Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಬ್ಬದ ಸಂಭ್ರಮ ಹೆಚ್ಚಿಸುವ ಶಾವಿಗೆ ಸಾಬುದಾನಿ ಪಾಯಸ ಮಾಡಿ..! ಇಲ್ಲಿದೆ ಸುಲಭದ ವಿಧಾನ!!
ಹಬ್ಬಗಳ ಸೀಸನ್ ಆರಂಭವಾಗುತ್ತಿದೆ. ಹೀಗಾಗಿ ಮನೆಯಲ್ಲಿ ಸಿಹಿ ತಿಂಡಿಗಳು, ಕರಿದ ತಿಂಡಿಗಳು, ಪಾಯಸದಂತಹ ಖಾದ್ಯ ಮಾಡುವುದು ಕಾಮನ್. ಅದ್ರಲ್ಲೂ ಪಾಯಸ ಎಲ್ಲರ ಮನೆಯಲ್ಲೂ ಮಾಡುವ ಖಾದ್ಯ. ಸಣ್ಣ ಪುಟ್ಟ ವಿಶೇಷಗಳಿರಲಿ, ಪೂಜೆ ಇರಲಿ ಇಲ್ಲವೆ ಅತಿಥಿಗಳ ಆಗಮನವಾದರೆ ಅವರಿಗೆ ಪಾಯಸ ಸವಿಯಲು ನೀಡುವುದು ಸಾಮಾನ್ಯವಾಗಿ ಎಲ್ಲರು ಮಾಡುವ ಕೆಲಸವಾಗಿದೆ.
ಹಾಗೆ ಪಾಯಸದಲ್ಲೂ ಹತ್ತಾರು ಬಗೆಗಳಿವೆ. ಒಂದೊಂದು ಬಗೆಯೂ ಒಂದೊಂದು ರುಚಿ ನೀಡಲಿವೆ. ಒಂದಿಷ್ಟು ರುಚಿಯ ಪಾಯಸ ನೀವು ಕೂಡ ಮಾಡಿ ಸವಿದಿರುತ್ತೀರಿ. ಹಬ್ಬದಲ್ಲಂತು ಪಾಯಸ ಮಾಡಿಯೇ ಮಾಡುತ್ತಾರೆ. ಶಾವಿಗೆ ಪಾಯಸ, ಬೇಳೆ ಪಾಸಯ, ಅಕ್ಕಿ ಪಾಯಸ, ಸಾಬುದಾನಿ ಪಾಯಸ, ಪಾಸ್ತಾ ಪಾಯಸ ಹೀಗೆ ಹತ್ತಾರು ಬಗೆಯ ಪಾಯಸ ರೆಡಿ ಮಾಡಿ ಸವಿದಿರುತ್ತೀರಿ.

ಇನ್ನು ಮಕ್ಕಳಿಗಂತು ಪಾಯಸ ಅಂದರೆ ಪಂಚಪ್ರಾಣ. ನಾವಿಂದು ಈ ಹಬ್ಬದ ಸಮಯದಲ್ಲಿ ಮಾಡುವಂತಹ ಅದ್ಭುತ ರುಚಿಯ ಪಾಯಸವನ್ನು ನಾವಿಂದು ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಶಾವಿಗೆ ಹಾಗೂ ಸಾಬುದಾನ ಹಾಕಿ ಮಾಡುವಂತಹ ರುಚಿ ರುಚಿಯ ಬ್ರಾಹ್ಮಣರ ಶೈಲಿಯ ಪಾಯಸ ಇದು.
ಹಾಗಾದ್ರೆ ಈ ಶಾವಿಗೆ ಸಾಬುದಾನಿ ಪಾಯಸ ಮಾಡುವುದು ಹೇಗೆ? ಈ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಶಾವಿಗೆ ಸಾಬುದಾನಿ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಶಾವಿಗೆ
- ಹಾಲು
- ಸಬ್ಬಕ್ಕಿ
- ಗೋಡಂಬಿ
- ದ್ರಾಕ್ಷಿ
- ಏಲಕ್ಕಿ ಪುಡಿ
- ಬಾದಾಮಿ ಪುಡಿ
- ಸಕ್ಕರೆ
- ತುಪ್ಪ
ಶಾವಿಗೆ ಸಾಬುದಾನಿ ಪಾಯಸ ಮಾಡುವ ವಿಧಾನವೇನು?
ಸಬ್ಬಕ್ಕಿಯನ್ನು ತೊಳೆದು ಬಳಿಕ ನೀರಿನಲ್ಲಿ ಹಾಕಿ ನೆನೆಸಿಡಬೇಕು ಅದೇ ಅಳತೆಯಷ್ಟು ಶಾವಿಗೆ ತೆಗೆದುಕೊಳ್ಳಿ. ಈಗ ಒಂದು ಬಾಣಲೆ ಇಟ್ಟುಕೊಂಡು ಅದಕ್ಕೆ ತುಪ್ಪ ಹಾಕಿಕೊಳ್ಳಿ. ಈ ತುಪ್ಪಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಗೋಡಂಬಿ, ದ್ರಾಕ್ಷಿ ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ ಶಾವಿಗೆ ಹಾಕಿಕೊಂಡು ಹುರಿದುಕೊಳ್ಳಿ.
ಸುಮಾರು 3 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅನಂತರ ಇದಕ್ಕೆ ನೆನೆಸಿಟ್ಟ ನೀರಿನಿಂದ ತೆಗೆದಿಟ್ಟ ಸಬ್ಬಕ್ಕಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಸಬ್ಬಕ್ಕಿ ಹಾಕಿದ ಬಳಿಕ ಸ್ವಲ್ಪವೇ ನೀರು ಹಾಕಿಕೊಳ್ಳಿ ಇಲ್ಲದಿದ್ದರೆ ತಳ ಹಿಡಿಯಲಿದೆ. ಈಗ ಇದಕ್ಕೆ ಹಾಲನ್ನು ಹಾಕಿಕೊಳ್ಳಿ. ಕಾಯಿಸಿದ ಹಾಲು ಕೂಡ ಬಳಸಬಹುದು.
ಈಗ ಚೆನ್ನಾಗಿ ಕುದಿಬರಲು ಬಿಡಬೇಕು. 10 ನಿಮಿಷ ಸಮಯ ಬೇಕಾಗುತ್ತದೆ. ನಂತರ ಇದಕ್ಕೆ ಏಲಕ್ಕಿ ಪುಡಿ, ಬಾದಾಮಿ ಪುಡಿ, ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಇದಕ್ಕೆ ಫ್ರೈ ಮಾಡಿಕೊಂಡ ದ್ರಾಕ್ಷಿ, ಗೋಡಂಬಿ ಕೂಡ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಘಮ ಘಮ ಪಾಯಸ ರೆಡಿಯಾಗಿರುತ್ತೆ. ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications