Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತರಕಾರಿ ಇಲ್ಲದಿದ್ದರೆ ಈ ರೀತಿ ಶೇಂಗಾ ತಂಬುಳಿ ಮಾಡಿ! 5 ನಿಮಿಷ ಸಾಕು
ನೀವು ಊಟದ ಜೊತೆ ಯಾವುದಾದರು ತರಕಾರಿಯ ಹುಳಿ ಸವಿಯಲು ಇಷ್ಟಪಡುತ್ತೀರಿ. ಅದ್ರಲ್ಲೂ ಕೆಲವು ಸಮಯದಲ್ಲಿ ನೀವು ಬಹಳ ಗಡಿಬಿಡಿಯಲ್ಲಿದ್ದಾಗ ಸುಲಭವಾಗಿ ಯಾವುದಾದರು ಖಾದ್ಯ ಮಾಡಿ ಸವಿಯಲು ಮುಂದಾಗುವುದು ನೋಡಬಹುದು. ಇನ್ನು ಅನ್ನದ ಜೊತೆಗೆ ಹಲವು ರೀತಿಯ ಹುಳಿಯನ್ನು ಮಾಡಿ ಸವಿಯುವುದು ಕೂಡ ಇದೆ. ಹಾಗಾದ್ರೆ ಸುಲಭವಾಗಿ ಮಾಡಲು ಮುಂದಾದಾಗ ನಿಮಗೆ ತಕ್ಷಣಕ್ಕೆ ಹೊಳೆಯುವುದು ತಿಳಿ ಸಾರು ಇಲ್ಲವೆ ರಸಂ ಆಗಿರಲಿದೆ.
ಹಾಗೆ ಮನೆಯಲ್ಲಿ ಯಾವುದೇ ತರಕಾರಿಗಳು ಇಲ್ಲದೆ ಇದ್ದಾಗ ನೀವು ಯಾವುದಾದರು ಹುಳಿ ಮಾಡಲು ಮುಂದಾಗುವುದಾದರೆ ಈ ರೀತಿ ಶೇಂಗಾ ಹುಳಿ ಮಾಡಬಹುದು. ಶೇಂಗಾದಿಂದ ನೀವು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯುವುದು ಸಾಮಾನ್ಯ. ಆದ್ರೆ ಈ ರೀತಿ ಸ್ಪೆಷಲ್ ಆಗಿ ಶೇಂಗಾ ಹುಳಿ ಮಾಡಿ ಸವಿದು ನೋಡಿ.

ಅದ್ರಲ್ಲೂ ಈ ರೀತಿಯಾಗಿ ಸುಲಭವಾಗಿ ಹುಳಿ ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಈ ಹುಳಿ ಮಾಡಲು ಯಾವುದೇ ತರಕಾರಿಯಾಗಲಿ, ಅಥವಾ ಹೆಚ್ಚು ಮಸಾಲೆಯ ಅಗತ್ಯವೂ ಇರುವುದಿಲ್ಲ, ಕಡಿಮೆ ವಸ್ತುಗಳ ಬಳಸಿಕೊಂಡು ತಕ್ಷಣಕ್ಕೆ ಮಾಡಿ ಮುಗಿಸಬಹುದು. ಹೆಚ್ಚಾಗಿ ಈ ಹುಳಿಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವುದು ನೋಡಬಹುದು.
ಹಾಗಾದ್ರೆ ಅನ್ನದ ಜೊತೆಗೆ ಈ ರೀತಿಯಾಗಿ ಸವಿಯಲು ಈ ಶೇಂಗಾ ಹುಳಿ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶೇಂಗಾ ಹುಳಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕಾಗುತ್ತದೆ?
- ಶೇಂಗಾ
- ಒಣ ಮೆಣಸು
- ಸಾಸಿವೆ
- ಜೀರಿಗೆ
- ತುರಿದ ಒಣ ಕೊಬ್ಬರಿ
- ಹಸಿ ಮೆಣಸು
- ಬೆಳ್ಳುಳ್ಳಿ
- ಹುರಿಗಡಲೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಉಪ್ಪು
- ಎಣ್ಣೆ
- ಹುಣಸೆ ಹುಳಿ
- ಬೆಲ್ಲ
- ಈರುಳ್ಳಿ
ಶೇಂಗಾ ಹುಳಿ ಮಾಡುವ ವಿಧಾನವೇನು?
ಮೊದಲು ನಿಮಗೆ ಎಷ್ಟು ಬೇಕೋ ಅಷ್ಟು ಪ್ರಮಾಣದ ಶೇಂಗಾ ತೆಗೆದುಕೊಂಡು ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದು ಅದರ ಸಿಪ್ಪೆ ತೆಗೆದು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಈರುಳ್ಳಿ, ಒಣ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಹುರಿದುಕೊಂಡಿದ್ದ ಶೇಂಗಾ, ಹುರಿಗಡಲೆ ಸ್ವಲ್ಪ, ಜೀರಿಗೆ, ಒಣ ಕೊಬ್ಬರಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಬೆಳ್ಳುಳ್ಳಿ ಹಾಕಿ ಮೊದಲು ತರಿ ತರಯಾಗಿ ಎರಡು ಸುತ್ತು ರುಬ್ಬಿ ಬಳಿಕ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಈಗ ರುಬ್ಬಿಕೊಂಡ ಈ ಪೇಸ್ಟ್ ಅನ್ನು ತಣ್ಣಗಾಗಲು ಇಟ್ಟಿದ್ದ ಒಗ್ಗರಣೆಯಲ್ಲಿ ಹಾಕಿಕೊಳ್ಳಿ. ಹಾಗೆ ಸ್ವಲ್ಪ ಪುಡಿ ಬೆಲ್ಲ, ಹುಣಸೆ ಹುಳಿಯ ರಸ, ಮಿಕ್ಸಿ ಜಾರ್‌ಗೆ ನೀರು ಹಾಕಿ ಅದನ್ನು ಕೂಡ ಈ ಒಗ್ಗರಣೆಗೆ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಒಲೆ ಮೇಲೆ ಇಡುವ ಅವಶ್ಯಕತೆ ಇರುವುದಿಲ್ಲ. ಹಾಗೆ ಮಿಕ್ಸ್ ಮಾಡಿ ಉಪ್ಪು ಬೇಕಿದ್ದರೆ ಹಾಕಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಶೇಂಗಾ ಹುಳಿ ರೆಡಿಯಾಗುತ್ತದೆ. ಅನ್ನದ ಜೊತೆಗೆ ಸವಿಯಲು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications