Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹತ್ತಿಯಂತೆ ಮೃದುವಾದ ಈ ಮಜ್ಜಿಗೆ ದೋಸೆ ಮಾಡಿ..! ಮಾಡೋದು ಹೇಗೆ?
ನಾವು ಬ್ರೇಕ್ ಫಾಸ್ಟ್‌ಗೆ ನಿತ್ಯ ಒಂದೇ ರೀತಿ ಖಾದ್ಯ ಮಾಡಿ ಮಾಡಿ ಸವಿಯುತ್ತಿದ್ದರೆ ನಿಮಗೆ ಬೇಜಾರಾಗಿರುತ್ತೆ. ಹೀಗಾಗಿ ಯಾವುದಾದರು ಸ್ಪೆಷಲ್ ಖಾದ್ಯ ಮಾಡುವ ಮನಸ್ಸು ನಿಮ್ಮದಾಗಿದ್ದರೆ ನೀವು ಖಂಡಿತ ನಾವಿಂದು ಹೇಳುವ ಮಜ್ಜಿಗೆ ದೋಸೆ ಮಾಡಲೇಬೇಕು. ಈ ಮಜ್ಜಿಗೆ ದೋಸೆ ಎಲ್ಲರಿಗೂ ಇಷ್ಟವಾಗುವು ಖಾದ್ಯ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ಅದ್ರಲ್ಲೂ ದೋಸೆ ಅಂದ್ರೆ ಬಹುತೇಕ ಎಲ್ಲರು ಇಷ್ಟಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೋಸೆ ಮನೆ ಮನೆಯ ಖಾದ್ಯ. ಆದ್ರೆ ಒಂದೇ ರೀತಿಯ ದೋಸೆ ಮಾಡಿ ನಿಮಗೆ ಬೋರ್ ಎನಿಸಿರಬಹುದು, ಆದರೂ ಒಂದಿಷ್ಟು ದೋಸೆಯ ವಿಧಾನಗಳು ನಿಮ್ಮ ಬಾಯಿ ರುಚಿಯನ್ನು ಹೆಚ್ಚಿಸಿರಬಹುದು. ಇಂದು ನಾವು ಸಹ ಇಂತಹ ಬಾಯಿ ರುಚಿ ಹೆಚ್ಚಿಸುವಂತಹ ಹೊಸ ದೋಸೆ ಬಗೆಯನ್ನು ಹೇಳಲಿದ್ದೇವೆ.

ಈ ದೋಸೆಗೆ ಮಜ್ಜಿಗೆ ಹಾಕಿ ಬಳಿಕ ಹಿಟ್ಟು ರೆಡಿ ಮಾಡಿ ದೋಸೆ ತಯಾರಿಸಲಾಗುತ್ತದೆ. ಹೀಗಾಗಿ ಇದು ಬಹಳ ರುಚಿಕರ ಹಾಗೂ ವಿಶೇಷವಾಗಿ ಮೃದುವಾಗಿರುತ್ತದೆ. ನಾವಿಂದು ಈ ಮರದುವಾದ ದೋಸೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಮಜ್ಜಿಗೆ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಹಾಗೆ ಇದಕ್ಕೆ ಹಿಟ್ಟನ್ನು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ದೋಸೆ ಅಕ್ಕಿ - 2 ಕಪ್
ಅವಲಕ್ಕಿ
ಮೆಂತ್ಯ
ಉಪ್ಪು
ಎಣ್ಣೆ
ಮಜ್ಜಿಗೆ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ನಲ್ಲಿ 2 ಗ್ಲಾಸ್ ಅಕ್ಕಿ ಹಾಕಿಕೊಳ್ಳಿ, ಹಾಗೆ ಅದಕ್ಕೆ ಒಂದು ಕಪ್ ದಪ್ಪ ಅವಲಕ್ಕಿ, ಮೆಂತ್ಯ ಹಾಕಿ ನೀರು ಹಾಕಿಕೊಂಡು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಅನಂತರ ಎರಡೂವರೆ ಕಪ್ ಮಜ್ಜಿಗೆ ಹಾಕಿ ನೆನೆಸಿಡಬೇಕು.
ಸುಮಾರು 4ರಿಂದ 5 ಗಂಟೆಗಳ ಕಾಲ ನೆನೆಯಲು ಬಿಡಬೇಕು. ಈ ಸಮಯ ಕಳೆದ ಬಳಿಕ ಈ ಎಲ್ಲಾ ವಸ್ತುಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಹಿಟ್ಟನ್ನು ದೊಡ್ಡ ಪಾತ್ರೆಯೊಂದಕ್ಕೆ ಹಾಕಿಕೊಳ್ಳಿ, ಆದಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಮುಚ್ಚಳ ಮುಚ್ಚಿ ಒಂದು ರಾತ್ರಿ ಬಿಡಬೇಕು. ಇದರಿಂದ ಹಿಟ್ಟು ಹುದುಗು ಬರುತ್ತದೆ. ಮಾರನೆ ದಿನ ಇದರ ಮುಚ್ಚಳ ತೆಗೆದು ಹಿಟ್ಟು ಕಲಸಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಹಾಗೆ ಹಿಟ್ಟು ತುಂಬಾ ಗಟ್ಟಿಯಾಗಿದೆ ಎನಿಸಿದರೆ ಅಳತೆಗೆ ತಕ್ಕಂತೆ ನೀರು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಹಿಟ್ಟು ರೆಡಿಯಾದಂತೆ.
ಈಗ ಒಲೆ ಮೇಲೆ ದೋಸೆ ಕಾವಲಿ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಸಾಮಾನ್ಯವಾಗಿ ನಾವು ಯಾವಾಗಲು ಮಾಡುವಂತೆಯೇ ದೋಸೆ ಮಾಡಿಕೊಳ್ಳಿ. ಈ ದೋಸೆಯನ್ನು ಒಂದೇ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮೃದುವಾದ ಮಜ್ಜಿಗೆ ದೋಸೆ ರೆಡಿಯಾಗುತ್ತದೆ. ನೀವು ಇದನ್ನು ಬೆಳಗ್ಗೆ ಸವಿದರೆ ಮತ್ತೆ ಮತ್ತೆ ಸವಿಯಲು ಮುಂದಾಗುವುದು ಖಚಿತ.



Click it and Unblock the Notifications