವಂತಹ ಹದಕ್ಕೆ ಹಿಟ್ಟು ರೆಡಿಮಾಡಿಕೊಳ್ಳಿ. ತೆಳುವಾದರೆ ಕಡಲೆ ಹಿಟ್ಟು ಹಾಕಿ ದಪ್ಪ ಮಾಡಿಕೊಳ್ಳಿ.
ಈಗ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಇನ್ನೊಂದು ಕಡೆ ಹೆಚ್ಚಿಕೊಂಡಿರುವ ಅಷ್ಟೂ ಪಡವಲಕಾಯಿಯನ್ನು ಹಿಟ್ಟಿನಲ್ಲಿ ಹಾಕಿಕೊಳ್ಳಿ. ಚೆನ್ನಾಗಿ ಹಿಟ್ಟು ಹಿಡಿಸಿದ ಬಳಿಕ ಒಂದೊಂದೇ ಪಡವಲಕಾಯಿಯನ್ನು ಎಣ್ಣೆಯಲ್ಲಿ ಹಾಕಿಕೊಳ್ಳಿ. ನಿಧಾನವಾಗಿ ಒಂದೊಂದೇ ಬಜ್ಜಿಯನ್ನು ಎಣ್ಣೆಗೆ ಬಿಡಿ.
ಚೆನ್ನಾಗಿ ಪಡವಲಕಾಯಿ ಒಳಗೆ ಕರಿಯುವಂತೆ ಮಾಡಲು ಚೆನ್ನಾಗಿ ಕರಿದುಕೊಳ್ಳಬೇಕು. ಮೊದಲು ಎರಡು ಸುತ್ತು ಎಣ್ಣೆಗೆ ಬಿಟ್ಟಾಗ ಚೆನ್ನಾಗಿ ಬರದೆ ಇರಬಹುದು ಇಲ್ಲವೆ ಹಿಟ್ಟು ಎಣ್ಣೆಯಲ್ಲಿ ಮಿಶ್ರಣ ಆಗಬಹುದು. ಮೂರನೇ ಸುತ್ತಿನಲ್ಲಿ ಹದ ಚೆನ್ನಾಗಿ ಬರಲಿದೆ. ನೀವು ಕೂಡ ಮನೆಯಲ್ಲಿ ಈ ರೀತಿ ಬಜ್ಜಿ ಮಾಡಿ ನೋಡಿ. ಸಂಜೆಯ ಸಮಯಕ್ಕೆ ಇದು ಅದ್ಭುತ ರುಚಿ ನೀಡಲಿದೆ. ಪಡವಲಕಾಯಿಯಲ್ಲಿ ಮಾಡುವ ಖಾದ್ಯಗಳ ಪೈಕಿ ಈ ರೀತಿ ಮಸಾಲೆ ರಿಂಗ್ ಬಹಳ ರುಚಿ ನೀಡಲಿದೆ. ಎಲ್ಲರಿಗೂ ಇಷ್ಟವಾಗುತ್ತೆ. ಹೀಗಾಗಿ ನೀವು ಕೂಡ ಇದನ್ನು ಮಾಡಿ ನೋಡಿ.



Click it and Unblock the Notifications