Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೆತ್ತನೆಯ ಸ್ಪೆಷಲ್ ಬಿಡದಿ ತಟ್ಟೆ ಇಡ್ಲಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಎಷ್ಟೊಂದು ವಿಧವಾದ ಖಾದ್ಯ ಮಾಡಿ ಸವಿದಿರುಯತ್ತೀರಿ. ಅದರಲ್ಲೂ ಬೆಳಗ್ಗೆ ಹೋಟೆಲ್‌ನಲ್ಲಿ ಸಿಗುವಂತಹ ರೀತಿಯಲ್ಲೇ ಇಡ್ಲಿ ಮಾಡಿ ಸವಿಯುವುದು ಮನೆಯಲ್ಲಿ ಕಾಮನ್ ವಿಚಾರ. ಆದ್ರೆ ನಾವಿಂದು ಬ್ರೇಕ್‌ಫಾಸ್ಟ್‌ಗೆ ಬಗೆ ಬಗೆಯ ಇಡ್ಲಿ ಮಾಡಿಯೇ ಮಾಡಿರುತ್ತೀರಿ. ರವೆ ಇಡ್ಲಿ, ಮಸಾಲೆ ಇಡ್ಲಿ, ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ ಹೀಗೆ ಒಂದಲ್ಲಾ ಒಂದು ಬಗೆಯ ಇಡ್ಲಿ ಮಾಡುತ್ತೇವೆ.
ಆದ್ರೆ ನಾವಿಂದು ಕರ್ನಾಟದಾದ್ಯಂತ ಫೇಮಸ್ ಆಗಿರುವಂತಹ ವಿಶಿಷ್ಟ ರುಚಿಯ ಬಿಡದಿ ತಟ್ಟೆ ಇಡ್ಲಿ ಮಾಡುವ ಕುರಿತಂತೆ ಇಂದು ತಿಳಿದುಕೊಳ್ಳೋಣ. ನೀವು ಬಿಡದಿ ಹೈವೆ ಪಕ್ಕದಲ್ಲಿರುವ ಎಲ್ಲಾ ಹೋಟೆಲ್‌ಗಳು, ಡಾಬಾಗಳು, ಕ್ಯಾಂಟೀನ್‌ಗಳಲ್ಲಿ ಈ ವಿಶೇಷವಾದ ಇಡ್ಲಿ ಇದ್ದೇ ಇರುತ್ತೆ. ಹಾಗೆ ಬೆಂಗಳೂರು ಸುತ್ತಮುತ್ತ ಈ ಬಿಡದಿ ಇಡ್ಲಿ ತುಂಬಾನೆ ಫೇಮಸ್.

ನಾವಿಂದು ಈ ಬಿಡದಿ ತಟ್ಟೆ ಇಡ್ಲಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ಈ ಇಡ್ಲಿಯನ್ನು ಯಾವ ರೀತಿ ಮಾಡಿದರೆ ರುಚಿ ಹೆಚ್ಚಾಗಿರಲಿದೆ? ಎಂಬುದನ್ನು ನೋಡೋಣ. ಬಿಡದಿ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ತಟ್ಟೆ ಇಡ್ಲಿ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಿಡದಿ ತಟ್ಟೆ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ - 2 ಗ್ಲಾಸ್
- ಅವಲಕ್ಕಿ - ಅರ್ಧ ಗ್ಲಾಸ್
- ಉದ್ದಿನ ಬೇಳೆ
- ಸಾಬುದಾನಿ - 1 ಗ್ಲಾಸ್
- ಎಣ್ಣೆ
- ಬೇಕಿಂಗ್ ಸೋಡಾ
- ಉಪ್ಪು
ಬಿಡದಿ ತಟ್ಟೆ ಇಡ್ಲಿ ಮಾಡುವ ಸರಿಯಾದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 2 ಗ್ಲಾಸ್ ಅಕ್ಕಿ ಹಾಕಿಕೊಂಡು ಒಂದು ಗ್ಲಾಸ್ ಸಾಬುದಾನಿ ಹಾಕಿ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. 3 ಬಾರಿ ತೊಳೆದು ಬಳಿಕ ಈ ಎರಡು ವಸ್ತು ಮುಳುಗುವಷ್ಟು ನೀರು ಹಾಕಿ ನೆನೆಯಲಯ ಬಿಡಿ. ಇನ್ನೊಂದು ಬೌಲ್‌ನಲ್ಲಿ ಅರ್ಧ ಗ್ಲಾಸ್ ಉದ್ದಿನ ಬೇಳೆ ಹಾಕಿ ತೊಳೆದುಕೊಂಡು ನೆನೆಸಿಟ್ಟುಕೊಳ್ಳಿ. ಈ ಎರಡು ವಸ್ತುಗಳನ್ನು ಕೂಡ 5ರಿಂದ 6 ಗಂಟೆ ನೀರಿನಲ್ಲಿ ನೆನೆಯಲು ಬಿಡಬೇಕು.
ಈಗ ಅಕ್ಕಿ ಹಾಗೂ ಉದ್ದು ನೆನೆಸಿಟ್ಟಿರುವುದನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಹಾಗೆ ಇನ್ನೊಂದು ಕಡೆ ಅರ್ಧ ಗ್ಲಾಸ್ ಅವಲಕ್ಕಿ ನೆನೆಸಿಟ್ಟುಕೊಳ್ಳಿ. ಸ್ವಲ್ಪ ನೀರು ಹಾಕಿಕೊಳ್ಳುತ್ತಾ ರುಬ್ಬಿಕೊಳ್ಳಿ. ಈಗ ಅವಲಕ್ಕಿಯನ್ನು ಕೂಡ ಹಾಕಿ ಮಿಕ್ಸ್ ಮಾಡಿಕೊಂಡು ಒಂದೇ ಪಾತ್ರೆಗೆ ಹಾಕಿಕೊಳ್ಳಿ. ಆದ್ರೆ ಎಲ್ಲ ವಸ್ತುವನ್ನು ಬೇರೆ ಬೇರೆಯಾಗಿ ರುಬ್ಬಿಕೊಳ್ಳಬೇಕು.
ಎಲ್ಲಾ ರುಬ್ಬಿದ ವಸ್ತು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ 3 ನಿಮಿಷ ಮಿಕ್ಸ್ ಮಾಡಿ. ಈ ವೇಳೆ ಬೇಕಿಂಗ್ ಸೋಡಾ ಹಾಕಿಕೊಂಡು ಮಿಶ್ರಣ ಮಾಡಿ. ಅನಂತರ ತಟ್ಟೆ ಮುಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಅದಕ್ಕೆ ಉಪ್ಪು ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿ. ಈಗ ಇಡ್ಲಿ ಕುಕ್ಕರ್ ಒಲೆ ಮೇಲೆ ಇಟ್ಟು ಬಿಸಿಯಾಗಲು ಬಿಡಿ. ಇದು ತಟ್ಟೆ ಇಡ್ಲಿ ಆಗಿರೋದ್ರಿಂದ ತಟ್ಟೆಗಳಿಗೆ ಎಣ್ಣೆ ಅವರಿಕೊಂಡು ಹಿಟ್ಟನ್ನು ಅದಕ್ಕೆ ಹಾಕಿಕೊಳ್ಳಿ. ನಂತರ ಇಡ್ಲಿ ಕುಕ್ಕರ್‌ನಲ್ಲಿ ಇಟ್ಟು ಬೇಯಲು ಬಿಡಿ.
ಸುಮಾರು 15 ನಿಮಿಷ ಮಧ್ಯಮ ಉರಿಯಲ್ಲಿ ಬೆಂದರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಬಿಡದಿ ತಟ್ಟೆ ಇಡ್ಲಿ ರೆಡಿಯಾಗುತ್ತದೆ. ನೀವೊಮ್ಮೆ ಮನೆಯಲ್ಲಿ ಈ ತಿಂಡಿ ಮಾಡಿದ್ರೆ ಮತ್ತೆ ಮತ್ತೆ ಮಾಡೋದಂತು ಖಚಿತ



Click it and Unblock the Notifications