Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೋಟೆಲ್‌ನಲ್ಲಿ ನೀಡುವ ಹತ್ತಿಯಂತ ಅಕ್ಕಿ ರೊಟ್ಟಿ ಮನೆಯಲ್ಲೇ ಮಾಡಿ.! 2 ವಸ್ತು ಇದ್ರೆ ಸಾಕು!
ನೀವು ಹೋಟೆಲ್, ರೆಸ್ಟೋರೆಂಟ್ ಹಾಗೆ ಡಾಬಾದಲ್ಲಿ ಊಟ, ತಿಂಡಿಗೆ ತೆರಳಿದಾಗ ನೀವು ಅಕ್ಕಿ ರೊಟ್ಟಿ ಆರ್ಡರ್ ಮಾಡಿ ಸವಿದಿರುತ್ತೀರಿ. ಅಕ್ಕಿ ರೊಟ್ಟಿ ಮೃದುವಾಗಿ 4ರಿಂದ 5ರ ವರೆಗೂ ಕೆಲವರು ಸವಿಯುವಸಷ್ಟು ರುಚಿಯಾಗಿರುತ್ತೆ. ಆದ್ರೆ ಮನೆಯಲ್ಲಿ ಈ ರೊಟ್ಟಿ ಮಾಡಿದ್ರೆ ಈ ರೀತಿಯಾಗಿ ಬರುವುದಿಲ್ಲ ಎಂಬ ದೂರು ನೋಡಬಹುದು. ಹಾಗೆ ಈ ಅಕ್ಕಿ ರೊಟ್ಟಿಯನ್ನು ಸುಲಭವಾಗಿ ಮಾಡಬಹುದು ಎಂಬುದು ಕೂಡ ತಿಳಿದಿರೋದಿಲ್ಲ.
ಅಕ್ಕಿ ರೊಟ್ಟಿಯ ಜೊತೆಗೆ ಮಶ್ರೂಮ್ ಗ್ರೇವಿ, ಬದನೆಕಾಯಿ ಎಣ್ಣೆಗಾಯಿ ಇದ್ದರೆ ರುಚಿ ಮತ್ತಷ್ಟು ಅದ್ಭುತವಾಗುತ್ತೆ. ನೀವು ಕೂಡ ಈ ರೊಟ್ಟಿಯನ್ನು ಸವಿಯಲು ಇಷ್ಟಪಡುವವರಾಗಿದ್ದರೆ, ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಚಪಾತಿ ಮಾಡಿದಂತೆ ಮೃದುವಾದ, ಹತ್ತಿಯಷ್ಟು ಹಗುರವಾಗಿ ಈ ಅಕ್ಕಿ ರೊಟ್ಟಿ ಮಾಡುವ ಕುರಿತು ತಿಳಿಯೋಣ.

ಈ ಅಕ್ಕಿ ರೊಟ್ಟಿಯು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಫೈಬರ್ ತುಂಬಿರುವ ಈ ರೊಟ್ಟಿಯನ್ನು ಕಡಿಮೆ ಎಣ್ಣೆ ಬಳಸಿ ಮಾಡುವುದರಿಂದ ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ ಖಾದ್ಯ, ಹಾಗೆ ಇದನ್ನು ಬ್ರೇಕ್‌ಫಾಸ್ಟ್‌ಗೆ ಊಟದ ಜೊತೆಗೆ ರಾತ್ರಿ ಖಾಲಿ ರೊಟ್ಟಿಯನ್ನೇ ಸವಿಯಬಹುದು. ಹಾಗಾದ್ರೆ ಈ ಅಕ್ಕಿ ರೊಟ್ಟಿ ಮಾಡೋದು ಹೇಗೆ?
ಅಕ್ಕಿ ರೊಟ್ಟಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ ಇಟ್ಟು 4 ಕಪ್
- ಅನ್ನ - 1 ಕಪ್
- ಉಪ್ಪು
- ಎಣ್ಣೆ
ಅಕ್ಕಿ ರೊಟ್ಟಿ ಮಾಡುವ ವಿಧಾನವೇನು?
ಮೊದಲು ಬಾಣಲೆಯಲ್ಲಿ 1 ಗ್ಲಾಸ್ ನೀರು ಹಾಕಿಕೊಂಡು ನಂತರ 1 ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ನಂತರ ಈ ನೀರು ಚೆನ್ನಾಗಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ನೀರು ತೆಗೆದುಕೊಂಡ ಗ್ಲಾಸ್‌ನಲ್ಲೇ 1 ಗ್ಲಾಸ್ ಅಕ್ಕಿ ಹಿಟ್ಟನ್ನು ಇದಕ್ಕೆ ಹಾಕಿಕೊಂಡು ಕಲಸಿಕೊಳ್ಳಿ. ನೀರು ಡ್ರೈ ಆಗುವವರೆಗೂ ಕಲಸಿಕೊಳ್ಳಬೇಕು.
ನಂತರ ಒಂದು ಬೌಲ್‌ಗೆ ಈ ಹಿಟ್ಟು ಹಾಕಿಕೊಂಡು ಕೈಯಿಂದ ಚೆನ್ನಾಗಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಹದ ಮಾಡಿಕೊಳ್ಳಿ. ಅದೇ ರೀತಿ ಈ ಹಿಟ್ಟು ಕಲಸಿದರೆ ಬರುತ್ತದೆ. ಈಗ ಚಪಾತಿ ಲಟ್ಟಿಸಿದಂತೆ ಲಟ್ಟಿಸಿಕೊಳ್ಳಬೇಕು. ಚಪಾತಿ ಮಣೆಯ ಮೇಲೆ ಅಕ್ಕಿ ಇಟ್ಟು ಹಾಕಿಕೊಂಡು ಅದರ ಮೇಲೆ ಸ್ವಲ್ಪ ಉಂಡೆ ಹಿಟ್ಟು ತೆಗೆದುಕೊಂಡು ಲಟ್ಟಿಸಿಕೊಳ್ಳಿ. ಚಪಾತಿಯಂತೆಯೇ ಲಟ್ಟಿಸಿ.
ನಂತರ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಾಕದೆಯೇ ಬಿಸಿಮಾಡಿಕೊಳ್ಳಿ. ನಂತರ ಈ ರೊಟ್ಟಿಯನ್ನು ಅದರ ಮೇಲೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ, ಸಣ್ಣ ಉರಿಯಲ್ಲಿ ಕಾಯಿಸಿಕೊಂಡರೆ ಮೃದುವಾಗಿ ಬರುತ್ತದೆ. ಕಾವಲಿ ಇಲ್ಲದಿದ್ದರೆ ಅಥವಾ ಹಾಗೆ ಮೆಷ್ ಮೇಲೆ ಹಾಕಿ ಕಾಯಿಸಿಕೊಳ್ಳಬಹುದು. ಹಾಗೆ ಬಿಸಿಯಾಗಿದ್ದಾಗಲೆ ಸವಿಯಲು ನೀಡಬಹುದು. ಇಲ್ಲದಿದ್ದರೆ ಮತ್ತೆ ಗಟ್ಟಿಯಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಹೂವಿನಂತೆ ಮೃದುವಾದ ಅಕ್ಕಿ ರೊಟ್ಟಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ .
ಹೋಟೆಲ್, ರೆಸ್ಟೋರೆಂಟ್‌ನಲ್ಲೂ ಕೂಡ ಇದೇ ರೀತಿ ವಿಧಾನವಾಗಿ ಮಾಡುತ್ತಾರೆ. ಹಾಗೆ ಅಷ್ಟೇ ಮೃದುವಾಗಿ ಮನೆಯಲ್ಲಿ ನಾವು ಇದನ್ನು ಮಾಡಬಹುದು. ಮಾಡೋದು ಕೂಡ ಬಹಳ ಸುಲಭ.



Click it and Unblock the Notifications