Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬದಲ್ಲಿ ಮಾಡಿ ಮದುವೆ ಮನೆ ರುಚಿಯ ಪಾಯಸ.! ವಿಧಾನ ಇಲ್ಲಿದೆ..!
ಹಬ್ಬ ಅಂದ್ರೇನೆ ಅಲ್ಲಿ ಸಿಹಿ ಇರಬೇಕು. ಸಿಹಿ ಅಂದ ಕೂಡಲೇ ಹತ್ತಾರು ರೀತಿಯ ಖಾದ್ಯಗಳು ನೆನಪಿಗೆ ಬರುತ್ತವೆ. ಹಾಗೆ ಹಬ್ಬದಲ್ಲಿ ನಾವು ಯಾವುದಾದರು ಒಂದು ಬಗೆಯ ಪಾಯಸ ಮಾಡಿಯೇ ಮಾಡುತ್ತೇವೆ. ಹಬ್ಬದ ಊಟದಲ್ಲಿ ಬಾಳೆ ಎಲೆಯ ಮೇಲೆ ಪಾಯಸ ಇಲ್ಲ ಎಂದರೆ ಹಬ್ಬವೇ ಪೂರ್ಣ ಆದಂತೆ ಆಗುವುದಿಲ್ಲ.
ಹಾಗೆ ಹಬ್ಬದಲ್ಲಿ ನಾವು ಯಾವೆಲ್ಲಾ ತಿಂಡಿಗಳ ಮಾಡಿದರೂ ಪಾಯಸ ಇಲ್ಲ ಎಂದರೆ ಹಬ್ಬಕೊಂದು ಕಳೆ ಬರುವುದಿಲ್ಲ. ಪಾಯಸದಲ್ಲಿ ಹತ್ತಾರು ಬಗೆಗಳಿವೆ. ನಾವು ಒಂದಿಷ್ಟು ಬಗೆಯ ಪಾಯಸ ಸವಿದಿರುತ್ತೇವೆ, ಅದರಲ್ಲಿ ಸಬ್ಬಕ್ಕಿ ಪಾಯಸ, ಶಾವಿಗೆ ಪಾಯಸ, ಪಾಸ್ತಾ, ಗೋಧಿ ಕಡಿ ಪಾಯಸ, ಬೇಳೆ ಪಾಯಸ, ಅಕ್ಕಿ ಪಾಯಸ ಹೀಗೆ ಒಂದಿಷ್ಟು ಬಗೆಯ ಪಾಯಸ ಮಾಡಿ ಸವಿದಿರುತ್ತೇವೆ.

ಪಾಯಸ ಎಂದಕೂಡಲೆ ನಾವಿ ಮದುವೆ ಮನೆಯಲ್ಲಿ ಸವಿದಿರುವಂತಹ ರುಚಿ ರುಚಿಯ ಪಾಯಸ ನೆನಪಿಗೆ ಬರುತ್ತದೆ. ಮದುವೆ ಮನೆಯ ಊಟದಲ್ಲಿ ಪಾಯಸ ಅತ್ಯಂತ ರುಚಿಕರವಾಗಿರುತ್ತೆ. ಶಾವಿಗೆಯ ಪಾಯಸದ ರುಚಿಗೆ ಮನಸೋಲದವರೇ ಇಲ್ಲ. ಪಾಯಸ ಇಷ್ಟವಿಲ್ಲ ಅನ್ನುವವರು ಕೂಡ ಈ ಪಾಯಸವನ್ನು ಸವಿದು ಬಾಳೆ ಎಲೆ ಖಾಲಿ ಮಾಡಿಡುತ್ತಾರೆ.
ಹಾಗಾದ್ರೆ ಈ ದೀಪಾವಳಿಯ ಸಂದರ್ಭದಲ್ಲಿ ನಾವು ಮದುವೆ ಮನೆ ರುಚಿಯಲ್ಲಿ ಈ ಶಾವಿಗೆ ಪಾಯಸ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಶಾವಿಗೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು ಏನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಎಂಬೆಲ್ಲಾ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಶಾವಿಗೆ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು
ಶಾವಿಗೆ
ಹಾಲು
ತುಪ್ಪ
ಗೋಡಂಬಿ
ದ್ರಾಕ್ಷಿ
ಏಲಕ್ಕಿ ಪುಡಿ
ಶಾವಿಗೆ ಪಾಯಸ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎರಡೂವರೆ ಕಪ್ ನೀರು ಹಾಕಿ ಬಿಸಿ ಮಾಡಲು ಬಿಡಿ. ಈ ಕಪ್ ಅನ್ನು ಅಳತೆಗಾಗಿ ಇಟ್ಟುಕೊಳ್ಳಿ. ಈಗ ಇನ್ನೊಂದು ಕಡೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ತುಪ್ಪ ಬಿಸಿಯಾದ ಬಳಿಕ ಗೋಡಂಬಿ, ದ್ರಾಕ್ಷಿ ಹಾಕಿ ಬಿಸಿಮಾಡಿಕೊಂಡು ತೆಗೆದಿಟ್ಟುಕೊಳ್ಳಿ.
ಈಗ ನೀರು ತೆಗೆದುಕೊಂಡಿದ್ದ ಕಪ್‌ನಲ್ಲಿಯೇ ಒಂದು ಕಪ್ ಶಾವಿಗೆ ತೆಗೆದುಕೊಂಡು ಅದೇ ಪಾತ್ರೆಗೆ ಹಾಕಿ ಫ್ರೈ ಮಾಡಿಕೊಳ್ಳಿ. ಕಂದು ಬಣ್ಣಕ್ಕೆ ತಿರುಗುವವರೆಗೂ ಶಾವಿಗೆ ಬಿಸಿ ಮಾಡಿ. ಈಗ ಒಲೆ ಮೇಲೆ ಇಟ್ಟು ಬಿಸಿ ನೀರನ್ನು ಈ ಶಾವಿಗೆಗೆ ಹಾಕಿ ಮಿಕ್ಸ್ ಮಾಡಿ. ಈಗ ಒನ್ನೊಂದು ಒಲೆ ಮೇಲೆ ಮೂರು ಕಪ್ ಹಾಲು ಇಟ್ಟು ಬಿಸಿ ಮಾಡಿಕೊಳ್ಳಿ.
ಈಗ ಶಾವಿಗೆ ಕೂಡ ಸ್ವಲ್ಪ ಹೊತ್ತು ಬೇಯಿಸಿಕೊಳ್ಳಬೇಕು. ಈಗ ಶಾವಿಗೆಗೆ ಬಿಸಿ ಮಾಡಿಕೊಂಡಿರುವ ಹಾಲನ್ನು ಹಾಕಿಕೊಂಡು ತಿರುಗಿಸಿಕೊಳ್ಳಿ. ಹಾಗೆ ಕುದಿ ಬರಲು ಬಿಡಿ. ಶಾವಿಗೆ ಕುದಿಬರಲು ಆರಂಭಿಸಿದಾಗ ಈಗ ಮುಕ್ಕಾಲು ಕಪ್ ಸಕ್ಕರೆಯನ್ನು ಕೂಡ ಇದಕ್ಕೆ ಹಾಕಿ ಕಲಸಿಕೊಳ್ಳಿ. ಸಕ್ಕರೆ ಕರಗುವಷ್ಟು ಕಾಲ ಕುದಿಸಿಕೊಳ್ಳಿ. ಈ ವೇಳೆ ಪಾಯಸ ಗಟ್ಟಿಯಾಗಲು ಆರಂಭಿಸಲಿದೆ.
ಈಗ ಈ ಪಾಯಸಕ್ಕೆ ಹುರಿದುಕೊಂಡಿರುವ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿ ಪಾಯಸಕ್ಕೆ ತಟ್ಟೆ ಮುಚ್ಚಿ ಕೆಲ ಹೊತ್ತು ಬಿಡಬೇಕು. ಇದು ದಪ್ಪವಾಗುತ್ತಾ ಹೋಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಮದುವೆ ಮನೆ ರುಚಿಯಲ್ಲಿ ಶಾವಿಗೆ ಪಾಯಸ ರೆಡಿಯಾಗುತ್ತದೆ. ನೀವು ಕೂಡ ಹಬ್ಬದಲ್ಲಿ ಇದೇ ವಿಧಾನದಲ್ಲಿ ಪಾಯಸ ಮಾಡಿ ನೋಡಿ.



Click it and Unblock the Notifications