Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಕಪ್ ಶಾವಿಗೆ 2 ಸ್ಪೂನ್ ತುಪ್ಪದಲ್ಲಿ ಅದ್ಭುತ ರುಚಿಯ ಶಾವಿಗೆ ಕೇಸರಿ ಬಾತ್ ಮಾಡಿ..!
ಮನೆಯಲ್ಲಿ ಏನಾದರು ವಿಶೇಷ ಅಥವಾ ಹಬ್ಬ, ಪೂಜೆ, ಅತಿಥಿಗಳೂ ಬಂದಾಗ ನಿಮಗೆ ಸಡನ್ ಆಗಿ ಸಿಹಿ ತಿಂಡಿ ಮಾಡಲು ನೆನಪಾಗೋದು ಈ ಕೇಸರಿ ಬಾತು. ಕೇಸರಿ ಬಾತು ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಮತ್ತೆ ಮತ್ತೆ ಹಾಕಿಸಿಕೊಂಡು ಸವಿಯುತ್ತಾರೆ. ಇದರ ರುಚಿಗೆ ಮಾರು ಹೋಗದವರೇ ಇಲ್ಲ. ಈ ಕೇಸರಿ ಬಾತಿನಲ್ಲೂ ಹಲವು ವಿಧಾನಗಳಿವೆ, ಶೈಲಿಗಳಿವೆ ಎಂಬುದು ನಮಗೆ ಗೊತ್ತಿರುವ ವಿಚಾರ.
ಈ ಕೇಸರಿಬಾತ್‌ನ ಒಂದು ವಿಧಾನವಾಗಿರುವ ಶಾವಿಗೆ ಕೇಸರಿ ಬಾತ್ ಕುರಿತಂತೆ ನಾವಿಂದು ತಿಳಿಯೋಣ. ಶಾವಿಗೆಯಲ್ಲಿ ಉಪ್ಪಿಟ್ಟು ಮಾಡಿದರೆ ಆದ ರುಚಿಗೆ ಮತ್ತಷ್ಟು ಉಪ್ಪಿಟ್ಟು ಸವಿಯುವವರನ್ನು ನೋಡಿದ್ದೇವೆ. ಹಾಗೆ ಈ ಶಾವಿಗೆ ಕೇಸರಿಬಾತ್ ಸಹ ಅಷ್ಟೇ ರುಚಿಕರವಾದ ಖಾದ್ಯವಾಗಿದೆ. ಹೀಗಾಗಿ ನೀವು ಮದುವೆ ಮನೆಯಲ್ಲಿ, ವಿಶೇಷ ದಿನದಲ್ಲಿ ಇದನ್ನು ಮಾಡುತ್ತಾರೆ.

ಇನ್ನು ಶಾವಿಗೆ ಕೇಸರಿ ಬಾತ್ ಹಲವು ಹೋಟೆಲ್‌ಗಳ ಸ್ಪೆಷಲ್ ಡಿಶ್ ಆಗಿಯೂ ನಾವು ನೋಡಬಹುದು. ಹಾಗಾದ್ರೆ ನಾವಿಂದು ಈ ಶಾವಿಗೆ ಕೇಸರಿ ಬಾತ್ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಶಾವಿಗೆ ಕೇಸರಿ ಬಾತ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ನೋಡೋಣ.
ಶಾವಿಗೆ ಕೇಸರಿ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಶಾವಿಗೆ - 1 ಕಪ್
- ಸಕ್ಕರೆ - 3/4 ಕಪ್
- ತುಪ್ಪ - 2 ಚಮಚ
- ಗೋಡಂಬಿ
- ದ್ರಾಕ್ಷಿ
- ಏಲಕ್ಕಿ ಪುಡಿ - 1/4 ಟೀಸ್ಪೂನ್
- ಕೇಸರಿ - 1/2 ಚಮಚ
- ಉಪ್ಪು
ಶಾವಿಗೆ ಕೇಸರಿ ಬಾತ್ ಮಾಡುವುದು ಹೇಗೆ?
ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ ಕೊಂಡು ತುಪ್ಪದಲ್ಲ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಶಾವಿಗೆ ಹಾಕಿಕೊಂಡು ಫ್ರೈ ಮಾಡಿ. ಈ ಶಾವಿಗೆಯ ಬಣ್ಣ ಬದಲಾಗುವವರೆಗೂ ಫ್ರೈ ಮಾಡಿ. 10 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ.
ಆದರೆ ನೀವು ರೋಸ್ಟೆಡ್ ಶಾವಿಗೆ ಬಳಸುತ್ತಿದ್ದರೆ 5 ನಿಮಿಷಗಳ ಕಾಲ ಹುರಿದುಕೊಂಡರೆ ಸಾಕಾಗುತ್ತದೆ. ಹುರಿಯುವಾಗ ತುಪ್ಪದ ಘಮಲು ಬರುವಂತೆ ಇರಲಿ. ಈಗ ಶಾವಿಗೆಯನ್ನು ತೆಗೆದು ಒಂದು ಸಣ್ಣ ಬೌಲ್‌ಗೆ ಹಾಕಿ ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಸರಿಯಾಗಿ 2 ಕಪ್ ನೀರು ಹಾಕಿಕೊಳ್ಳಿ. ಇದೇ ಕಪ್‌ನಲ್ಲಿ 1 ಕಪ್ ಶಾವಿಗೆ ತೆಗೆದುಕೊಳ್ಳಿ.
ಈಗ ನೀರಿಗೆ ಸ್ಪಲ್ಪ ಕೇಸರಿ ಬಣ್ಣ ಸೇರಿಸಿ. ಈಗ ತುಪ್ಪದಲ್ಲಿ ಹುರಿದುಕೊಂಡ ಶಾವಿಗೆಯನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಒಣಗುತ್ತಾ ಶಾವಿಗೆ ಬೇಯಲು ಆರಂಭಿಸುತ್ತೆ. 8ರಿಂದ 10 ನಿಮಿಷದ ಬಳಿಕ ಪ್ಲೇಟ್ ಮುಚ್ಚಿ 3 ನಿಮಿಷ ಬಿಟ್ಟರೆ ಶಾವಿಗೆ ಬೇಯುತ್ತದೆ.
ಈಗ ನೀರೆಲ್ಲಾ ಒಣಗಿದ ಬಳಿಕ ಇದಕ್ಕೆ ಸಕ್ಕರೆ ಹಾಕಿಕೊಂಡು ಚೆನ್ನಾಗಿ ಸೇರಿಸಿಕೊಳ್ಳಿ. ಸಕ್ಕರೆ ಚೆನ್ನಾಗಿ ಸೇರಿಸಿ 3 ನಿಮಿಷ ಹಾಗೆ ಬಿಡಿ. ನಂತರ ಏಲಕ್ಕಿ ಪುಡಿ ಸೇರಿಸಿ ಒಂದು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಕ್ಕರೆ ಪಾಕ ಗಟ್ಟಿಯಾಗಲು ಆರಂಭಿಸುತ್ತದೆ. 8 ನಿಮಿಷ ಕುದಿಸಿದ ಬಳಿಕ ಮೊದಲು ಹುರಿದಿಟ್ಟುಕೊಂಡ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಶಾವಿಗೆ ಕೇಸರಿ ಬಾತ್ ರೆಡಿಯಾಗಿರುತ್ತದೆ. ಬೆಳಗ್ಗೆ ತಿಂಡಿಗೆ ಇದಕ್ಕಿಂತ ಅತ್ಯುತ್ತಮ ಖಾದ್ಯ ಯವುದಿರಲು ಸಾಧ್ಯ?. ಹಾಗೆ ಶುಭ ಕಾರ್ಯದಲ್ಲಿ ಈ ಕೇಸರಿ ಬಾತ್ ಹೇಳಿ ಮಾಡಿಸಿದ ಸಿಹಿಯಾಗಿದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications