Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ!
ಚೈತ್ರ ಮಾಸದ ಆರಂಭದಿಂದಲ್ಲಿ ಮಾವು ಚಿಗುರಲು ಆರಂಭವಾಗುತ್ತದೆ. ಅದ್ರಲ್ಲೂ ಮಾವಿನಕಾಯಿಗಳು ಮಾರುಕಟ್ಟೆಯಲ್ಲಿ ಕಣ್ಣಿಗೆ ಬೀಳುತ್ತವೆ. ಅದ್ರಲ್ಲೂ ಈ ಮಾವಿನಕಾಯಿಗಳನ್ನು ಉಪ್ಪಿನಕಾಯಿ ಹಾಕಿ ವರ್ಷವಿಡೀ ಸವಿಯಲು ಇದು ಸೂಕ್ತ ಸಮಯ ಆಗಿರಲಿದೆ. ಸಾಮಾನ್ಯವಾಗಿ ಊಟದೊಂದಿಗೆ ಉಪ್ಪಿನಕಾಯಿ ಇದ್ದರೆ ಬೇರೆ ಯಾವುದೇ ಖಾದ್ಯಗಳ ಅಗತ್ಯವಿರುವುದಿಲ್ಲ. ಹಾಗೆ ಮಾವಿನಕಾಯಿ ಉಪ್ಪಿನಕಾಯಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರಲಿದೆ.
ಹಾಗೆ ಉಪ್ಪಿನಕಾಯಿಯ ವಿಧಗಳಲ್ಲಿ ಮಾವಿನಕಾಯಿ ಹಾಕಿ ಮಾಡುವ ಉಪ್ಪಿನಕಾಯಿ ಬಹಳ ರುಚಿ ನೀಡಲಿದೆ. ಊಟದೊಂದಿಗೆ ಇದೊಂದು ಪದಾರ್ಥ ಇದ್ದರೆ ಸಾಕಾಗುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮಾವಿನಕಾಯಿ ಮಿಡಿಗಳು ಮಾರಾಟವಾಗುತ್ತಿವೆ. ಮನೆಯಲ್ಲಿ ಈ ಉಪ್ಪಿನಕಾಯಿ ಹಾಕಿ ವರ್ಷವಿಡಿ ಸವಿಯಲು ಇಡಬಹುದು. ಹಾಗೆ ಇದನ್ನು ಮಾಡುವುದು ಸಹ ಬಹಳ ಸುಲಭ.

ಮಾರುಕಟ್ಟೆಯಲ್ಲಿ ಸಿಗುವ ಮಾವಿನಕಾಯಿ ಉಪ್ಪಿನಕಾಯಿಯು ರುಚಿ ನೀಡಲಿದೆ. ಹಾಗೆ ಮನೆಯಲ್ಲಿ ಮಾಡಿದರೆ ಹಲವು ದಿನ ಇಟ್ಟು ಸವಿಯಬಹುದು. ಅದರಲ್ಲೂ ಸಾಂಪ್ರದಾಯಿಕ ವಿಧಾನದಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದರೆ ವರ್ಷವಿಡಿ ಹಾಳಾಗದಂತೆ ಇಡಬಹುದು. ಹಾಗೆ ಉಪ್ಪಿನಕಾಯಿ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಖಾದ್ಯ ಆಗಿರಲಿದೆ. ಹಾಗಾದ್ರೆ ಈ ಮಾವಿನ ಮಿಡಿ ಉಪ್ಪಿನಕಾಯಿ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ಮಾವಿನ ಮಿಡಿ ಉಪ್ಪಿನಕಾಯಿ ಮಾಡುವುದು ಹೇಗೆ?
ಮಾವಿನಕಾಯಿ
ಖಾರದ ಮೆಣಸು
ಇಂಗು
ಸಾಸಿವೆ
ಎಣ್ಣೆ
ಮಾವಿನಮಿಡಿ ಉಪ್ಪಿನಕಾಯಿ ಮಾಡುವ ವಿಧಾನವೇನು?
ಮೊದಲಿಗೆ ಮಾವಿನ ಮಿಡಿಗಳನ್ನು ತೊಟ್ಟು ಇಟ್ಟುಕೊಂಡು ಕತ್ತರಿಸಿಕೊಳ್ಳಿ. ಅನಂತರ ಅದನ್ನು ತೊಳೆದು ನೆರಳಿನಲ್ಲಿ ಸ್ವಲ್ಪ ಒಣಗಿಸಬೇಕು ಇಲ್ಲವೆ ಬಟ್ಟೆಯಿಂದ ಒರಸಬೇಕು. ಇದರಲ್ಲಿ ನೀರಿನ ಅಂಶ ಇರಬಾರದು. ನಂತರ ಒಂದು ಗಾಜಿನ ಬಾಟಲಿ ಅಥವಾ ಭರಣಿಯಲ್ಲಿ ತುಂಬಿ ಅದಕ್ಕೆ ಉಪ್ಪು ತುಂಬಿ ಇಡಬೇಕು. ಸುಮಾರು 15 ದಿನ ಆದರೂ ಈ ಉಪ್ಪಿನಕಾಯಿಯನ್ನು ಉಪ್ಪಿನೊಂದಿಗೆ ನೆನೆಯಲು ಬಿಡಬೇಕು.
15 ದಿನದ ಬಳಿಕ ಮಾವಿನಮಿಡಿಗಳನ್ನು ಉಪ್ಪು ನೀರಿನಿಂದ ಬೇರ್ಪಡಿಸಿ ತೆಗೆದುಕೊಳ್ಳಿ. ಅನಂತರ ಈ ಮಿಡಿಗಳನ್ನು ಒಂದು ಬಟ್ಟೆಯ ಮೇಲೆ ಹರಡಿಕೊಳ್ಳಿ. ಇದಕ್ಕೆ ಬ್ಯಾಡಗಿ ಮೆಣಸು ಹಾಗೂ ಖಾರದ ಮೆಣಸನ್ನು ಸಮ ಪ್ರಮಾಣಲ್ಲಿ ತೆಗೆದುಕೊಳ್ಳಿ. ಈಗ ಚೆನ್ನಾಗಿ ಒಣಗಿಸಿಟ್ಟ ಈ ಮೆಣಸನ್ನು ರುಬ್ಬಿಕೊಳ್ಳಬೇಕು. ಮಿಕ್ಸಿ ಜಾರ್‌ಗೆ ಒಣ ಮೆಣಸು ಹಾಗೆ ಸಾಸಿವೆಯನ್ನು ಹಾಕಿ ರುಬ್ಬಿಕೊಳ್ಳಬೇಕು. ಇದು ನುಣ್ಣಗೆ ಪುಡಿಯಾಗಬೇಕು.
ಈ ಮಸಾಲೆಯನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಚೂರು ಅರಶಿಣ ಪುಡಿ ಸೇರಿಸಿ ಬಳಿಕ ಮಾವಿನ ಕಾಯಿ ತೆಗೆದ ಉಪ್ಪು ನೀರು ಇದಕ್ಕೆ ಹಾಕಿ ಮತ್ತೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಈ ಖಾರವನ್ನು ಹಾಕಿಟ್ಟುಕೊಳ್ಳಿ. ಅನಂತರ ಈ ಖಾರಕ್ಕೆ ಹಾಕಿಕೊಳ್ಳಿ. ಅನಂತರ ಚೆನ್ನಾಗಿ ಮಿಕ್ಸ್ ಮಾಡಿ. ಖಾರ ಚೆನ್ನಾಗಿ ಮಿಡಿಗಳಿಗೆ ಹಿಡಿಯಬೇಕು.
ಅನಂತರ ಈ ಮಿಡಿಗಳನ್ನು ಗಾಜಿನ ಅಥವಾ ಭರಣಿಯೊಳಗೆ ಸೇರಿಸಿ ಚೆನ್ನಾಗಿ ಒತ್ತಿ ಇಡಬೇಕು. ಮುಚ್ಚಳ ಚೆನ್ನಾಗಿ ಮುಚ್ಚಿ ಇಡಬೇಕು. 15 ದಿನಗಳ ಕಾಲ ಮುಚ್ಚಳ ತೆರೆಯಬಾರದು. ಅನಂತರ ಇದನ್ನು ಸವಿಯಲು ಬಳಸಬಹುದು. ನೀವು ಸಹ ಈ ರೀತಿ ವಿಧಾನದಲ್ಲಿ ಬಳಸಿ ಮಾಡಿ ನೋಡಿ.



Click it and Unblock the Notifications