Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗಿನ ತಿಂಡಿಗೆ ಶ್ಯಾವಿಗೆ ಉಪ್ಪಿಟ್ಟು..! ಟ್ರೈ ಮಾಡಿ ರುಚಿ ನೋಡಿ..!
ನೀವು ಉಪ್ಪಿಟ್ಟು ಅಂದ್ರೆ ಇಷ್ಟಪಡುವುದಿಲ್ಲವೇ? ಬಹುಪಾಲು ಮಂದಿ ಉಪ್ಪಿಟ್ಟು ಅಂದ್ರೆ ಮೂಗು ಮುರಿಯುತ್ತಾರೆ. ಅದರಲ್ಲೂ ಬೆಳಗ್ಗೆಯ ತಿಂಡಿಗೆ ಉಪ್ಪಿಟ್ಟು ಮಾಡಿದರೆ ಹೊರಗೆ ಹೋಟೆಲ್ಗೆ ಹೋಗಿ ತಿಂಡಿ ತಿನ್ನುವವರೂ ಇದ್ದಾರೆ. ಆದ್ರೆ ಇನ್ನೂ ಕೆಲವರಿಗೆ ಉಪ್ಪಿಟ್ಟು ಅಂದ್ರೆ ಪ್ರಾಣ.
ಆದ್ರೆ ಈ ಉಪ್ಪಿಟ್ಟಿನಲ್ಲಿ ಹತ್ತಾರು ರೀತಿಯ ವಿಧಗಳಿವೆ ಎಂಬುದು ನಿಮಗೆ ಗೊತ್ತಿದ್ಯಾ? ಉಪ್ಪಿಟ್ಟನ್ನು ಹಲವಾರು ರೀತಿ ಮಾಡಬಹುದು. ಕೆಲವು ಉಪ್ಪಿಟ್ಟನ್ನು ನೀವು ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತೆ. ಅದರಲ್ಲೂ ಅವರೇಕಾಳು ಉಪ್ಪಿಟ್ಟು, ಕ್ಯಾರೆಟ್ ಉಪ್ಪಿಟ್ಟು, ಪನೀರ್ ಉಪ್ಪಿಟ್ಟು ಎಂಬ ಹೊಸ ಹೊಸ ರೀತಿಯ ತಿಂಡಿ ಸಹ ಈಗ ಸೇರಿಕೊಂಡಿದೆ.

ಇನ್ನು ಈ ಉಪ್ಪಿಟ್ಟಿನಲ್ಲಿ ಶ್ಯಾವಿಗೆ ಉಪ್ಪಿಟ್ಟು ಬಹುಪಾಲು ಮಂದಿ ಇಷ್ಟಪಡುತ್ತಾರೆ. ರವೆ ಬದಲಿಗೆ ಶ್ಯಾವಿಗೆ ಹಾಕಿ ಮಾಡುವ ಉಪ್ಪಿಟ್ಟು ಎಲ್ಲರಿಗೂ ಇಷ್ಟವಾಗುತ್ತದೆ. ಶ್ಯಾವಿಗೆಯ ವಿಭಿನ್ನ ರುಚಿಯಿಂದಾಗಿ ಈ ಉಪ್ಪಿಟ್ಟು ಸಿಕ್ಕಾಪಟ್ಟೆ ರುಚಿ ನೀಡಲಿದೆ.
ಆದರೆ ಈ ರೀತಿ ಉಪ್ಪಿಟ್ಟು ನಾವು ಮದುವೆ ಸಮಾರಂಭದಲ್ಲಿ, ಹಬ್ಬ ಹರಿದಿನಲ್ಲಿ ಸವಿದಿರುತ್ತೇವೆ. ಆದ್ರೆ ಈ ಉಪ್ಪಿಟ್ಟು ಮಾಡೋದು ತುಂಬಾನೆ ಸುಲಭ. ನೀವು ಒಮ್ಮೆ ಮಾಡಿ ನೋಡಿದರೆ ಇದನ್ನೇ ಯಾವಾಗಲು ಮಾಡಲು ಮುಂದಾಗುತ್ತಿರಿ. ಹಾಗಾದ್ರೆ ನಾವಿಂದು ಈ ಶ್ಯಾವಿಗೆ ಬಳಸಿ ರುಚಿಕರ ಉಪ್ಪಿಟ್ಟನ್ನು ಮಾಡೋದು ಹೇಗೆ ಎಂಬುದನ್ನು ನೋಡೋಣ. ಈ ಶ್ಯಾವಿಗೆ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳೇನು?, ಶ್ಯಾವಿಗೆ ಉಪ್ಪಿಟ್ಟು ಮಾಡುವುದು ಹೇಗೆ? ಪಾಕವಿಧಾನವೇನು ಎಂಬುದನ್ನು ತಿಳಿಯೋಣ ಬನ್ನಿ.
ಶ್ಯಾವಿಗೆ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು
- ಶ್ಯಾವಿಗೆ - 200 ಗ್ರಾಮ್
- ಗೋಡಂಬಿ - 5
- ಹಸಿಮೆಣಸು - 3
- ಕಡಲೆಬೇಳೆ- 1 ಸ್ಪೂನ್
- ಕರಿಬೇವು
- ಹಸಿ ಬಟಾಣಿ- 50 ಗ್ರಾಮ್
- ಬೀನ್ಸ್- 2
- ಕ್ಯಾರೆಟ್- 2
- ಈರುಳ್ಳಿ-1
- ಎಣ್ಣೆ
- ಉಪ್ಪು
- ಕೊತ್ತಂಬರಿ
ಶ್ಯಾವಿಗೆ ಉಪ್ಪಿಟ್ಟು ಮಾಡುವ ವಿಧಾನ
ಮೊದಲು ಶ್ಯಾವಿಗೆಯನ್ನು ಹುರಿದುಕೊಳ್ಳಬೇಕು. ಉಪ್ಪಿಟ್ಟಿಗೆ ರವೆ ಹುರಿದುಕೊಂಡಂತೆಯೇ ಈ ಶ್ಯಾವಿಗೆಯನ್ನೂ ಸಹ ಹುರಿದುಕೊಳ್ಳಬೇಕು. ಹೆಚ್ಚು ಹೊತ್ತು ಹುರಿದುಕೊಳ್ಳಬೇಡಿ. ಶ್ಯಾವಿಗೆ ಬ್ರೌನ್ ಕಲರ್ ಬರುವವರೆಗೂ ಹುರಿದುಕೊಳ್ಳಿ. ಶ್ಯಾವಿಗೆ ಹುರಿದು ಬದಿಗಿಟ್ಟುಕೊಳ್ಳಿ.
ನಂತರ ಅದೇ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಈರುಳ್ಳಿ, ಕಡಲೆ ಬೇಳೆ, ಗೋಡಂಬಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಹಸಿಮೆಣಸು, ಕರಬೇವಿನ ಸೊಪ್ಪು ಹಾಕಿಕೊಳ್ಳಿ, ಎಲ್ಲಾ ಕರಕಾರಿಯನ್ನೂ ಸಹ ಹಾಕಿಕೊಂಡು ಮಿಕ್ಸ್ ಮಾಡಿ 10 ನಿಮಿಷ ಬೇಯಿಸಿಕೊಳ್ಳಿ.
10 ನಿಮಿಷದ ಬಳಿಕ ಮುಚ್ಚಳ ತೆಗೆದು ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಶ್ಯಾವಿಗೆ ತೆಗೆದುಕೊಂಡ ಗ್ಲಾಸ್ನಲ್ಲಿಯೇ ಅಳತೆಯಾಗಿ ಒಂದೂವರೆ ಲೋಟ ನೀರು ಹಾಕಿಕೊಳ್ಳಿ. ಇದಕ್ಕೆ ಕೊತ್ತಂಬರಿ ಸುಪ್ಪು ಹಾಕಿಕೊಂಡು ಮುಚ್ಚಳ ಮುಚ್ಚಿ, 3 ನಿಮಿಷ ಆದ ಬಳಿಕ ಅದಕ್ಕೆ ಶ್ಯಾವಿಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಶ್ಯಾವಿಗೆ ಹಾಕಿದ ಬಳಿಕ ಅದಕ್ಕೆ ಚೆನ್ನಾಗಿ ತಿರುಗಿಸಿಕೊಳ್ಳಿ. ಶ್ಯಾವಿಗೆ ಹಾಕಿ 3 ನಿಮಿಷದ ವರೆಗೂ ತಿರುಗಿಸಿಕೊಳ್ಳಿ, ಇಷ್ಟಾದರೆ ನಿಮ್ಮ ಮುಂದೆ ಶ್ಯಾವಿಗೆ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.
ಈ ಉಪ್ಪಿಟ್ಟು ಮಕ್ಕಳಿಂದ ಹಿಡಿದು ಹಿರಿಯರು ಸಹ ಸವಿಯಬಹುದು. ಏಕೆಂದರೆ ಅತ್ಯಂತ ಮೃದುವಾಗಿದ್ದು ಯಾರು ಬೇಕಾದರು ಸವಿಯಬಹುದು. ಶ್ಯಾವಿಗೆ ಉಪ್ಪಿಟ್ಟಿನ ಜೊತೆ ಕಾಯಿ ಚಟ್ನಿ ಒಳ್ಳೆಯ ಕಾಂಬಿನೇಷನ್ ಆಗಿರಲಿದೆ. ನೀವು ಗಮನಿಸಬೇಕಾದ ಅಂಶವೆಂದರೆ ನೀವು ಯಾವ ಗ್ಲಾಸ್ನಲ್ಲಿ ಶ್ಯಾವಿಗೆ ಅಳತೆ ಮಾಡದ್ಧೀರೊ ಅದೇ ಅಳತೆಯ ಗ್ಲಾಸ್ನಲ್ಲಿ ಒಂದೂವರೆ ಪಟ್ಟು ನೀರು ಇಡಬೇಕು.



Click it and Unblock the Notifications