ಹೂವಿನ ರೀತಿ ಮೃದುವಾದ ಇಡ್ಲಿ ಮಾಡೋದು ಹೇಗೆ..? ಸಿಂಪಲ್ ರೆಸಿಪಿ ಇಲ್ಲಿದೆ..!

Posted By:

ನಮ್ಮ ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲೊಂದು ಇಡ್ಲಿ. ಇದನ್ನು ನಾನಾ ರುಚಿಯಲ್ಲಿ ತಯರಿಸುತ್ತೇವೆ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮೈಸೂರು ಇಡ್ಲಿ, ಮಸಾಲೆ ಇಡ್ಲಿ ಹೀಗೆ ನಾನಾ ತರದ ಇಡ್ಲಿ ಮಾಡುತ್ತೇವೆ. ನಾವು ಯಾವುದೇ ಇಡ್ಲಿ ಮಾಡಲಿ ಅದು ಮೃದುವಾಗಿದ್ದರೆ ಮಾತ್ರ ತಿನ್ನಲು ಇಷ್ಟವಾಗುವುದು. ಕೆಲವರು ಮಾಡಿದ ಇಡ್ಲಿ ಗಟ್ಟಿಯಾಗಿದ್ದರೆ, ಇನ್ನೂ ಕೆಲವರು ಮಾಡುವ ಇಡ್ಲಿ ಹೂವಿನಂತೆ ಮೃದುವಾಗುತ್ತೆ.

ಇಡ್ಲಿ ಚೆನ್ನಾಗಿ ಉಬ್ಬಿ ಬರಲಿ ಕೆಲವರು ಅಡುಗೆ ಸೋಡಾ ಬಳಸುತ್ತಾರೆ, ಆದರೆ ಸೋಡಾ ಹಾಕಿದ ಇಡ್ಲಿ ತಿಂದರೆ ಕೆಲವರಿಗೆ ಆಗಿ ಬರಲ್ಲ, ಹೊಟ್ಟೆ ಉಬ್ಬವ ಸಮಸ್ಯೆ ಕಂಡು ಬರುತ್ತದೆ. ನಾವಿಲ್ಲಿ ಇಡ್ಲಿ ಮಲ್ಲಿಗೆಯಂತೆ ಮೃದುವಾಗಿ ಬರಲು ಏನು ಮಾಡಬೇಕು? ಮೃದುವಾದ ಇಡ್ಲಿ ಮಾಡೋದು ಹೇಗೆ ಎಂಬುದನ್ನು ನಾವಿಂದು ನೋಡೋಣ.

Idli Recipe In Kannada

ಮೃದುವಾದ ಇಡ್ಲಿ ಮಾಡಲು ಬೇಕಾಗುವ ವಸ್ತುಗಳು

ಇಡ್ಲಿ ರವೆ- 3 ಕಪ್
ಉದ್ದಿನ ಬೇಳೆ
ಮೆಂತ್ಯೆ
ತೆಳು ಅವಲಕ್ಕಿ
ಎಣ್ಣೆ
ಅಡಿಗೆ ಸೋಡಾ

ಮೃದುವಾದ ಇಡ್ಲಿ ಮಾಡುವ ವಿಧಾನ

ಇಡ್ಲಿ ಹಿಟ್ಟು ಮಾಡುವ ಮುನ್ನ ಉದ್ದಿನ ಬೇಳೆ ಹಾಗೂ ಮೆಂತೆಯನ್ನು ನೀರಿನಲ್ಲಿ ನೆನೆಸಬೇಕು. ಸುಮಾರು 4 ಗಂಟೆ ನೆನೆಸಿದರೆ ಸಾಕು. ಬಳಿಕ ಇದಕ್ಕೆ ಇಡ್ಲಿ ರವೆಯನ್ನು ಹಾಕಿ ಚೆನ್ನಾಗಿ ತೊಳೆದು ಅರ್ಧ ಗಂಟೆ ಹಾಗೆಯೆ ಬಿಡಿ. ಅವಲಕ್ಕಿಯೂ ಸಹ ನೆನೆಯಬೇಕು ಹೀಗಾಗಿ ಇದೇ ನೀರಿಗೆ ಅವಲಕ್ಕಿ ಹಾಕಿ.

ಬಳಿಕ ಮಿಕ್ಸಿ ಜಾರ್‌ಗೆ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಹಿಟ್ಟಿಗೆ ರವೆ ಹಾಕಿಕೊಳ್ಳಿ, ಬಳಿಕ ಉಪ್ಪು, ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ರಾತ್ರಿ ಹಾಗೆಯೇ ಬಿಡಿ. ಬಳಿಕ ಮಾರನೆ ದಿನ ಈ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಇಡ್ಲಿ ಪಾತ್ರೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿ. ಎಣ್ಣೆ ಹಚ್ಚಿದ ಬಳಿಕ ಪಾತ್ರೆಗೆ ಇಡ್ಲಿ ಹಿಟ್ಟನ್ನು ಹಾಕಿ. ಸುಮಾರು 10 ರಿಂದ 12 ನಿಮಿಷಗಳ ಕಾಲ ಮಾತ್ರ ಈ ಇಡ್ಲಿಯನ್ನು ಹಬೆಯಲ್ಲಿ ಬೇಯಿಸಿ. ಇದಕ್ಕಿಂತ ಹೆಚ್ಚು ಹೊತ್ತು ಬೇಯಿಸಿದಾಗ ಇಡ್ಲಿ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೇಗ ತೆಗೆಯಿರಿ. ಈಗ ನಿಮ್ಮ ಮುಂದೆ ಮೃದುವಾದ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

ಈ ಇಡ್ಲಿಗೆ ಸುಟ್ಟ ಈರುಳ್ಳಿ ಚಟ್ನಿ ಬಹಳ ರುಚಿಕರವಾಗಿರುತ್ತದೆ. ಹಾಗಾದರೆ ಈ ಸುಟ್ಟ ಈರುಳ್ಳಿ ಚಟ್ನಿ ಮಾಡೋದು ಹೇಗೆ?

ಬೇಕಾಗುವ ಪದಾರ್ಥಗಳು :

ಹುರಿಯಲು

10 ಸಣ್ಣ ಈರುಳ್ಳಿ
1 ಸಣ್ಣ ಬೆಳ್ಳುಳ್ಳಿ
2 ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ಉದ್ದಿನ ಬೇಳೆ
1 ಚಮಚ ಕಡೆಲೆ ಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ
4 ಒಣಗಮೆಣಸಿನಕಾಯಿ
ಕರಿಬೇವಿನ ಎಲೆಗಳು
ಸಣ್ಣ ತುಂಡು ಹುಣಸೆಹಣ್ಣು
½ ಟೀಸ್ಪೂನ್ ಉಪ್ಪು
¾ ಕಪ್ ನೀರು
1 ಟೀಸ್ಪೂನ್ ಸಾಸಿವೆ ಪಿಂಚ್ ಹಿಂಗ್
¼ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಮೆಣಸಿನ ಪುಡಿ

ವಿಧಾನ

ಗ್ಯಾಸ್ ಮೇಲೆ ಒಂದು ಜಾಲರಿ ಇಟ್ಟು, ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಚೆನ್ನಾಗಿ ಸುಟ್ಟುಕೊಳ್ಳಿ. ಈರುಳ್ಳಿ ಒಳಗಿನಿಂದ ಮೃದುವಾಗುವವರೆಗೆ ಚೆನ್ನಾಗಿ ಸುಡಿ. ಸುಟ್ಟ ಈರುಳ್ಳಿ ಬೆಳ್ಳುಳ್ಳಿ ತಣ್ಣಗಾದ ನಂತರ ಸಿಪ್ಪೆತೆಗೆದು, ಮಿಕ್ಸಿ ಜಾರಿಗೆ ಹಾಕಿ, ಬದಿಯಲ್ಲಿಡಿ.

ಬಾಣಲೆಗೆ 2 ಟೀಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡೆಲೆ ಬೇಳೆ, ಕೊತ್ತಂಬರಿ ಬೀಜ ಜೊತೆಗೆ, 4 ಒಮೆಣಸಿನಕಾಯಿ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಹುರಿದು, ತಣ್ಣಗಾಗಿಸಿ ಅದೇ ಮಿಕ್ಸಿ ಜಾರಿಗೆ ಸೇರಿಸಿ, ಒಂದು ಸುತ್ತು ರುಬ್ಬಿಕೊಳ್ಳಿ.

ಹೆಚ್ಚುವರಿಯಾಗಿ, ಒಂದು ಸಣ್ಣ ತುಂಡು ಹುಣಸೆಹಣ್ಣು, ½ ಟೀಸ್ಪೂನ್ ಉಪ್ಪು ಮತ್ತು ¾ ಕಪ್ ನೀರು ಸೇರಿಸಿ. ಅಗತ್ಯವಿದ್ದರೆ ನೀರನ್ನು ಸೇರಿಸಿ ನಯವಾದ ಪೇಸ್ಟ್‌ ಆಗಿ ರುಬ್ಬಿಕೊಳ್ಳಿ. ಈಗ ಒಗ್ಗರಣೆ ತಯಾರಿಸಲು, 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ 1 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಉದ್ದಿನ ಬೇಳೆ, 1 ಒಣಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಗಳು ಮತ್ತು ಚಿಟಿಕೆ ಹಿಂಗನ್ನು ಹಾಕಿ, ಜೊತೆಗೆ, ¼ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಸೇರಿಸಿ ಒಂದು ನಿಮಿಷ ಬೇಯಿಸಿ.

ಇದಕ್ಕೆ ತಯಾರಾದ ಈರುಳ್ಳಿ-ಬೆಳ್ಳುಳ್ಳಿ ಪೇಸ್ಟ್ ಸುರಿಯಿರಿ ಮತ್ತು ಎಣ್ಣೆ ಬೇರ್ಪಡುವವರೆಗೆ ಬೇಯಿಸಿ. ಮುಂದೆ, ½ ಕಪ್ ನೀರು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ತಯಾರಿಸಿ, ಚಟ್ನಿಯಿಂದ ಎಣ್ಣೆ ಬೇರ್ಪಡುವವರೆಗೆ ಬೇಯಿಸಿದ್ರೆ, ಸುಟ್ಟ ಈರುಳ್ಳಿ-ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ಧ.

[ of 5 - Users]
X
Desktop Bottom Promotion