Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಯಂತೆ ಮೃದುವಾದ ದುಂಡನೆಯ ಜಾಮೂನ್ ಮಾಡೋದು ಹೇಗೆ? ಇಲ್ಲಿದೆ ವಿಧಾನ..!
ಮನೆಯಲ್ಲಿ ಯಾವುದಾದ್ರು ವಿಶೇಷ ದಿನವಾಗಿದ್ದರೆ ಇಲ್ಲವೆ ದಿಢೀರ್ ಆಗಿ ಯಾರಾದರು ಅತಿಥಿಗಳು ಬಂದರೆ ತಕ್ಷಣಕ್ಕೆ ಯಾವುದಾದರು ತಿಂಡಿ ಮಾಡಬೇಕಾಗುತ್ತೆ. ಸಿಹಿ ಇಲ್ಲದಿದ್ದರೆ ಹಬ್ಬ ಮುಗಿಯೋದಿಲ್ಲ. ಹಾಗೆ ಅತಿಥಿಗಳಿಗೂ ಮನೆಯಲ್ಲೇ ಮಾಡಿದ ಸಿಹಿ ನೀಡಿದರೆ ಅವರೂ ಕೂಡ ಖುಷಿ ಪಡುತ್ತಾರೆ. ಆದ್ರೆ ಈ ಸಮಯದಲ್ಲಿ ತಕ್ಷಣಕ್ಕೆ ಹೊಳೆಯುವುದು ಗುಲಾಬ್ ಜಾಮೂನ್. ಈ ಸಿಹಿ ಕೂಡ ಮಾಡುವುದು ಬಹಳ ಸುಲಭ.
ಆದ್ರೆ ಗುಲಾಬ್ ಜಾಮೂನ್ ಮಾಡುವಾಗ ರುಚಿ ಕೆಡುವುದು, ನೀವು ಅಂದುಕೊಂತೆ ಬರುವುದಿಲ್ಲ, ಹಾಗೆ ಗಟ್ಟಿಯಾಗುವುದು, ಕರಿದು ಹೆಚ್ಚಾಗಿ ಸಿಹಿಯಲ್ಲಿ ಏರುಪೇರಾಗುವುದು ನೋಡಬಹುದು. ಹಲವರಿಗೆ ಇದರ ಹಿಟ್ಟು ಹಾಗೂ ಪಾಕ ಹದ ಮಾಡಲು ಕೂಡ ಬರುವುದಿಲ್ಲ. ಹೀಗಾಗಿ ನಾವಿಂದು ಮನೆಯಲ್ಲಿ ಅತ್ಯಂತ ಸುಲಭವಾಗಿ ಕಡಿಮೆ ಸಮಯಲ್ಲಿ ಜಾಮೂನ್ ಮಾಡುವ ಕುರಿತಂತೆ ತಿಳಿಯೋಣ.

ಅದರಲ್ಲೂ ಈ ಜಾಮೂನ್ ಮಾಡುವಾಗ ಸಾಮಾನ್ಯವಾಗಿ ಎಲ್ಲರಿಗೂ ಮೃದುವಾಗಿ ಬರುವುದಿಲ್ಲ, ಇಲ್ಲವೆ ದುಂಡಗೆ ಬರುವುದಿಲ್ಲ ಎಂಬ ದೂರಿದೆ. ಹಾಗೆ ಬಹಳ ಸಮುಯ ತೆಗೆದುಕೊಳ್ಳುತ್ತಾರೆ. ಆದರೆ ನಾವಿಂದು ಬಹಳ ಸುಲಭವಾಗಿ ಅತ್ಯಂತ ರುಚಿಕರವಾಗಿ, ಸುಲಭದ ವಿಧಾನದಲ್ಲಿ ಇನ್‌ಸ್ಟಂಟ್ ಜಾಮೂನ್ ಮಾಡುವ ಕುರಿತು ತಿಳಿದುಕೊಳ್ಳೋಣ.
ಮನೆಯಲ್ಲಿ ಇನ್‌ಸ್ಟಂಟ್ ಆಗಿ ಮೃದುವಾದ ಜಾಮೂನ್ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಈ ಜಾಮೂನ್ ಮಾಡುವ ಸುಲಭದ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗುಲಾಬ್ ಜಾಮೂನ್ ಮಾಡಲು ಬೇಕಾಗುವ ಪದಾರ್ಥಗಳು
- ಇನ್‌ಸ್ಟಂಟ್ ಗುಲಾಬ್ ಜಾಮೂನ್ ಮಿಕ್ಸ್- 1 ಪ್ಯಾಕೆಟ್
- ಸಕ್ಕರೆ - 2 ಕಪ್
- ಏಲಕ್ಕಿ
- ನಿಂಬೆ ರಸ
- ಹಾಲು
ಗುಲಾಬ್ ಜಾಮೂನ್ ಮಾಡುವ ವಿಧಾನ
ಮೊದಲು ಒಂದು ಬಾಣಲೆ ತೆಗೆದುಕೊಂಡು 2 ಕಪ್ ಸಕ್ಕರೆ ಹಾಕಿ ಅದೇ ಅಳತೆಯಲ್ಲಿ ನೀರು ಹಾಕಿಕೊಂಡು ಕುದಿಬರಲು ಬಿಡಿ. ಇದಕ್ಕೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಹಾಕಿ ಮಿಕ್ಸ್ ಮಾಡಿ ಕರಗಲು ಬಿಡಿ. ಸಣ್ಣ ಉರಿಯಲ್ಲಿ ಪಾಕ ರೆಡಿ ಮಾಡಿಕೊಳ್ಳಿ. ಕೊನೆಯಲ್ಲಿ ಇದಕ್ಕೆ ಅರ್ಧ ಚಮಚ ನಿಂಬೆ ರಸವನ್ನು ಸೇರಿಸಿ ಒಮ್ಮೆ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಂಡು ಅದಕ್ಕೆ ಮುಚ್ಚಳ ಮುಚ್ಚಿ ಇಡಿ.
ಈಗ ಒಲೆ ಮೇಲೆ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗಲು 5 ನಿಮಿಷ ಬಿಡಿ. ಈ ನಡುವೆ ಒಂದು ಬೌಲ್ ತೆಗೆದುಕೊಂಡು ಇದಕ್ಕೆ ಗುಲಾಬ್ ಜಾಮೂನ್ ಪೌಡರ್ ಹಾಕಿ ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಕಲಸಿಕೊಳ್ಳಬೇಕು. ಸ್ವಲ್ಪ ಸ್ವಲ್ಪ ಹಾಲು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದ ಬರುವವರೆಗೂ ಹದ ಮಾಡಿ.
ಹಿಟ್ಟನ್ನು ಈಗ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಬೇಕು. ಉಂಡೆ ಕಟ್ಟುವಾಹ ಗಟ್ಟಿಯಾಗಿ ಒತ್ತಿ ಬಿರುಕು ಇಲ್ಲದಂತೆ ಉಂಡೆ ಕಟ್ಟಿ, ಈಗ ಎಲ್ಲಾ ಉಂಡೆಗಳನ್ನು ಕಾಯಲು ಇಟ್ಟಿದ್ದ ಎಣ್ಣೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ಇದು ಬ್ರೌನ್ ಕಲರ್ ಆದಾಗ ಹೊರತೆಗೆದು ಬಿಸಿ ಇರುವಾಗಲೇ ಸಕ್ಕರೆ ಹಾಕದೊಳಗೆ ಹಾಕಿ ತಟ್ಟೆ ಮುಚ್ಚಿಡಿ. ನಂತರ ಒಮ್ಮೆ ಮುಚ್ಚಳ ತೆಗೆದು ಒಮ್ಮೆ ಎಲ್ಲಾ ಕಡೆ ಪಾಕ ಹಿಡಿಯುವಂತೆ ಮಿಕ್ಸ್ ಮಾಡಿ. ನಂತರ 10 ನಿಮಿಷ ಹಾಗೆಯೇ ಬಿಡಿ. ಅನಂತರ ಇದನ್ನು ಸವಿಯಲು ನೀಡಬಹುದು.
ನೀವು ಕೂಡ ಈ ವಿಧಾನ ಬಳಸಿ ಅತ್ಯಂತ ಮೃದುವಾದ, ದುಂಡನೆಯ ಜಾಮೂನ್ ಮಾಡಬಹುದು, ಸರಿಯಾದ ಅಳತೆಯಲ್ಲಿ ಎಲ್ಲಾ ವಸ್ತುಗಳ ತೆಗೆದುಕೊಂಡರೆ ಜಾಮೂನ್ ಅದ್ಭುತವಾಗಿ ಮೂಡಿಬರಲಿದೆ.



Click it and Unblock the Notifications