Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಕ್ಕಿ, ಉದ್ದು, ಅವಲಕ್ಕಿ ಏನು ಬೇಡ..! 10 ನಿಮಿಷದಲ್ಲಿ ಹತ್ತಿಯಂತ ಇಡ್ಲಿ ರೆಡಿ..!
ದಕ್ಷಿಣ ಭಾರತೀಯರ ಅಚ್ಚು ಮೆಚ್ಚಿನ ಖಾದ್ಯಗಳಲ್ಲಿ ದೋಸೆ ಹೇಗೆ ಫೇಮಸ್ ಆಗಿದೆಯೋ ಅದೇ ರೀತಿ ಇಡ್ಲಿ ವಡೆ ಸಹ ತುಂಬಾನೆ ಫೇಮಸ್ ಆಗಿರುವ ತಿಂಡಿ. ಎಲ್ಲರ ಮನೆಯಲ್ಲೂ ಇಡ್ಲಿ ಕಾಮನ್ ಆಗಿ ಮಾಡುವ ಬೆಳಗಿನ ತಿಂಡಿಯಾಗಿದೆ. ಕೆಲವರಿಗೆ ಹೋಟೆಲ್ ರುಚಿಯಲ್ಲಿ ಇಡ್ಲಿ ಸವಿಯೋದು ಅಂದ್ರೆ ಪಂಚಪ್ರಾಣ.
ಆದ್ರೆ ಇಡ್ಲಿ ಹಿಟ್ಟು ಹೇಗೆ ಮಾಡಿಕೊಳ್ಳುತ್ತೇವೆ ಎಂಬ ಮೇಲೆ ಅದು ಎಷ್ಟು ಮೃದುವಾಗಿ ಬರುತ್ತದೆ ಎಂಬುದು ನಿರ್ಧಾರವಾಗುತ್ತದೆ. ಹತ್ತಿಯಂತೆ ಮೃದುವಾದ ಇಡ್ಲಿ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತೆ, ಆದ್ರೆ ಹಿಟ್ಟು ಮಾಡಿಕೊಳ್ಳುವುದು ಅವರಿಗೆ ತಿಳಿದಿರುವುದಿಲ್ಲ.

ಆದ್ರೆ ಈ ಮೃದುವಾದ ಇಡ್ಲಿ ಮಾಡಲು ಕೇವಲ 10 ನಿಮಿಷ ಸಮಯ ಸಾಕಾಗುತ್ತದೆ. ಹೌದು ಇಡ್ಲಿ ಮಾಡಲು ಹಿಂದಿನ ದಿನವೇ ಹಿಟ್ಟು ರೆಡಿ ಮಾಡಿಟ್ಟುಕೊಳ್ಳಬೇಕು ಎನ್ನುವ ನಿಯಮವೇನು ಇಲ್ಲ. ಕೇವಲ 10 ನಿಮಿಷದಲ್ಲಿಯೇ ಹಿಟ್ಟು ರೆಡಿ ಮಾಡಿಕೊಳ್ಳಬಹುದು. ಆದ್ರೆ ಈ ಹಿಟ್ಟನ್ನು ಅಕ್ಕಿ, ಉದ್ದು ಏನು ಹಾಕದೇಯೇ ನಿಮಿಷದಲ್ಲಿ ರೆಡಿ ಮಾಡಿಕೊಳ್ಳಬಹುದು.
ಹಾಗಾದ್ರೆ ನಿಮಿಷದಲ್ಲಿ ಈ ಹಿಟ್ಟು ರೆಡಿ ಮಾಡಿಕೊಂಡು ಹತ್ತಿಯಂತಹ ಇಡ್ಲಿ ಮಾಡುವುದು ಹೇಗೆ? ಹಿಟ್ಟು ರೆಡಿ ಮಾಡಿಕೊಳ್ಳುವ ವಿಧಾನವೇನು? ಯಾವೆಲ್ಲಾ ವಸ್ತುಗಳು ಬೇಕು? ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ದಿಢೀರ್ ಇಡ್ಲಿ ತಯಾರಿಸಲು ಬೇಕಾಗುವ ಪದಾರ್ಥಗಳು
- ಉಪ್ಪಿಟ್ಟು ರವೆ
- ಮೊಸರು
- ಸೋಡಾ
- ಎಣ್ಣೆ
- ಉಪ್ಪು
ದಿಢೀರ್ ಇಡ್ಲಿ ಮಾಡಲು ಹಿಟ್ಟು ಮಾಡಿಕೊಳ್ಳಬೇಕು
ಮೊದಲು ಉಪ್ಪಿಟ್ಟು ರವೆ ತೆಗೆದುಕೊಂಡು ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ 1 ನಿಮಿಷ ರವೆಯನ್ನು ಫ್ರೈ ಮಾಡಿಕೊಂಡರೆ ಸಾಕು ಈ ರವೆಯನ್ನು ಬಣ್ಣ ಬದಲಾಗುವಷ್ಟು ಹುರಿದುಕೊಳ್ಳಬೇಡಿ. ಬಳಿಕ ಇದನ್ನು ಒಂದು ಬೌಲ್‌ಗೆ ಹಾಕಿ ತಣ್ಣಗಾಗಲು ಬಿಡಿ. ಬಳಿಕ ತಣ್ಣಗಾದ ಬಳಿಕ ಮೊಸರು ಹಾಗೂ ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಗಂಟು ಗಂಟು ಆಗದಂತೆ ಮಿಕ್ಸ್ ಮಾಡಿಕೊಳ್ಳಿ. ಮಿಕ್ಸ್ ಮಾಡಿದ ಬಳಿಕ ಇದಕ್ಕೆ ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಬಳಿಕ ಹಿಟ್ಟನ್ನು ಬದಿಗಿಟ್ಟು ಮುಚ್ಚಿಡಿ. 10 ರಿಂದ 15 ನಿಮಿಷ ಬಿಟ್ಟು ಹಿಟ್ಟಿಗೆ ಅಡುಗೆ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಇಷ್ಟಾದರೆ ಹಿಟ್ಟು ರೆಡಿಯಾಗುತ್ತದೆ. ಬಳಿಕ ಇಡ್ಲಿ ಅಚ್ಚು ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ ಬಳಿಕ ಹಿಟ್ಟನ್ನು ಅದಕ್ಕೆ ಹಾಕಿಕೊಳ್ಳಿ. ಇದನ್ನು ಕುಕ್ಕರ್‌ನಲ್ಲಿ ಇಟ್ಟು ಬೇಯಲು ಬಿಡಿ. ಈ ಇಡ್ಲಿ ಬೇಯಲು ಸುಮಾರು 10ರಿಂದ 15 ನಿಮಿಷ ಸಾಕಾಗುತ್ತದೆ. ಇಷ್ಟಾದ ಬಳಿಕ ಇಡ್ಲಿ ತೆಗೆದು ಹೊರಗಿಟ್ಟು ಅದನ್ನು ಅಚ್ಚಿನಿಂದ ಬಿಡಿಸಿಕೊಳ್ಳಿ. ತಣ್ಣಗಾದ ಬಳಿಕ ಇಡ್ಲಿಯನ್ನು ಬಿಡಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಅತ್ಯಂತ ರುಚಿಕರ ಮೇದುವಾದ ಇಡ್ಲಿ ರೆಡಿಯಾಗುತ್ತದೆ. ಇದನ್ನು 10 ನಿಮಿಷದಲ್ಲಿ ಹಿಟ್ಟು ತಯಾರಿಸಿ ಸವಿಯಬಹುದು. ಈ ಇಡ್ಲಿಯನ್ನ ತಕ್ಷಣ ಹಿಟ್ಟು ರೆಡಿ ಮಾಡಿಕೊಂಡು ಮಾಡಬಹುದು, ಸಾಮಾನ್ಯವಾಗಿ ಇಡ್ಲಿ ಹಿಟ್ಟನ್ನು ಹಿಂದಿನ ದಿನವೇ ಅಕ್ಕಿ ರುಬ್ಬಿಕೊಂಡು ಉದ್ದು ಹಾಕಿ ಮಾಡಬೇಕಾದ ಅಗತ್ಯವಿರುವುದಿಲ್ಲ. ರವೆ ಮೂಲಕ ಹತ್ತಿಯಂತೆ ಈ ಇಡ್ಲಿ ಮಾಡಬಹುದು.
ಈ ಇಡ್ಲಿ ಜೊತೆಗೆ ಕಾಯಿ ಚಟ್ನಿ ಇದ್ದರೆ ಇದರ ರುಚಿ ದುಪ್ಪಟ್ಟಾಗುತ್ತದೆ. ನೀವು ಸಹ ಒಮ್ಮೆ ಈ ಇಡ್ಲಿ ಮಾಡಿ ನೋಡಿ. ಮಲ್ಲಿಗೆ ಹೂವಿನಂತೆ ಇಡ್ಲಿ ರಡಿಯಾಗುತ್ತದೆ.



Click it and Unblock the Notifications