Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ ಬೇಯಿಸಿದಾಗ ಗಟ್ಟಿಯಾಗದಂತೆ ಮಾಡಿ! ಈ ಟ್ರಿಕ್ಸ್ ಬಳಸಿ!
ಬೆಳಗ್ಗೆ ತಿಂಡಿ ಸಮಯಕ್ಕೆ ನೀವು ಇಡ್ಲಿ ಮಾಡಿ ಸವಿಯೋದು ಕಾಮನ್. ಅದ್ರಲ್ಲೂ ಇಡ್ಲಿ ಆರೋಗ್ಯಕರ ತಿಂಡಿಗಳಲ್ಲಿ ಪ್ರಮುಖ ಬ್ರೇಕ್‌ಫಾಸ್ಟ್. ಇಡ್ಲಿಯನ್ನು ಕಡಿಮೆ ಎಣ್ಣೆ ಬಳಸಿ ಮಾಡುವ ಕಾರಣ ಎಲ್ಲರು ಇದನ್ನು ಮಾಡಿ ಸವಿಯಲು ಮುಂದಾಗೋದು ನೋಡಬಹುದು. ಹಾಗೆ ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ಸಮಯ ಹಿಡಿಯುವ ಕಾರಣದಿಂದಾಗಿ ಎಲ್ಲರೂ ಮಾಡಿ ಸವಿಯೋಕೆ ಮುಂದಾಗುತ್ತಾರೆ.
ಆದ್ರೆ ಇಡ್ಲಿ ಮಾಡೋಕೆ ಹಿಂದಿನ ದಿನದ ತಯಾರಿ ಮುಖ್ಯವಾಗುತ್ತೆ. ಕೆಲವೊಮ್ಮೆ ನೀವು ಮನೆಯಲ್ಲಿ ಮಾಡಿದ ಇಡ್ಲಿ ಬಹಳ ಗಟ್ಟಿಯಾಗುವುದು ನೋಡಬಹುದು. ಹಾಗೆ ಬಹಳ ಜಾಗರೂಕತೆಯಿಂದ ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಹಾಗೆ ಇದನ್ನು ಮಾಡಿಕೊಳ್ಳುವ ವಿಧಾನದಲ್ಲಿ ನಿಮ್ಮ ತಯಾರಿ ಸರಿಯಾಗಿದ್ದರೆ ಮಾತ್ರವೇ ಸುಲಭವಾಗಿ ಹಾಗೆ ಮೃದುವಾದ ಇಡ್ಲಿ ಮಾಡಬಹುದು.

ಆದ್ರೆ ನೀವು ಎಷ್ಟೇ ಜಾಗೃತೆಯಿಂದ ಇಡ್ಲಿ ಹಿಟ್ಟು ಮಾಡಿದ್ರೂ ಕೂಡ ಮಾರನೆ ದಿನ ಇಡ್ಲಿ ಗಟ್ಟಿಯಾಗಿರುವುದು ಅನುಭವಿಸಿರಬಹುದು. ಮೃದುವಾಗಿ ಇಡ್ಲಿ ಮಾಡಲು ನೀವು ಸೋಡಾ ಪುಡಿ ಬಳಸಿದ್ದರೂ ಕೂಡ ಬೇಯಿಸಿದ ಬಳಿಕ ಗಟ್ಟಿಯಾಗುವುದು ನಿಮಗೂ ಸಮಸ್ಯೆ ತಂದಿರಬಹುದು.
ಹಾಗಾದ್ರೆ ಇಡ್ಲಿ ಮಾಡುವಾಗ ಅದರ ಹಿಟ್ಟನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ನೀವು ಈ ರೀತಿಯಾಗಿ ಟ್ರಿಕ್ಸ್ ಬಳಸಿದ್ರೆ ಸುಲಭವಾಗಿ ಮೃದುವಾದ ಇಡ್ಲಿ ಮಾಡಬಹುದು. ಹಾಗಾದ್ರೆ ಇಡ್ಲಿ ಗಟ್ಟಿಯಾಗಬಾರದು ಎಂದರೆ ಏನು ಮಾಡಬೇಕು? ಇದಕ್ಕೆ ಯಾವ ಟ್ರಿಕ್ಸ್ ಬಳಸಬೇಕು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಇಡ್ಲಿ ಗಟ್ಟಿಯಾಗದಂತೆ ಹಿಟ್ಟು ರೆಡಿ ಮಾಡಿಕೊಳ್ಳುವುದು ಹೇಗೆ? ಈ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ? ಎಷ್ಟು ಸಮಯ ಹಿಡಿಯಲಿದೆ ಎಂಬ ಮಾಹಿತಿ ಇಲ್ಲಿದೆ.
ಮೃದು ಇಡ್ಲಿ ಮಾಡಲು ಬೇಕಾಗುವ ವಸ್ತುಗಳು
- ಇಡ್ಲಿ ರವೆ
- ಉದ್ದಿನ ಬೇಳೆ
- ಅವಲಕ್ಕಿ
- ಮೆಂತ್ಯ
- ಉಪ್ಪು
- ಎಣ್ಣೆ
ಮೃದು ಇಡ್ಲಿ ಮಾಡುವ ವಿಧಾನವೇನು?
ಮೊದಲು ಅರ್ಧ ಕಪ್ ಉದ್ದಿನ ಬೇಳೆ ಒಂದು ಬೌಲ್‌ಗೆ ಹಾಕಿಕೊಳ್ಳಿ. ಹಾಗೆ ಅದಕ್ಕೆ ಕಾಲು ಕಪ್ ಅವಲಕ್ಕಿ, ಸ್ಪೂನ್ ಮೆಂತ್ಯ ಹಾಕಿ ನೀರು ಹಾಕಿ 2 ರಿಂದ ಮೂರು ಬಾರಿ ತೊಳೆದುಕೊಳ್ಳಬೇಕು. ನಂತರ ನೀರು ಹಾಕಿ ನೆನೆಯಲು ಬಿಡಬೇಕು.
ಈಗ ಒಂದೂವರೆ ಕಪ್ ಇಡ್ಲಿ ರವೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಹಾಕಿ ತೊಳೆದುಕೊಳ್ಳಿ. ಅನಂತರ ಈ ರವೆಯಿಂದ ನೀರನ್ನು ಚೆನ್ನಾಗಿ ಹಿಂಡಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ಮಿಕ್ಸಿ ಜಾರ್‌ಗೆ ಈ ಉದ್ದಿನ ಬೇಳೆ, ಅವಲಕ್ಕಿ ಎಲ್ಲ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಈಗ ಈ ರುಬ್ಬಿದ ವಸ್ತುಗಳನ್ನು ರವೆಯೊಂದಿಗೆ ಹಾಕಿ ಮಿಕ್ಸ್ ಮಾಡಬೇಕು. ಈ ಹಿಟ್ಟು ದಪ್ಪವಾಗಿ ಬರಬೇಕು. ಕೈಯಿಂದ 2 ರಿಂದ 3 ನಿಮಿಷ ಮಿಕ್ಸ್ ಮಾಡಬೇಕು.
ನಂತರ ಈ ಹಿಟ್ಟಿಗೆ ಮುಚ್ಚಳ ಮುಚ್ಚಿ ಒಂದು ರಾತ್ರಿ ಹಾಗೆಯೇ ಬಿಡಬೇಕು. ಮಾರನೆ ದಿನ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಬೇಕು. ಈಗ ಇಡ್ಲಿ ತಟ್ಟೆಗಳಿಗೆ ಎಣ್ಣೆ ಹಚ್ಚಿಕೊಂಡು ಕುಕ್ಕರ್‌ನಲ್ಲಿ ಇಟ್ಟು ಅದಕ್ಕೆ ಹಿಟ್ಟು ಹಾಕಿಕೊಳ್ಳಬೇಕು. ಹಾಗೆ ಬೇಯಿಸಿಕೊಳ್ಳಬೇಕು. ಈ ಇಡ್ಲಿಯನ್ನು ಸುಮಾರು 12 ನಿಮಿಷ ಬೇಯಿಸಿದರೆ ಸಾಕು. ಅದಕ್ಕಿಂತ ಹೆಚ್ಚು ಎಂದಿಗೂ ಇಡ್ಲಿಯನ್ನು ಬೇಯಿಸಬಾರದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಹಾಗೆ ಮೃದುವಾದ ಇಡ್ಲಿ ಸಿದ್ದವಾಗುತ್ತೆ. ಅಕ್ಕಿ ಬಳಸದೆಯೇ ಈ ರೀತಿ ಮಾಡಿಕೊಳ್ಳಬಹುದು. ಅಕ್ಕಿ ಬಳಸುವುದಾದರೆ ರವೆ ಬಳಸಬೇಡಿ.



Click it and Unblock the Notifications